ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ದೇವರು ತಪದ ಸಾಮರ್ಥ್ಯದಿಂದಲೇ ಸೃಷ್ಟಿಯನ್ನು ನಿರ್ಮಿಸುವಂತಾದನು. ವಿಶ್ವಾಮಿತ್ರ ತಾನು 'ಬ್ರಹ್ಮರ್ಷಿ' ಎಂದೆನಿಸಿಕೊಳ್ಳಬೇಕೆಂದು ಘೋರ ತಪಸ್ಸನ್ನಾಚರಿಸಿದನು. ರಾವಣನು ತಪೋಬಲದಿಂದ ಮರ್ಯಾದಿತ ಅಮರತ್ವವನ್ನು ಗಳಿಸಿಕೊಂಡನು. ಪಾರ್ವತಿಯು ಶಿವನನ್ನು ಪ್ರಸನ್ನಗೊಳಿಸಿದುದಲ್ಲದೇ ಕ್ಷಾಮದ ಪರಿಹಾರಕ್ಕಾಗಿ ಸ್ವರ್ಗದಿಂದ ಗಂಗೆಯನ್ನು ಭೂಮಿಗೆ ಕರೆತಂದಳು. ಪಾತಿವ್ರತ್ಯವನ್ನು ಪರೀಕ್ಷಿಸಲು ಬಂದ ಬ್ರಹ್ಮ-ವಿಷ್ಣು-ಮಹೇಶ್ವರರನ್ನು ಎಳೆಯ ಬಾಲಕರನ್ನಾಗಿ ಮಾಡಿದ್ದು ತಪೋಬಲದಿಂದಲೇ ಎಂದು ಎಲ್ಲರಿಗೂ ಗೊತ್ತಿದೆ. ಮಾಂಡವ್ಯನ ಶಾಪದಿಂದ ಶಾಪದಿಂದ ಗೆಳತಿಗೆ ಬಂದ ವೈಧವ್ಯವನ್ನು ಸಹ ತಪೋಬಲದಿಂದಲೇ ಪರಿಹರಿಸಿದಳು. ಶಂಬೂಕನು ದೇಹಸಹಿತವಾಗಿ ಸ್ವರ್ಗಕ್ಕೆ ಹೋಗಲು ಹವಣಿಸಿ ನಡೆಯಿಸಿದ ತಪಶ್ಚರ್ಯೆಯು ವ್ಯರ್ಥವಾಯಿತು; ಏಕೆಂದರೆ ಆತನು ತನ್ನ ಅಧಿಕಾರವನ್ನು ಅತಿಕ್ರಮಿಸಿದ್ದನು.

ತಪಶ್ಚರ್ಯೆಯಲ್ಲಿ ದೈಹಿಕ ಕ್ಲೇಶಗಳಿಗೆ ವಿಶೇಷಮಹತ್ತವಿದೆ. ಕ್ಲೇಶಗಳ ತೀವ್ರತೆಯು ಹೆಚ್ಚಾದಷ್ಟೂ ದೀರ್ಘಕಾಲ ನಡೆದಷ್ಟು ತಪಸ್ಸಿದ್ಧಿ ಹೆಚ್ಚು. ಬೇಸಗೆಯಲ್ಲಿ ಪಂಚಾಗ್ನಿ ಸಾಧನೆ; ಕೊರೆಯುವ ಚಳಿಗಾಲದಲ್ಲಿ ಒದ್ದೆ ಬಟ್ಟೆಗಳನ್ನು ಧರಿಸುವುದು; ಮಳೆಗಾಲದಲಿ ಆಕಾಶದ ಕೆಳಗೆ ಬಯಲಿನಲ್ಲಿ ಕುಳಿತಿರುವುದು; ಒಂದು ಅಥವಾ ಎರಡೂ ಕೈಗಳನ್ನು ಆಕಾಶದತ್ತ ಮೇಲೆ ಎತ್ತಿ ದೀರ್ಘ ಸಮಯವಿರುವುದು; ಒಂಟಿಗಾಲಿನ ಮೇಲೆ ನಿಲ್ಲುವುದು; ಬೆಂಕಿಯ ಮೇಲೆ ನಡೆಯುವುದು, ನೀರಿನಲ್ಲಿ ನಿಂತಿರುವುದು; ಮೌವನ್ನಾಚರಿಸುವುದು; ಸಾಷ್ಟಾಂಗನಮಸ್ಕಾರ ಹಾಕುತ್ತ ಇಲ್ಲವೇ ಉರುಳು ಸೇವೆಗೈಯುತ್ತ ತೀರ್ಥಯಾತ್ರೆ ಕೈಗೊಳ್ಳುವುದು; ವಾಯುಭಕ್ಷಣೆ ಮತ್ತ ಮಾಡಿರುವುದು; ಪಕ್ಷಿಗಳಂತೆ ಹೊಲದಲ್ಲಿ ಭೂಮಿಯ ಮೇಲೆ ಬಿದ್ದ ಕಾಳುಗಳನ್ನು ಆಯ್ದುಕೊಂಡು ಜೀವನ ನಡೆಸುವುದು- ಈ ರೀತಿಯ ಅನೇಕ ತರಹದ ತಪಸ್ಸುಗಳಿವೆ. ಕಟ್ಟುನಿಟ್ಟಿನ ಆಹಾರ ಮತ್ತು ತ್ಯಾಗ ಇವು ಕೂಡ ತಪಸ್ಸು ಎಂದೆನಿಸುತ್ತವೆ. ಸ್ತ್ರೀಪುರುಷರಿಬ್ಬರಿಗೂ ತಪಸ್ಸನ್ನಾಚರಿಸುವ ಅಧಿಕಾರವಿದ್ದರೂ ಈ ಶೂದ್ರರನ್ನು ಅಧಿಕಾರದಿಂದ ದೂರವಿಡಲಾಗಿತೆಂಬುದು ಶಂಬೂಕನ ಕಥೆಯಿಂದ ಸ್ಪಷ್ಟವಾಗುತ್ತದೆ. ವೈದಿಕ ಕಾಲದಲ್ಲಿ ಶೂದ್ರರಿಗೂ ಈ ಅಧಿಕಾರವಿತ್ತು. ಅವರು ವೇದಾಧ್ಯಯನ ಮಾಡುತ್ತಿದ್ದರು. ಕೆಲವರು ಮಂತ್ರಸಾಮರ್ಥ್ಯವನ್ನರಿತಿದ್ದರು. ಕಾಲಾಂತರದಲ್ಲಿ ಶೂದ್ರರ ಮೇಲೆ ಅನೇಕ ಬಂಧನಗಳನ್ನು ಹೇರಲಾಗಿದೆ: ಅವರ ಅಧಿಕಾರವನ್ನು ಅಲ್ಲಗಳೆದಿರಬಹುದು.