ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ

೩೮೯


ವನಪರ್ವದಲ್ಲಿ ಉಲ್ಲೇಖವಿದೆ. ಈತನು ಅಮಾವಾಸ್ಯೆಯ ದಿನ ಹುಟ್ಟಿದನು.

ವಿಶ್ವಾಮಿತ್ರನು ಈತನ ಉಪನಯನನ್ನು ಮಾಡಿದನು. ವಿಷ್ಣುವು ಈತನಿಗೆ ಗರುಡ, ಮಯೂರ, ಕುಕ್ಕುಟ ಮುಂತಾದ ವಾಹನಗಳನ್ನು ಕೊಟ್ಟನು. ವಾಯುವು ಧ್ವಜವನ್ನೂ ಸರಸ್ವತಿಯು ವೀಣೆಯನ್ನೂ ಬ್ರಹ್ಮದೇವನು ಹೋತವನ್ನೂ ಮತ್ತು ಶಂಭವು ಒಂದು ಕುರಿಯನ್ನೂ ಕೊಟ್ಟರು. ಸ್ತ್ರೀಯರು ಈತನ ದರ್ಶನವನ್ನು ತೆಗೆದು ಕೊಳ್ಳುವುದಿಲ್ಲ. ಇದಕ್ಕೆ ಪುರಾಣದಲ್ಲಿ ಯಾವ ಆಧಾರವೂ ಇಲ್ಲ. 'ಶಿವಲೀಲಾಮೃತ' ಎಂಬ ಪುರಾಣದಲ್ಲಿ ತನ್ನ ದರ್ಶನವನ್ನು ಪಡೆದ ಸ್ತ್ರೀಯರು ಏಳು ಜನ್ಮಗಳ ಕಾಲ ವಿಧವೆಯರಾಗುವರು! ಎಂಬ ಶಾಪವನ್ನು ಇವನು ಕೊಟ್ಟಿರುವನೆಂದಿದೆ. ಚಿಕ್ಕಮಕ್ಕಳ ಆರೋಗ್ಯರಕ್ಷಣೆಗಾಗಿ ಈತನನ್ನೂ, ಸಪ್ತಮಾತೆಯರನ್ನೂ ಪೂಜಿಸುವ ರೂಢಿಯಿದೆ. ತಾರಕಾಸುರನನ್ನು ವಧಿಸಲು ಈತನು ಜನ್ಮತಾಳುವನೆಂದು ಬ್ರಹ್ಮದೇವನು ವರವನ್ನು ಕೊಟ್ಟಿದ್ದನು. ಜನ್ಮತಾಳಿದ ಏಳು ದಿನಗಳಲ್ಲಿ ಈತನು ತಾರಕಾಸುರನನ್ನು ವಧಿಸಿದನೆಂದು ಪದ್ಮಪುರಾಣ ಮತ್ತು ಮತ್ಯಪುರಾಣದಲ್ಲಿ ಹೇಳಿದೆ. ೨೪, ಕಾಲ ಬಹುದೀರ್ಘಕಾಲದವರೆಗೆ ರಾಜ್ಯವನ್ನಾಳುತ್ತಿದ್ದ ರಾಮನಿಗೆ ತಪಸ್ವಿಯ ವೇಷವನ್ನು ಧರಿಸಿ ಕಾಲನು, “ಕೇವಲ ನಿನ್ನೊಡನೆ ಮಾತಾಡುವದಿದೆ' ಎಂದು ತಿಳಿಸಿದನು. ರಾಮನು ಆತನಿಗೆ ಸ್ವಾಗತವನ್ನು ಕೋರಿ ಏಕಾಂತದಲ್ಲಿ ಭೇಟಿಯಾದನು. ಅವನು ರಾಮನಿಗೆ 'ನಾನು ಬ್ರಹ್ಮದೇವನ ದೂತನಾಗಿದ್ದೇನೆ. ವಿಷ್ಣುವಿನ ರೂಪದಲ್ಲಿಯ ನಿನ್ನ ಪುತ್ರನಾದ ಕಾಲನು ನಾನು. ಪೃಥ್ವಿಯ ಮೇಲೆ ವಾಸವಿರುವ ನಿನ್ನ ಸಮಯವು ಮುಗಿದಿದೆ ಎಂಬುದನ್ನು ತಿಳಿಸಲು ಬಂದಿದ್ದೇನೆ' ಎಂದು ಹೇಳಿದನು. ೨೫, ಕಾಲಕೇಯ ಕಾಲಕಾ ವೈಶ್ಯಾನರನೆಂಬ ದಾನವನ ಕನ್ಯಯಾಗಿದ್ದು ಪ್ರಜಾಪತಿ ಕಶ್ಯಪನ ಮಡದಿಯಾಗಿದ್ದಳು. ಈಕೆಗೆ ಕಾಲಕೇಯ (ಕಾಲಖಂಡ) ಹೆಸರಿನ ಅಸಂಖ್ಯ ಮಕ್ಕಳಾದರು. ಅವರಿಗೆ ಕಾಯಕೇಯರೆನ್ನುತ್ತಾರೆ.