ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ್ಯಕ್ತಿ ವಿಶೇಷ ೩೮೭ ಆಹಾರವನ್ನು ಶೋಧಿಸುತ್ತಿರುವಾಗ ಒಂದಿಲ್ಲ ಒಂದು ದಿನ ರಾಮನು ಭೇಟಿಯಾಗುತ್ತಾನೆ ಎಂಬ ವಿಶ್ವಾಸವು ಕಬಂಧನಿಗೆ ಮೂಡಿಬಂತು. ರಾಮಲಕ್ಷ್ಮಣರು ಕೈಸೇರಿದಾಗ ಇವನಿಗೆ ಬಹಳ ಸಂತೋಷವಾಯಿತು. ರಾಮನು ಕಬಂಧನ ಎಡಗೈಯನ್ನೂ, ಲಕ್ಷ್ಮಣನು ಅವನ ಬಲಗೈಯನ್ನೂ ಕತ್ತರಿಸಿಹಾಕಿದರು. ಆಗ ಕಬಂಧನ ದೇಹದಿಂದ ತೇಜಸ್ಸುಳ್ಳ ಒಬ್ಬ ಪುರುಷನು ಗೋಚರಿಸಿ ಆಕಾಶದಲ್ಲಿ ವಿಲೀನನಾದನು. ಈತನನ್ನು ರಾಮನು ಪ್ರಶ್ನಿಸಿದಾಗ ತಾನು “ವಿಶ್ವಾವಸು' ಎಂಬ ಗಂಧರ್ವನಿದ್ದನೆಂದು ಕಬಂಧನು ತಿಳಿಸಿದ್ದನು. ಬ್ರಾಹ್ಮಣನ ಶಾಪದಿಂದ ಕಬಂಧ ರಾಕ್ಷಸನಾಗಿದ್ದನು. ಕಬಂಧನಿಗೆ ದಿವ್ಯಜ್ಞಾನವಿರಲಿಲ್ಲ; ಕಾರಣ, ಸೀತೆಯನ್ನು ಯಾರು ಅಪಹರಿಸಿದರೆಂಬುದನ್ನು ಹೇಳಲು ಆತನಿಗೆ ಸಾಧ್ಯವಾಗಲಿಲ್ಲ. ತನ್ನ ಮರಣದನಂತರ ರಾಮನಿಗೆ ಸಹಾಯಮಾಡುವದಾಗಿ ವಚನವನ್ನಿತ್ತನು; ಸುಗ್ರೀವನ ಬಳಿಗೆ ಹೋಗಿ ಸಹಾಯವನ್ನು ಕೋರಬೇಕೆಂದೂ ಸೂಚಿಸಿದನು. ಸುಗ್ರೀವನತ್ತ ಹೋಗುವ ಮಾರ್ಗವನ್ನು ರಾಮನಿಗೆ ತಿಳಿಸಿ ಕಬಂಧನು ಪುನಃ ಗಂಧರ್ವನಾಗಿ ಪುಣ್ಯಲೋಕಕ್ಕೆ ತೆರಳಿದನು. ೨೨. ಕಶ್ಯಪ ಕರ್ದಮನ ಕನ್ಯಯಾದ ಮತ್ತು ಮರೀಚಿಯ ಪತ್ನಿಯಾದ ಕಲಾ ಇವಳಿಗೆ ಕಶ್ಯಪ ಹಾಗೂ ಪೂರ್ಣಿಮಾ ಎಂಬ ಎರಡು ಮಕ್ಕಳಾದರು. ಕಶ್ಯಪನು ಜೇಷ್ಠ ಪುತ್ರನಾಗಿದ್ದನು. ಇವನಿಗೆ ತಾರ್ಕ್ಷ ಮತ್ತು ಅರಿಷ್ಟನೇಮಿ ಎಂಬ ಎರಡು ಹೆಸರುಗಳಿದ್ದವೆಂದು ಕಂಡುಬರುತ್ತದೆ. ಕಶ್ಯಪನು ಸಪ್ತರ್ಷಿಗಳಲ್ಲಿ ಒಬ್ಬನಾಗಿದ್ದು ಆತನು ಪ್ರಜಾಪತಿಯೂ ಆಗಿದ್ದನು. ವಾಯುಪುರಾಣದಲ್ಲಿ ಈತನಿಗೆ ಆರು ಜನ ಮಲತಾಯಿಯರಿಂದ ಜನಿಸಿದ ಸಹೋದರರಿದ್ದರೆಂದು ಹೇಳಿದೆ. ಇವನು ಬ್ರಹ್ಮದೇವನ ಮಾನಸಪುತ್ರನಾಗಿದ್ದನು. ಪರಶುರಾಮನು ಇಪ್ಪತ್ತೊಂದು ಸಲ ಪೃಥ್ವಿಯನ್ನು ಕ್ಷತ್ರಿಯರಹಿತ ಮಾಡಿದನಂತರ ಆತನು ಸರಸ್ವತೀ ನದಿಯ ತೀರದಲ್ಲಿ ಕೈಗೊಂಡ ಯಜ್ಞದ ಅಧ್ವರ್ಯುವಾಗಿ ಕಶ್ಯಪನಿದ್ದನು. ಕಶ್ಯಪನಿಗೆ ದಕ್ಷಿಣೆಯ ರೂಪದಲ್ಲಿ ಪೃಥ್ವಿಯು ದಾನವಾಗಿ ದೊರೆಯಿತು. ಉಳಿದ ಕ್ಷತ್ರಿಯರು ನಾಶವಾಗ ಬಾರದೆಂದು ಕಶ್ಯಪನು ಪರಶುರಾಮನಿಗೆ ತನ್ನ ಗಡಿಯಾಚೆ ಇರಲು ಹೇಳಿದನು. ಆ ಪ್ರಕಾರ ಪರಶುರಾಮನು ತಾನು ನಿರ್ಮಿಸಿದ ಶೂರ್ಪಾರಕ(ಕೊಂಕಣ)ವೆಂಬ ಪ್ರದೇಶದಲ್ಲಿ ವಾಸಿಸಿದನು. ಸೃಷ್ಟಿಯನ್ನು ಬ್ರಾಹ್ಮಣರಿಗೆ ಒಪ್ಪಿಸಿ ಕಶ್ಯಪನು ವನವನ್ನು ಆಶ್ರಯಿಸಿದನು. ಪುತ್ರಪ್ರಾಪ್ತಿಗೆಂದು ಯಜ್ಞವನ್ನು ಆಚರಿಸುತ್ತಿದ್ದಾಗ ದೇವತೆಗಳು,