ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮೮ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಋಷಿಗಳು, ಗಂಧರ್ವರು ಈತನಿಗೆ ಸಹಾಯ ಮಾಡಿದರು. ಇಂದ್ರನು 'ವಾಲಖಿಲ್ಯರನ್ನು ಅವಮಾನಿಸಿದ ಕಾರಣ ಅವರು ರೊಚ್ಚಿಗೆದ್ದರು. ಆಗ ಅವರಿಂದ ರಕ್ಷಣೆ ಮಾಡಿಕೊಳ್ಳಲು ಇಂದ್ರನು ಕಶ್ಯಪನಿಗೆ ಶರಣುಹೋದನು. ಕಶ್ಯಪನು ಬಲುಚಾತುರ್ಯದಿಂದ ವಾಲಖಿಲ್ಯರನ್ನು ಸಂತೈಸಿದನು. ಅವರ ಕೃಪೆಯಿಂದ ಕಶ್ಯಪನಿಗೆ ಗರುಡ ಮತ್ತು ವರುಣ ಎಂಬ ಇಬ್ಬರು ಪುತ್ರರು ಹುಟ್ಟಿದರು. ನೂತನ ಇಂದ್ರನಿಗಾಗಿ ಮಾಡಿದ ತಪಸ್ಸಿನ ಫಲವನ್ನು ವಾಲಖಿಲ್ಯರು ಕಶ್ಯಪನಿಗೆ ಕೊಟ್ಟ ಕಾರಣ ಇಂದ್ರನಿಗೆ ಭಯವಿಲ್ಲದಂತಾಯಿತು. ಕಶ್ಯಪನು 'ಅರ್ಬುದ' ಪರ್ವತದಲ್ಲಿ ದೀರ್ಘತಪಸ್ಸನ್ನು ಮಾಡಿದನು. ಶಂಕರನಿಂದ ಗಂಗೆಯನ್ನು ಪಡೆದುಕೊಂಡನು. ಗರುಡನಿಗೆ ನಾರಾಯಣ ಮಹಾತ್ಯೆಯನ್ನು ಹೇಳಿದನು. ಇವನಿಗೆ ಕಪಿಲಾ, ಇರಾ, ಕದ್ರು, ಅದಿತಿ, ವಿನತಾ ಎಂಬ ಅನೇಕ ಮಡದಿಯರಿದ್ದರು; ಅನೇಕ ಮಕ್ಕಳಿದ್ದರು. 'ಕಶ್ಯಪ' ಎಂಬ ಈತನ ಹೆಸರಿನ ಗೋತ್ರವು ಇರುತ್ತದೆ. ದೇವದೈತ್ಯರ ಉತ್ಪತ್ತಿಯು ಈತನಿಂದಾಯಿತು. ೨೩. ಕಾರ್ತಿಕೇಯ (ಸ್ಕಂದ) ಶಂಕರನ ತೇಜಸ್ಸನ್ನು ಪೃಥ್ವಿಯು ಅಂಗೀಕರಿಸಿದಳು. ಅದರಲ್ಲಿ ಅಗ್ನಿಯ ಪ್ರವೇಶವಾದನಂತರ ಆ ಶ್ವೇತಪರ್ವತರೂಪ ತೇಜಸ್ಸಿನಿಂದ ಕಾರ್ತಿಕೇಯನು ಹುಟ್ಟಿದನು. ಕೃತ್ತಿಕೆಯರು ಈತನಿಗೆ ಹಾಲುಣಿಸಿ ಬೆಳೆಸಿದರೆಂದು ಅವನಿಗೆ 'ಕಾರ್ತಿಕೇಯ' ಎಂಬ ಹೆಸರು ಬಂದಿತು. ಕೃತ್ತಿಕೆಯರು ಆರು ಜನರಿದ್ದರು. ಈ ಆರು ಜನರೂ ಕಾರ್ತಿಕೇಯನನ್ನು ಮಗನೆಂದು ಭಾವಿಸಿದ ಕಾರಣ ಇವನಿಗೆ ಷಣ್ಮುಖ, ಷಣಾತುರ್, ಷಡಾನನ ಎಂಬ ಹೆಸರುಗಳೂ ಬಂದುವು. ದಾನವರನ್ನು ಈತನು ಸ್ವಂದಿಸಿದನಾಗಿ (ಕೊಂದನಾಗಿ) ಅಥವಾ ಸನ್ಮವೀರ್ಯದಿಂದ ಈತನು ಜನ್ಮತಾಳಿದ್ದರಿಂದಾಗಿ ಈತನನ್ನು ಸ್ಕಂದನೆಂತಲೂ ಕರೆಯುತ್ತಾರೆ. ತನ್ನ ಶೂರತನದಿಂದ ದಾನವರನ್ನು ಸದೆಬಡಿದ ಕಾರಣ, ದೇವತೆಗಳು ಈತನನ್ನು ತಮ್ಮ ಸೇನಾಪತಿಯನ್ನಾಗಿ ಮಾಡಿಕೊಂಡರು. ಸಪ್ತರ್ಷಿಗಳ ಯಜ್ಞಕಾಲದಲ್ಲಿ ಅರುಂಧತಿಯೊಬ್ಬಳನ್ನು ಬಿಟ್ಟು ಇನ್ನಿತರ ಅರು ಜನ ಋಷಿಪತ್ನಿಯರಲ್ಲಿ ಈ ಅಗ್ನಿಯು ಕಾಮಾಸಕ್ತನಾದನು. ಅಗ್ನಿಯ ಅಪ್ರಿಯಳಿದ್ದ 'ಸ್ವಾಹಾ' ಎಂಬವಳಿಗೆ ಈ ಒಳ್ಳೆಯ ಸಂಧಿಯ ಅರಿವಾಗಿ, ಆಕೆಯು ಈ ಆರು ಋಷಿಪತ್ನಿಯರ ವೇಷತಾಳಿ ಸಂಭೋಗವನ್ನು ಪಡೆದು ದೊರೆತ ವೀರ್ಯವನ್ನು ಒಂದು ಕುಂಡದಲ್ಲಿ ಶೇಖರಿಸಿಟ್ಟಳು. ಅದರಿಂದ ಸ್ಕಂದನ ಜನ್ಮವಾಯಿತೆಂದು ಮಹಾಭಾರತದ