ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಶೀರ್ವಾದ, ಹರಕೆಗಳು

೩೫೯


ಯನ್ಮಂಗಲಂ ಸಹಸ್ರಾಕ್ಷೇ ಸರ್ವದೇವನಮಸ್ಕೃತೇ |
ವೃತ್ರನಾಶೇ ಸಮಭವತ್ತತ್ತೇ ಭವತು ಮಂಗಲಮ್ ‖೩೨‖
ಯನ್ಮಂಗಲಂ ಸುಪರ್ಣಸ್ಯ ವಿನತಾಕಲ್ಪಯತ್ಪುರಾ |
ಅಮೃತಂ ಪ್ರಾರ್ಥಯಾನಸ್ಯ ತತ್ತೇ ಭವತು ಮಂಗಲಮ್ ‖೩೩‖
ಅಮೃತೋತ್ಪಾದನೇ ದೈತ್ಯಾನ್ಫ್ನತೋ ವಜ್ರಧರಸ್ಯ ಯತ್ |
ಆದಿತಿರ್ಮಂಗಲಂ ಪ್ರಾದಾತ್ತತೇ ಭವತು ಮಂಗಲಮ್ ‖೩೪‖
ತ್ರಿವಿಕ್ರಮಾನ್ಪ್ರಕ್ರಮತೋ ವಿಷ್ಣೋರತುಲತೇಜಸಃ |
ಯದಾಸೀನ್ಮಂಗಲಂ ರಾಮ ತತ್ತೇ ಭವತು ಮಂಗಲಮ್ ‖೩೫‖
ಋಷಯಃ ಸಾಗರಾ ದ್ವೀಪಾ ವೇದಾ ಲೋಕಾ ದಿಶಶ್ಜ ತೇ |
ಮಂಗಲಾನಿ ಮಹಾಬಾಹೋ ದಿಶಂತು ಶುಭಮಂಗಲಮ್ ‖೩೬‖

“ಸಕಲ ದೇವತೆಗಳಿಗೆ ಪೂಜ್ಯನಾದ ಇಂದ್ರನಿಗೆ ವೃತ್ರಾಸುರನ ವಧೆಯನ್ನು
ಮಾಡಿದ ಸಮಯಕ್ಕೆ ಮಂಗಲ ಕೋರಿದಂತೆ ನಿನಗೆ ಶುಭವಾಗಲಿ! ಅಮೃತವನ್ನು
ತರಲು ಹೊರಟು ನಿಂತ ಗರುಡನಿಗೆ ವಿನತೆಯು ಮಂಗಲವನ್ನು ಕೋರಿದಂತೆ
ನಿನಗೆ ಮಂಗಲವಾಗಲಿ! ಅಮೃತ ಮಂಥನದ ಕಾಲದಲ್ಲಿ ದೈತ್ಯರಿಗೆ ಘಾತ
ಮಾಡಿದ ವಜ್ರಪ್ರಾಣಿಯಾದ ಇಂದ್ರನಿಗೆ ಅದಿತಿಯು ಕೋರಿದ ಮಂಗಲವು
ನಿನಗೆ ಪ್ರಾಪ್ತವಾಗಲಿ, ಎಲೈ ಮಹಾಪರಾಕ್ರಮಿಯಾದ ರಾಮನೇ, ಋಷಿ, ಸಾಗರ,
ದ್ವೀಪಗಳು, ವೇದಗಳು, ಲೋಕಗಳು, ದಿಶೆಗಳು ನನಗೆ ಮಂಗಲವನ್ನೇ
ಕೋರುತ್ತಿರಲಿ! ಇಷ್ಟೇ ಅಲ್ಲದೆ ಶುಭದ ಶುಭವು ನಿನಗೆ ದೊರೆಯಲಿ!”
ಇಷ್ಟಕಾರ್ಯವನ್ನು ಪೂರ್ತೀಗೊಳಿಸಲು ರಾಮನು ವನವಾಸಕ್ಕೆ
ಹೋಗಬೇಕೆಂದು ಕೌಸಲ್ಯೆಯು ನುಡಿದಳು. ವನವಾಸದಲ್ಲಿ ರಾಮನು ಸುಖಸಂಪನ್ನ
ನಾಗಿದ್ದು ಮರಳಿ ಬಂದನಂತರ ತನ್ನ ಮತ್ತು ಸೊಸೆಯ ಇಷ್ಟಾರ್ಥವನ್ನು
ಸಫಲಗೊಳಿಸೆಂದಳು.
ಮಯಾರ್ಚಿತಾ ದೇವಗಣಾಃ ಶಿವಾದಯೋ
ಮಹರ್ಷಯೋ ಭೂತಗಣಾಃ ಸುರೋರಗಾಃ |
ಅಭಿಪ್ರಯಾತಸ್ಯ ವನಂ ಚರಾಯ ತೇ |
ಹಿತಾನಿ ಕಾಂಕ್ಷಂತು ದಿಶಶ್ಚ ರಾಘವ ‖೪೫‖