ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಬಾಯಾರಿಕೆ ಶೀತೋಷ್ಣಗಳನ್ನು ಸಹಿಸುವುದೇ ತಪಸ್ಸು' ಎಂದಿದ್ದಾರೆ. ಧರ್ಮ, ಅರ್ಥ, ಕಮ ಮತ್ತು ಮೋಕ್ಷಗಳ ಸಂಬಂಧವು ತಪಸ್ಸಿನೊಡನೆ ಇದೆ ಗಾರ್ಹಸ್ಥ್ಯ ವಾನಪ್ರಸ್ಥ ಹಾಗೂ ಸಂನ್ಯಾಸ ಈ ಆಶ್ರಮಗಳು ತಪಸ್ಸಿನಲ್ಲಿ ಸೇರಿಕೊಂಡಿವೆ. ಮಾನವನ ಜೀವನವನ್ನು ಕಲ್ಮಶರಹಿತ ಮಾಡಬೇಕಾದರೆ ತಪೋಗ್ನಿಯಿಂದ ದಹಿಸಬೇಕು. ಉಪನಿಷತ್ಕಾರರ ಮತದಂತೆ ತಪಸ್ಸು ವಾನಪ್ರಸ್ಥಾಶ್ರಮದ ಒಂದು ಅವಿಭಾಜ್ಯ ಅಂಗವಾಗಿದೆ.

ತಪಃ ಶ್ರದ್ಧೇ ಯೇ ಹ್ಯುಪವಸಂತ್ಯರಣ್ಯೇ ಶಾಂತಾ ವಿದ್ವಾಂಸೋ ಭೈಕ್ಷ್ಯಚರ್ಯಾಂ
ಚರಂತ: |
ಸೂರ್ಯದ್ವಾರೇಣ ತೇ ವಿರಜಾ: ಪ್ರಯಾಂತಿ ಯತ್ರಾಮತಃ ಸ ಪುರುಷೋsಹ್ಯವ್ಯಯಾತ್ರಾ॥

-ಮಂಡುಕೋಪನಿಷತ್ ೧/೧೧

ಶಾಂತಧೀಮಂತರಾದ ಪುರುಷರು ವನದಲ್ಲಿ ವಾಸಿಸಿ ಭಿಕ್ಷಾವೃತ್ತಿಯನ್ನವ ಲಂಬಿಸಿ ಶ್ರದ್ದೆಯಿಂದ ತಪಸ್ಸನ್ನಾಚರಿಸುತ್ತಾರೆ. ಅವರು ಸೂರ್ಯನ ಮುಖಾಂತರ ಪಾಪರಹಿತರಾಗಿ ಅಮರ ಹಾಗೂ ಅವ್ಯಯ ಪುರುಷನತ್ತ ಸಾಗುತ್ತಾರೆ. ಮಹಾ ನಾರಾಯಣೀಯ ಉಪನಿಷತ್ತಿನಲ್ಲಿ ತಪದ ವ್ಯಾಪಕ ಸ್ವರೂಪವನ್ನು ಕೆಳಗಿನಂತೆ ಬಣ್ಣಿಸಿದ್ದಾರೆ-

ಋತಂ ತಪಃ ಸತ್ಯಂ ತಪಃ ಶ್ರುತಂ ತಪಃ ಶಾಂತಂ ತಪೋ ದಮಸ್ತಪಃ |
ಶಮಸ್ತಪೋ ದಾನಂ ತಪೋ ಯಜ್ಞ ತಪೋ ಭೂರ್ಭವಸ್ಸುವರ್ಬ್ರಹ್ಮೈತದು-

ಪಾಸ್ಯೈತ್ತಪಃ ॥

ಋತ, ಶ್ರುತ, ಸತ್ಯ, ಶಾಂತ, ದಮ, ಶಮ, ದಾನ, ಯಜ್ಞ ಇವೆಲ್ಲ ತಪಗಳಾಗಿದ್ದು ಸಚ್ಚಿದಾನಂದಸ್ವರೂಪಬ್ರಹ್ಮನ ಉಪಾಸನೆಯು ಕೂಡ ಒಂದು ತಪಸ್ಸೇ ಆಗಿದೆ.

“ತಪಸಿ ಸರ್ವಂ ಪ್ರತಿಷ್ಠಿತಂ ತಸ್ಮಾತ್ತಪಃ ಪರಮಂ ವದಂತಿ”

ತಪಸ್ಸಿನಲ್ಲಿ ಎಲ್ಲವೂ ಅಡಕವಾಗಿದೆ; ಆದ್ದರಿಂದ ತಪಸ್ಸು ಶ್ರೇಷ್ಠವೆಂದು ಉಪನಿಷತ್ಕಾರರು ನುಡಿದಿದ್ದಾರೆ. ಧರ್ಮಸೂತ್ರಕಾರರು ಪಾಪದ ಪರಿಹಾರಕ್ಕಾಗಿ ತಪಸ್ಸನ್ನಾಚರಿಸಬೇಕೆಂದಿದ್ದಾರೆ.