ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೩೭೯

ಅಹಲ್ಯೆಯು ಸೌದಾಸನ ರಾಣಿಯ ಕರ್ಣಕುಂಡಲಗಳನ್ನು ತಂದು ಗುರುದಕ್ಷಿಣೆ ಯಾಗಿ ಕೊಡಲು ಹೇಳಿದ್ದಳು.

೧೩. ಆದಿತ್ಯ (ಸೂರ್ಯ)
ಇದು ವೈವಸ್ವತ ಮನ್ವಂತರದಲ್ಲಿಯ ದೇವತೆಗಳ ಸಮೂಹದ ಹೆಸರು. ಋಗ್ವೇದದಲ್ಲಿ ಇದರ ಬಗ್ಗೆ ಆರು ಸೂಕ್ತಗಳಿವೆ. ಆದಿತ್ಯರ ಸಂಖ್ಯೆ ಹನ್ನೆರಡು ಇದ್ದು, ಅವು ಹನ್ನೆರಡು ಮಾಸಗಳನ್ನು ದರ್ಶಿಸುತ್ತವೆ. ಇಂದ್ರನು ಅದಿತಿಯ ಮಗನಾದ್ದರಿಂದ ಆತನು ಆದಿತ್ಯರಲ್ಲಿ ಒಬ್ಬನಾಗಿದ್ದಾನೆ. ಹೀಗಿದ್ದರೂ ಹನ್ನೆರಡು ಆದಿತ್ಯರನ್ನು ಹೊರತುಪಡಿಸಿದ್ದಾನೆ. ಆದಿತ್ಯರ ವರ್ಣನೆಯು, ಇನ್ನಿತರ ದೇವತೆಗಳ ಸಾಮಾನ್ಯವರ್ಣನೆಯಂತಿದ್ದರೂ ಅವರಲ್ಲಿ ಪ್ರಮುಖರಾದ ಮಿತ್ರವರುಣರಿಗಿಂತ ಭಿನ್ನವಾಗಿದೆ:ಸರ್ವಾಧಾರ, ಸರ್ವಪಾಲಕ, ಮನದ ಅಂತರಂಗದ ವಿಚಾರಗಳನ್ನು ಅರಿತುಕೊಳ್ಳುವ, ಪಾಪೀ ಜನರನ್ನು ಶಿಕ್ಷಿಸುವ, ರೋಗಗಳನ್ನು ಇಲ್ಲದಂತೆ ಮಾಡುವ, ದೀರ್ಘಾಯುಸ್ಸನ್ನು ದಯಪಾಲಿಸುವ, ಎಂಬ ವರ್ಣನೆಯು ಕಂಡುಬರುತ್ತದೆ. ತನ್ನ ಉದರದಿಂದ ಸಾಧ್ಯದೇವತೆಗಳು ಹುಟ್ಟಬೇಕೆಂದು ಬ್ರಹ್ಮನನ್ನು ಉದ್ದೇಶಿಸಿ ಓದನವನ್ನು (ಅನ್ನ) ಅದಿತಿಯು ಬೇಯಿಸಿದಳು. ಆಹುತಿಯನ್ನು ಕೊಟ್ಟು ಮಿಕ್ಕ ಅನ್ನವನ್ನು ತಿಂದ ಕಾರಣ ಅದಿತಿಗೆ ಧಾತಾ ಮತ್ತು ಅರ್ಯಮಾ ಎಂಬ ಇಬ್ಬರು ಅವಳಿಜವಳಿ ಮಕ್ಕಳಾದರು. ಎರಡನೆಯ ಬಾರಿಗೆ ಮಿತ್ರ ಹಾಗೂ ವರುಣ, ಮೂರನೆಯ ಸಲ ಅಂಶ ಹಾಗೂ ಭಗ ಮತ್ತು ನಾಲ್ಕನೆಯ ವೇಳೆಗೆ ಇಂದ್ರ ಹಾಗೂ ವಿವಸ್ವಾನ ಎಂಬ ಮಕ್ಕಳು ಹುಟ್ಟಿದರು. ಅದಿತಿಯ ಹನ್ನೆರಡು ಗಂಡು ಮಕ್ಕಳೆಂದರೆ ದ್ವಾದಶಾದಿತ್ಯ ಅಥವಾ 'ಸಾಧ್ಯ' ಹೆಸರಿನ ದೇವತೆಗಳಾಗಿದ್ದಾರೆ.

೧೪. ಇಂದ್ರ
'ಇಂದ್ರ'ವೆಂಬುದು ಒಂದು ಪದವಿಯಾಗಿದೆ. ನೂರು ಯಜ್ಞಗಳನ್ನು ಮಾಡಿ ಇದನ್ನು ಸಂಪಾದಿಸಬಹುದು. ಪ್ರಜೆಗಳ ಸಂರಕ್ಷಣೆ ಆತನ ಪ್ರಮುಖ ಕಾರ್ಯವಾಗಿರುತ್ತದೆ. ಬೇರೆ ಬೇರೆ ಮನ್ವಂತರಗಳಲ್ಲಿ ಬೇರೆಬೇರೆ ಇಂದ್ರರಿದ್ದರೂ ಅವರ ಗುಣಗಳು ಮತ್ತು ಕಾರ್ಯ ಒಂದೇ ಆಗಿರುತ್ತದೆ. ಸಪ್ತರ್ಷಿಗಳು ಇಂದ್ರನ ಸಲಹೆಗಾರರು. ಗಂಧರ್ವ, ಅಪ್ಸರೆಯರು ಎಂದರೆ ಇಂದ್ರನ ಐಶ್ವರ್ಯ. ಇಂದ್ರ ನಾದವರು ವಜ್ರಪಾಣಿ, ಸಹಸ್ರಾಕ್ಷ, ಪುರಂದರ ಹಾಗೂ ಮಘವಾನ ಆಗಿರುತ್ತಾರೆ.