ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಶೀರ್ವಾದ, ಹರಕೆಗಳು

೩೫೭



೧. ಕೌಸಲ್ಯೆಯ ಆಶೀರ್ವಾದ

ಅಯೋಧ್ಯಾಕಂಡ/೨೫


ಕೌಸಲ್ಯೆಯು ಬಲು ಕಷ್ಟದಿಂದ ರಾಮನಿಗೆ ವನವಾಸಕ್ಕೆ ಹೋಗಲು
ಅನುಮತಿಯನ್ನು ಕೊಟಟಳು. ರಾಮನಿಗೆ ಶುಭವಾಗಲಿ ಎಂಬ ಭಾವನೆಯಿಂದ
ತನ್ನ ಮಂಗಲಕರ ಆಶೀರ್ವಾದವನ್ನು ಈ ರೀತಿ ಕೊಟ್ಟಳು: “ಹೇ ರಘುವಂಶ
ರಾಜಶ್ರೇಷ್ಠನೇ, ಯಾವ ಧರ್ಮದ ಪಾಲನೆಯನ್ನು ನೀನು ಇಷ್ಟೊಂದು ಶ್ರದ್ಧೆಯಿಂದ,
ನಿಶ್ಚಯದಿಂದ ಮಾಡುತ್ತಿರುವಿಯೋ ಆ ಧರ್ಮವು ಎಲ್ಲ ರೀತಿಯಲ್ಲೂ ನಿನ್ನನ್ನು
ರಕ್ಷಿಸಲು! ಹೇ ಪುತ್ರನೇ, ದೇವಾಲಯದಲ್ಲಿಯ ಯಾವ ದೇವರನ್ನು ನೀನು
ಅರ್ಚಿಸುತ್ತಿರುವಿಯೋ, ಆ ದೇವರು ಮಹರ್ಷಿಗಳೊಡನೆ ಅರಣ್ಯದಲ್ಲಿ ನಿನ್ನನ್ನು
ಕಾಪಾಡಲಿ! ವಿವೇಕಸಂಪನ್ನರಾದ ವಿಶ್ವಾಮಿತ್ರ ಮುನಿಗಳು ನಿನಗೆ ಯಾವ ಅಸ್ತ್ರಗಳನ್ನು
ಕರುಣಿಸಿದ್ದಾರೆಯೋ ಅವು ಗುಣಸಂಪನ್ನನಾದ ನಿನ್ನನ್ನು ರಕ್ಷಿಸಲಿ! ಹೇ
ಪರಾಕ್ರಮಿಯಾದ ಮಗನೇ, ಪಿತೃಸೇವೆ ಮಾತೃಸೇವೆ ಹಾಗೂ ಸತ್ಯನಿರತನಾದ
ನೀನು ಚಿರಂಜೀವಿಯಗು! ಹೇ ನರಪುಂಗವನೇ, ದರ್ಭೆ, ಕುಶ, ಸಮಿಧೆ,
ಯಜ್ಞವೇದಿಕೆ, ದೇವಸ್ಥಾನ, ವಿಪ್ರಸ್ಥಾನ, ಪರ್ವತ, ವೃಕ್ಷ, ಮೊಟಕಾದ ರೆಂಬೆಗಳ
ಮರಗಳು, ಸರೋವರ, ಪಕ್ಷಿ, ಸರ್ಪಗಳು ಹಾಗೂ ಸಿಂಹ ಮೊದಲಾದವುಗಳಿಂದ
ನಿನ್ನ ರಕ್ಷಣೆಯಾಗಲಿ! ಇಂದ್ರಪ್ರಭೃತಿಗಳ ಸಮೇತ ಎಲ್ಲ ಲೋಕಪಾಲರು, ಹನ್ನೆರಡು
ಮಾಸಗಳು, ಆರು ಋತುಗಳು, ಸಂವತ್ಸರಗಳು, ರಾತ್ರಿ-ಹಗಲುಗಳು,
ಮುಹೂರ್ತಕಾಲಗಳು ನಿನ್ನನ್ನು ಕಾಪಾಡಲಿ! ಹೇ ಪುತ್ರನೇ, ಶ್ರುತಿ, ಸ್ಮೃತಿ ಮತ್ತು
ಧರ್ಮವು ನಿನ್ನನ್ನು ರಕ್ಷಿಸಲಿ! ಗಿರಿ, ಸರ್ವಸಮುದ್ರಗಳು, ವರುಣರಾಜ, ಸ್ವರ್ಗ,
ಆಂತರಿಕ್ಷ, ಭೂಮಿ, ಚರಾಚರರನ್ನೊಳಗೊಂಡ ವಾಯು, ಸಕಲ ನಕ್ಷತ್ರಗಳು,
ಅಧಿದೇತೆ ಪ್ರತ್ಯಧಿದೇವತೆಗಳ ಸಮೇತ ಸಕಲಗ್ರಹಗಳು, ಹಗಲಿರುಳು, ಉಷಃಕಾಲ,
ಸಂಧ್ಯಾಕಾಲ, ಕಾಡನ್ನು ಆಶ್ರಯಿಸಿರುವ ನಿನಗೆ ಅಭಯವನ್ನು ನೀಡಲಿ! ಮುನಿವೇಷ
ಧಾರಿಯಾಗಿ ಘನಘೋರ ಅರಣ್ಯವಾಸಿಯಾದ ನಿನಗೆ ದೇವ ಮತ್ತು ದೈತ್ಯರು
ಸುಖದಾಯಕರಾಗಲಿ! ಎಲೈ ಪುತ್ರನೇ, ಘೋರಕುಕರ್ಮಿಗಳಾದ ರಾಕ್ಷಸ ಹಾಗೂ
ಪಿಶಾಚಿ ಮೊದಲಾದ ನರಭಕ್ಷಕರಿಂದ ನಿನಗೆ ಭಯವಾಗದಿರಲಿ! ನರಭಕ್ಷಕ