ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಮಾಡಿದನು. ಋಕ್ಷಪತ್ನಿಯಾದ ವಿರಜೆ ಎಂಬಾಕೆಗೆ ಇಂದ್ರನಿಂದ ವಾಲಿಯೆಂಬ ಮಗನು ಹುಟ್ಟಿದನು.

೧೫. ಇಲ, ಇಲಾ
ಇಲರಾಜನು ಕರ್ದಮ ಪ್ರಜಾಪತಿಯ ಮಗನಾಗಿದ್ದು ಬಾಘೀಕ ಎಂಬ ದೇಶವನ್ನು ಆಳುತ್ತಿದ್ದನು. ಶಿವ-ಪಾರ್ವತಿಯರ ವರದನುಸಾರವಾಗಿ ಆತನಿಗೆ ಒಂದು ತಿಂಗಳು ಸ್ತ್ರೀತ್ವವೂ ನಂತರದ ಒಂದು ತಿಂಗಳಲ್ಲಿ ಪುರುಷತ್ವವೂ ಪ್ರಾಪ್ತ ವಾಗುತ್ತಿತ್ತು. ಈತನ ಮಗನೆಂದರೆ ಪುರೂರವ, ಇವನು ವೈವಸ್ವತಮನು (ಶ್ರಾದ್ಧದೇವ) ಮತ್ತು ಶ್ರದ್ಧಾ ಇವರ ಪುತ್ರ ಇವರು ಪುತ್ರಪ್ರಾಪ್ತಿಗಾಗಿ ಮಿತ್ರವರುಣರನ್ನು ಕುರಿತು ಪುತ್ರಕಾಮೇಷ್ಟಿ ಯಜ್ಞವನ್ನು ವಸಿಷ್ಠರಿಂದ ಮಾಡಿಸಿದರು. ಅವರಿಗೆ ಇಲಾ' ಎಂಬ ಕನ್ಯಯು ಹುಟ್ಟಿದಳು. ಆಗ ಮಗುವಿನ ಇಚ್ಚೆಯನುಸಾರ ವಸಿಷ್ಠರು ಆಕೆಯನ್ನು ಪುರುಷನನ್ನಾಗಿ ಮಾಡಿದರು. ಶಂಕರನ ಶಾಪವಿದ್ದ ಶರವನದಲ್ಲಿ ಇಲರಾಜನು ಬೇಟೆಗೆಂದು ಹೋದಾಗ ಆತನಿಗೆ ಪರಿವಾರಸಮೇತ ಸ್ತ್ರೀರೂಪವು ದೊರಕಿತು. ವಸಿಷ್ಠನ ಕೃಪೆಯಿಂದ, ಒಂದು ತಿಂಗಳ 'ಸ್ತ್ರೀತ್ವದ ನಂತರ ಒಂದು ತಿಂಗಳ 'ಪುರುಷತ್ವವು ಕ್ರಮವಾಗಿ ಬರುವಂತಾಯಿತೆಂದು ಮತ್ತ್ವ ಹಾಗೂ ಪದ್ಮಪುರಾಣಗಳಲ್ಲಿ ಹೇಳಲಾಗಿದೆ.
ಸದಾಕಾಲವೂ ಪುರುಷತ್ವವಿರಬೇಕೆಂದು ಮರುತ್ತನು ಶಂಕರನಿಗೆ ಪ್ರಿಯವಾಗಿದ್ದ ಅಶ್ವಮೇಧಯಜ್ಞವನ್ನು ಮಾಡಿದನು. ಆಗ ಪ್ರಸನ್ನನಾದ ಶಂಕರನು ಆತನಿಗೆ ನಿರಂತರ ಸ್ವರೂಪದ ಪುರುಷತ್ವವನ್ನು ಕೊಟ್ಟನೆಂದು ರಾಮಾಯಣದಲ್ಲಿದೆ (ಉತ್ತರಕಂಡ/೯೦), ಸ್ಕಂದಪುರಾಣದಲ್ಲಿ ಅರುಣಾಚಲೇಶ್ವರನ ಉಪಾಸನೆಯಿಂದ ಅದು ಲಭಿಸಿತೆಂದು ಹೇಳಿದ್ದಾರೆ. ಬ್ರಹ್ಮಪುರಾಣದಲ್ಲಿ ಗೌತಮೀ ನದಿಯಲ್ಲಿ ಸ್ನಾನ ಮಾಡಿದ್ದರಿಂದ ಪುರುಷತ್ವ ಪ್ರಾಪ್ತವಾಯಿತೆಂದು ಉಲ್ಲೇಖವಿದೆ.
ಈತನು 'ಇಲಾ' ಎಂಬ ಸ್ತ್ರೀರೂಪದಲ್ಲಿದ್ದಾಗ ಬುಧನಿಂದ ಪುರೂರವ ಎಂಬ ಪುತ್ರನು ಹುಟ್ಟಿದನು. ಇವನ ಹೊರತು ಆತನಿಗೆ ಇನ್ನೂ ಮೂರು ಜನ ಮಕ್ಕಳಿದ್ದರು.
೧೬. ಉಮಾ
ಇವಳು ಹಿಮಾಲಯ ಹಾಗೂ ಮೈನಾ ಇವರ ದ್ವಿತೀಯ ಕನ್ಯಯಿದ್ದು, ರುದ್ರನ ಪತ್ನಿಯಾಗಿದ್ದಾಳೆ. ಪಾರ್ವತಿಯು ಸೌಮ್ಯರೂಪದವಳು; ಶಕ್ತಿದೇವತೆಯೂ