ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೧೭

ತಪಸ್ಸಿನ ಉಪಯುಕ್ತತೆ ಇದ್ದಂತೆ ಅದರ ಉಪದ್ರವವೂ ಇರುತ್ತದೆ. ಇದರಲ್ಲಿ ಸಂರಕ್ಷಕ ಹಾಗೂ ಸಂಹಾರಕ ಈ ಎರಡೂ ಶಕ್ತಿಗಳಿವೆ. ಕೈಕೊಂಡ ತಪಸ್ಸನ್ನವ ಲಂಬಿಸಿ, ಅದರ ಪ್ರಭಾವ ಮತ್ತು ಕಾಲಾವಧಿ ಇರುತ್ತದೆ. ತಪಸ್ವಿಗಳು ತಪದ ಬಲವು ಕುಗ್ಗಬಾರದೆಂದು ಬಹಳ ಜಾಗರೂಕತೆಯನ್ನು ವಹಿಸುತ್ತಾರೆ. ಅನೇಕ ಕಾರಣಗಳಿಂದ ತಪಸ್ಸು ಲೋಪವಾಗಬಹುದು. ವಿಶ್ವಾಮಿತ್ರನ ತಪೋಭಂಗವಾಗ ಬೇಕೆಂದು ಇಂದರನು ರಂಭೆಯನ್ನು ಅತನ ಬಳಿ ಕಳುಹಿಸಿದನು.

ಐಹಿಕ ಸುಖಸಂವರ್ಧನೆಗಾಗಿ, ಶತ್ರುಗಳ ವಿನಾಶಕ್ಕಾಗಿ, ಸಂಕಟಗಳ ನಿವಾರಣೆಗಾಗಿ, ಮಾನವನ ಶಕ್ತಿಯನ್ನು ಮೀರಿಸುವ ಬಲವನ್ನು ಪಡೆಯಲು ತಪ, ಯಾತು ಮತ್ತು ಯಜ್ಞಗಳನ್ನು ಆಚರಿಸುತ್ತಿದ್ದರು. ಇನ್ನಿತರ ಉದ್ದೇಶಗಳಿಗಾಗಿ ಕಡಿಮೆ ಪ್ರಮಾಣದಲ್ಲಿ ತಪಸ್ಸನ್ನು ಮಾಡುತ್ತಿದ್ದರು. 'ಯಾತು' ಕ್ರಿಯೆಯಲ್ಲಿ ಮಂತ್ರ ತಂತ್ರಗಳಿಂದ, ಯಜ್ಞಕರ್ಮದಲ್ಲಿ ಇಷ್ಟದೇವತೆಗಳ ಕೃಪಾಪ್ರಸಾದದಿಂದ ಮತ್ತು ತಪಶ್ಚರ್ಯೆಯಲ್ಲಿ ಸ್ವದೇಹ ದಂಡನೆಯಿಂದ ಉದ್ದೇಶವನ್ನು ಸಾಧಿಸುತ್ತಿದ್ದರು. ಲೌಕಿಕ ಸಮೃದ್ದಿಯೇ ಎಲ್ಲದರ ಉದ್ದೇಶವಿರುತ್ತಿತ್ತು. ಯಾತುವಿಧಿಯಲ್ಲಿ ವಸ್ತುವಿನಲ್ಲಿಯ ಸುಪ್ತಶಕ್ತಿಯು ಚೇತನ ಪಡೆಯಬೇಕು. ಯಜ್ಞಕರ್ಮದಲ್ಲಿ ಇಷ್ಟದೇವತೆಗಳು ಪ್ರಸನ್ನರಾಗಬೇಕು; ಇಲ್ಲವಾದರೆ ಉದ್ದೇಶಗಳು ಸಫಲಗೊಳ್ಳುವುದಿಲ್ಲ. ಯಾತು ಮತ್ತು ಯಜ್ಞ ಈ ಎರಡಕ್ಕಾಗಿ ಹೆಚ್ಚಾಗಿ ಪರರನ್ನು ಅವಲಂಬಿಸಬೇಕಾಗುತ್ತದೆ. ತಪಶ್ಚರ್ಯೆಯಲ್ಲಿಯೂ ದೇವತೆಯು ಪ್ರಸನ್ನವಾಗುವ ಅವಶ್ಯಕತೆ ಇದೆ. ಇದರಲ್ಲಿ ಪ್ರಸನ್ನಗೊಳಿಸುವ ಸಾಧನಗಳು ಬಹುಮಟ್ಟಿಗೆ ಸಾಧಕನ ಕೈಯಲ್ಲಿರುತ್ತವೆ. ಉದ್ದೇಶವು ಸಾಧ್ಯವಾಗುವವರೆಗೆ ತಪಸ್ಸನ್ನು ನಡೆಯಿಸಬಹುದು. ಯಜ್ಞಕರ್ಮದಲ್ಲಿ ದೈಹಿಕತೆಯ ಸಮೃದ್ಧಿಯುಳ್ಳ ದ್ರವ್ಯ ದೇವತೆ ಹಾಗೂ ವಿಧಾನಗಳಿಗೆ ಮಹತ್ವವಿತ್ತು. ತಪಸ್ಸಿನಲ್ಲಿ ಮಾನಸಿಕ ಕ್ರಿಯೆಯಿದೆ. ಇವೆರಡರಿಂದ ಸಿದ್ಧಿಯನ್ನು ಸಾಧಿಸಬಹುದು. ಭಗೀರಥನು ಉಗ್ರತಪಶ್ಚರ್ಯೆಯನ್ನು ನಡೆಯಿಸಿ ಗಂಗೆಯನ್ನು ಪೃಥ್ವಿಗೆ ಬರಮಾಡಿಕೊಂಡನು. ಸಗರನ ಪುತ್ರರ ಉತ್ತರಕ್ರಿಯೆಯನ್ನು ಮಾಡಿ ಅವರಿಗೆ ಅಕ್ಷಯ ಸ್ವರ್ಗಸುಖವನ್ನು ಒದಗಿಸಿಕೊಟ್ಟನು.

ಶಾಪ ಮತ್ತು ವರಗಳು: ಸಂಕಲ್ಪನೆ ಹಾಗೂ ಸ್ವರೂಪ

ಶಾಪ ಹಾಗೂ ವರಗಳಿಗೆ ಯಾತಕ್ರಿಯೆ, ಯಜ್ಞ ಮತ್ತು ತಪಸ್ಸುಗಳೊಂದಿಗೆ ನಿಕಟಸಂಬಂಧವಿದೆ. ಶಾಪ ಇಲ್ಲವೇ ವರದ ಕಲ್ಪನೆ ಯಾತುವಿಧಿಯಿಂದ ಉದ್ಭವಿಸಿದೆ. ಇವುಗಳನ್ನು ಕೊಡುವ ಸಾಮರ್ಥ್ಯವು ತಪಸ್ಸಿನಲ್ಲಿದೆ. ಈ ಸಾಮರ್ಥ್ಯವು ಯಜ್ಞದಿಂದ