ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಶೀರ್ವಾದ, ಹರಕೆಗಳು

೩೬೧


ಪುನಃ ಸುಮಿತ್ರೆಯು ಲಕ್ಷ್ಮಣನಿಗೆ ಹೇಳುತ್ತ "ಹೇ... ಲಕ್ಷ್ಮಣನೆ, ರಾಮನು ನಿನಗೆ
ದಶರಥನ ಸಮಾನ, ನಾನು ಜನಕಕನ್ಯೆಗೆ ಸಮಾನಳು. ಅರಣ್ಯವೇ ಅಯೋಧ್ಯೆ
ಯೆಂದು ತಿಳಿದುಕೊಂಡು ನಿಶ್ಚಿಂತೆಯಾಗಿ ಹೊರಡು!!” ಎಂದಳು.

೩. ಶ್ರಾವಣನಿಗೆ ತಂದೆಯಾದ ಆಶೀರ್ವಾದ

ಅಯೋಧ್ಯಾಕಾಂಡ/೬೪

ಶ್ರಾವಣನ ಮೃತ್ಯುವಿನ ದುಃಸಹನೀಯವಾದ ವಾರ್ತೆಯನ್ನು ಕೇಳಿ ಅತ್ಯಂತ
ಶೋಕಾಕುಲನಾದ ಆತನ ತಂದೆಯು ಮಗನಿಗೆ ಸಂಸ್ಕಾರಪೂರ್ವಕವಾಗಿ
ಜಲಾಂಜಲಿಯನ್ನು ಕೊಡುವ ಮೊದಲು ಮಗನನ್ನು ಈ ರೀತಿ ಆಶೀರ್ವದಿಸಿದನು:
ಅಪಾಪೋsಸಿ ಯಥಾ ಪುತ್ರ ನಿಹತಃ ಪಾಪಕರ್ಮಣಾ |
ತೇನ ಸತ್ಯೇನ ಗಚ್ಛಾಶು ಯೇ ಲೋಕಾಸ್ತ್ವತ್ರಯೋಧಿನಾಮ ‖೪೦‖
ಯಾಂ ಹಿ ಶೂರಾ ಗತಿಂ ಯಾಂತಿ ಸಂಗ್ರಾಮೇಷ್ವನಿವರ್ತಿನಃ |
ಹತಾಸ್ತ್ವಭಿಮುಖಾಃ ಪುತ್ರ ಗತಿಂ ತಾಂ ಪರಮಾಂ ವ್ರಜ ‖೪೧‖
ಯಾಂ ಗತಿಂ ಸಗರಃ ಶೈಬ್ಯೋ ದಿಲೀಪೋ ಜನಮೇಜಯಃ |
ನಹುಷೋ ಧುಂಧುಮಾರಶ್ಚ ಪ್ರಾಪ್ತಾಸ್ತಾಂ ಗಚ್ಛ ಪುತ್ರಕ ‖೪೨‖
ಯಾ ಗತಿಃ ಸರ್ವಭೂತಾನಾಂ ಸ್ವಾಧ್ಯಾಯಾತ್ತಪಸಶ್ಚಯಾ |
ಭೂಮಿದಸ್ಯಾಹಿತಾಗ್ನೇಶ್ಚ ಏಕಪತ್ನೀವ್ರತಸ್ಯ ಚ ‖೪೩‖
ಗೋಹಸ್ರಪ್ರದಾತ್ಋಣಾಂ ಗುರುಸೇವಾಭೃತಾಮಪಿ |
ದೇಹನ್ಯಾಸ ಕೃತಾಂ ಯಾ ಚ ತಾಂ ಗತಿಂ ಗಚ್ಛ ಪುತ್ರಕ ‖೪೪‖
ನ ಹಿ ತ್ವಸ್ಮಿನ್ಕುಲೇ ಜಾತೋ ಗಚ್ಛತ್ಯಕುಶಲಾಂ ಗತಿಮ್ ‖೪೫‖


“ನೀನು ನಿರಪರಾಧಿಯಾಗಿದ್ದರೂ ಪಾಪಕರ್ಮ ಎಸಗುವವನಿಂದ ನಿನ್ನ
ವಧೆಯಾಗಿದೆ. ಇದು ನಿಜವಿದ್ದಲ್ಲಿ ಅಸ್ತ್ರಯುದ್ಧದಲ್ಲಿ ಮಡಿದವರಿಗೆ ದೊರಕುವ
ಲೋಕವು ನಿನಗೆ ಸಿಗಲಿ! ರಣರಂಗದಿಂದ ಹಿಂಜರಿಯದೆ ಕಾದು ಮಡಿದ
ವೀರರಿಗೆ ದೊರೆಯುವ ಉತ್ಕೃಷ್ಟ ಗತಿಯನ್ನು ನೀನು ಹೊಂದು! ಸಗರ, ಶೈಬ್ಯ,
ದಿಲೀಪ, ಜನಮೇಜಯ, ನಹುಷ, ಧುಂಧುಮಾರ, ಮೊದಲಾದವರಿಗೆ ಪ್ರಾಪ್ತವಾದ
ಸದ್ಗತಿಯು ನಿನಗೆ ದೊರೆಯಲಿ! ಪ್ರಾಣಿಮಾತ್ರರ ಆಶ್ರಯವೆಂದರೆ ಬ್ರಹ್ಮ; ಅದು
ನಿನ್ನದಾಗಲಿ! ವೇದಾಧ್ಯಯನ, ತಪ ಮತ್ತು ಪೃಥ್ವೀದಾನ ಮಾಡುವವರು,
ಅಹಿತಾಗ್ನಿಗಳು, ಏಕಪತ್ನೀವ್ರತಸ್ಥರು, ಸಹಸ್ರ ಗೋವುಗಳ ದಾನಿಗಳು, ಗುರು