ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ್ಯಕ್ತಿ ವಿಶೇಷ ೩೮೩ ಕೂಡ. ಇವಳು ಮೊದಲು ಗೌರಾಂಗಿಯಾಗಿದ್ದಳು. ನಿಶಾದೇವಿಯ ಸ್ಪರ್ಶದಿಂದ ಇವಳು ಕಪ್ಪಾದಳು. ಅಂದಿನಿಂದ ಇವಳ ಬಗ್ಗೆ ಇದ್ದ ಪತಿಯ ವ್ಯಾಮೋಹವು ಕಡಿಮೆಯಾಗಿ, ಮುನಿಸುಂಟಾಯಿತು. ಪುನಃ ಗೌರಕಾಂತಿಯನ್ನು ಹೊಂದಲು ಅವಳು ತಪಸ್ಸನ್ನು ಕೈಗೊಂಡಳು. ಅನಂತರ ಅವಳಿಗೆ ಗೌರವರ್ಣವು ಪ್ರಾಪ್ತವಾಯಿತು. ರುದ್ರನಿಂದ ಈಕೆಗೆ ಸಂತಾನವಾಗಲಿಲ್ಲ. ಶಿವ ಮತ್ತು ಆಕಾಶಗಂಗೆ ಇವರಿಂದ ಹುಟ್ಟುವ ಮಗನು ಗಂಗಾ ಮತ್ತು ಉಮಾ ಇವರಿಬ್ಬರಿಗೂ ಅಕ್ಕರೆಯವ ನಾಗುವನೆಂದು ಬ್ರಹ್ಮದೇವನು ಹೇಳಿದನು. ೧೭. ಉರ್ವಶಿ ಉರ್ವಶಿಯ ಉಲ್ಲೇಖವು ಋಗ್ಗೇದದಲ್ಲಿ ಅನೇಕ ಕಡೆಗಳಲ್ಲಿ ಬಂದಿದೆ. ಇವಳು ಓರ್ವ ಲಾವಣ್ಯವತಿಯಾದ ಅಪ್ಪರೆಯಾಗಿದ್ದಳು. ಬದರಿಕಾಶ್ರಮದಲ್ಲಿ ನರನಾರಾಯಣರು ತಪಸ್ಸನ್ನು ಕೈಗೊಂಡಾಗ ಇಂದ್ರನಿಗೆ ತನ್ನ ಪದವಿಯು ಕೈಬಿಡುವ ಭಯವೆನಿಸಿತು. ನರನಾರಾಯಣರ ಮನಸ್ಸನ್ನು ವಿಚಲಿತಗೊಳಿಸಲು ಇಂದ್ರನು ರಂಭಾ, ಮೇನಕಾ, ತಿಲೋತ್ತಮಾ ಮೊದಲಾದ ಹದಿನಾರು ಸಾವಿರದ ಐವತ್ತು ಅಪ್ಪರೆಯರನ್ನು ಕಳುಹಿಸಿದನು; ಆದರೆ ಯಾವ ಪ್ರಯೋಜನವೂ ಅಗಲಿಲ್ಲ. ಪ್ರತಿಯಾಗಿ ನಾರಾಯಣನ ತೊಡೆಯಿಂದ ಹದಿನಾರು ಸಾವಿರದ ಐವತ್ತೊಂದು ಅಪ್ಪರೆಯರು ನಿರ್ಮಿತರಾದರು. ಅವರಲ್ಲಿ ಅತ್ಯಂತ ಲಾವಣ್ಯ ವತಿಯಾದ ಅಪ್ಪರೆ ಎಂದರೆ ಉರ್ವಶಿ, ಉರು ಅಂದರೆ ತೊಡೆ; ತೊಡೆಯಿಂದ ಹುಟ್ಟಿದವಳೆಂದು ಉರ್ವಶೀ ಎಂಬ ಹೆಸರು ಬಂದಿತು. ನರನರಾಯಣರು ಈ ಉರ್ವಶಿಯನ್ನು ಇಂದ್ರನಿಗೆ ಉಡುಗೊರೆಯಾಗಿ ಕೊಟ್ಟು ಕಳುಹಿಸಿದರು. ಈ ಕಥೆಯು ಪದಪುರಾಣದಲ್ಲಿದೆ. - ಸೂರ್ಯನ ಆರಾಧನೆಗೆಂದು ಹೊರಟಾಗ ಉರ್ವಶಿಯು ಮಿತ್ರ ಆದಿತ್ಯನಿಗೆ “ನಾನು ನಿನ್ನನ್ನು ವರಿಸುವೆ' ಎಂಬ ಆಶ್ವಾಸನೆಯನ್ನು ಕೊಟ್ಟಳು. ಅನಂತರ ಭೇಟಿಯಾದ ವರುಣನು ತನ್ನೊಡನೆ ವಿವಾಹವಾಗಲು ಉರ್ವಶಿಗೆ ಕೇಳಿಕೊಂಡನು. ಆಗ ಉರ್ವಶಿಯು 'ನಾನು ಈ ಮೊದಲೇ ಮಿತ್ರನನ್ನು ವರಿಸಿದ್ದೇನೆ' ಎಂದು ಹೇಳಿದಳು. ಆದರೆ ತನ್ನ ಪ್ರೇಮವನ್ನು ವರುಣನಿಗೆ ಕೊಟ್ಟಳು. ಆಗ ವರುಣನು ಇವಳನ್ನು ಕುರಿತು ಉಂಟಾದ ತನ್ನ ತೇಜಸ್ಸನ್ನು (ವೀರ್ಯವನ್ನು) ಒಂದು ಕುಂಭದಲ್ಲಿ ಹಾಕಿದನು. ಈ ಸಂಗತಿಯು ಮಿತ್ರನಿಗೆ ತಿಳಿದಾಗ ಆತನು ಬಲು ಸಿಟ್ಟಾಗಿ ಉರ್ವಶಿಗೆ “ನೀನು ಮೃತ್ಯುಲೋಕದಲ್ಲಿ ಪುರೂರವನ ಪತ್ನಿಯಾಗು!”