ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೪ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಎಂಬ ಶಾಪವನ್ನು ಕೊಟ್ಟನು; ಮತ್ತು ತನ್ನ ವೀರ್ಯವನ್ನು ಒಂದು ಕುಂಭದಲ್ಲಿ ಹಾಕಿದನು. ಈ ಕುಂಭಗಳಿಂದ ಅಗಸ್ಯ ಮತ್ತು ವಸಿಷ್ಠರು ಜನ್ಮತಾಳಿದರು. ಉರ್ವಶಿಯು ಕಣ್ಣಿಗೆ ಬೀಳುತ್ತಲೇ ಮಿತ್ರನ ವೀರ್ಯ ಪತನವಾಯಿತು; ಶಾಪದ ಭೀತಿಯಿಂದ ಆತನು ಅದನ್ನು ಪಾದದ ಕೆಳಗೆ ಅಡಗಿಸಿದನು; ಆಗ ವಸಿಷ್ಠನು ಜನ್ಮತಾಳಿದನೆಂದು ವಿಷ್ಣು ಪುರಾಣದಲ್ಲಿದೆ. ನಾರದನು ಬಣ್ಣಿಸಿದ್ದರಿಮದ ಉರ್ವಶಿಂರು ಪುರೂರವನತ್ತ ಆಕರ್ಷಿತಳಾದಳು. ಹೀಗಾಗಿ ಲಕ್ಷ್ಮೀಸ್ವಯಂವರವೆಂಬ ಪ್ರಬಂಧದಲ್ಲಿ ಇವಳ ಪದನ್ಯಾಸ, ಭಾವಮುದ್ರೆಗಳು ತಪ್ಪಿದವು. ಆಗ ಭರತಮುನಿಯ ಶಾಪ ತಗುಲಿ ಉರ್ವಶಿಯು ಇಪ್ಪತ್ತೈದು ವರ್ಷಗಳ ಕಾಲ ಬಳ್ಳಿಯಾಗಿ ಬದುಕಿದಳು. ಶಾಪವಿಮೋಚನೆಯಾದ ನಂತರ ಪುರೂರವನತ್ತ ಹೋಗುತ್ತಿದ್ದಾಗ ದಾರಿಯಲ್ಲಿ ಕೇಶಿ ಎಂಬ ದೈತ್ಯನು ಅವಳನ್ನು ಅಪಹರಿಸಲು ಮಾಡಿದ ಪ್ರಯತ್ನವು ವಿಫಲವಾಯಿತು. ಪುರೂರವನು ಇವಳನ್ನು ಆ ದೈತ್ಯನಿಂದ ಬಿಡಿಸಿದನು. ಪುರೂರವನಿಗೆ ಉರ್ವಶಿಯು ಮೂರು ಶರತ್ತುಗಳನ್ನು ಹಾಕಿ, ಆತನ ಬಳಿ ಇರಲು ಸಮ್ಮತಿಸಿದಳು. ಆ ಶರತ್ತುಗಳೆಂದರೆ: - ೧. ಅವಳು ಸಾಕಿದ್ದು, ಮಕ್ಕಳಂತೆ ಜೋಪಾನ ಮಾಡಿದ್ದ ಎರಡು ಕುರಿಗಳಿಗೆ ರಕ್ಷಣೆಯನ್ನೀಯಬೇಕು;

  • ೨. ಅವಳು ಯಾವಾಗಲೂ ಧೃತವನ್ನೇ ಆಹಾರವಾಗಿ ಸೇವಿಸುವವ ಳಾದ್ದರಿಂದ ಈ ಬಗೆಗಿನ ವ್ಯವಸ್ಥೆಯಾಗಬೇಕು; ಮತ್ತು

೩. ಮೈಥುನನ ಸಮಯವನ್ನು ಹೊರತುಪಡಿಸಿ ಪುರೂರವನು ನಗ್ನ ಸ್ಥಿತಿಯಲ್ಲಿ ಅವಳ ದೃಷ್ಟಿಗೆ ಬೀಳಕೂಡದು. ಈ ಮೂರೂ ಶರತ್ತುಗಳನ್ನು ಕೂಲಂಕಷವಾಗಿ ಪಾಲಿಸಿ ಆತನು ಊರ್ವಶಿಯನ್ನು ಅರವತ್ತೊಂದು ಸಾವಿರ ವರ್ಷಗಳವರೆಗೆ ಉಪಭೋಗಿಸಿದನು. ಒಮ್ಮೆ ಆತನಿಂದ ಮೂರನೆಯ ಶರತ್ತಿನ ಭಂಗವಾದ್ದರಿಂದ ಅವಳು ಪುರೂರವನನ್ನು ಬಿಟ್ಟು ದೇವಲೋಕಕ್ಕೆ ಮರಳಿದಳು. ಮಹಾಭಾರತದಲ್ಲಿಯೂ ಉರ್ವಶಿಯ ಉಲ್ಲೇಖವು ಅನೇಕ ಸಲ ಬಂದಿದೆ. ಇವಳು ಯಾವಾಗಲೂ ಕುಬೇರನ ಸೇವೆಯಲ್ಲಿದ್ದವಳು. ಅರ್ಜುನನು ಜನ್ನ ತಾಳಿದಾಗ ಸಂಗೀತವನ್ನು ಹಾಡುವ ಹನ್ನೊಂದು ಅಪ್ಪರೆಯಲ್ಲಿ ಇವಳೂ ಒಬ್ಬಳಾಗಿದ್ದಳು. ಅರ್ಜುನನು ವಿದ್ಯಾಭ್ಯಾಸಕ್ಕೆಂದು ಇಂದ್ರಲೋಕಕ್ಕೆ ಹೋದಾಗ ಆತನು ಉರ್ವಶಿಯತ್ತ ಆದರಭಾವದಿಂದ ನೋಡುತ್ತಿದ್ದರೂ, ಇಂದ್ರನಿಗೆ ಅರ್ಜುನನ