ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್೩ರಿ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ೨೬. ಕಾಲಿಂದಿ ಅಸಿತರಾಜನ ಇಬ್ಬರು ರಾಣಿಯರಲ್ಲಿ ಕಾಲಿಂದಿಯೂ ಒಬ್ಬಳು. ಅವರಿಬ್ಬರೂ ಗರ್ಭವತಿಯರಾಗಿದ್ದಾಗ ರಾಜನು ಮೃತಪಟನು. ಆಗ ಸವತಿಯು ಕಾಲಿಂದಿಗೆ ವಿಷ ಬೆರೆಸಿದ ಆಹಾರವನ್ನು ಕೊಟ್ಟಳು. ಆಗ ಕಾಲಿಂದಿಯು ಹಿಮಾಲಯ ಪರ್ವತದಲ್ಲಿ ವಾಸವಿದ್ದ ಚ್ಯವನಭಾರ್ಗವನ ಬಳಿಗೆ ಹೋದಳು. ಆತನಿಗೆ ನಮಸ್ಕರಿಸಿ ತನಗೆ ಒಂದು ಗಂಡು ಮಗುವಾಗಬೇಕೆಂದು ಪ್ರಾರ್ಥಿಸಿದಳು. 'ವಿಷವನ್ನು ಅರಗಿಸಿಕೊಂಡ ಒಬ್ಬ ಉತ್ಕೃಷ್ಟ ಮಗನನ್ನು ಪಡೆಯುವೆ” ಎಂದು ಭಾರ್ಗವನು ಆಶೀರ್ವದಿಸಿದನು. ಅವಳಿಗೆ ಹುಟ್ಟಿದ ಮಗನೆಂದರೆ 'ಸಗರ'. ೨೭. ಕುಂಭಕರ್ಣ ಈತನು ಪುಲಸ್ಯನ ಮಗನಾದ ವಿಶ್ರವಾ ಋಷಿ ಹಾಗೂ ಕೈಕಸಿಗೆ ಜನಿಸಿದ ಪುತ್ರನು. ಕೈಕಸಿಗೆ ಹುಟ್ಟಿದ ನಾಲ್ಕು ಗಂಡುಮಕ್ಕಳಲ್ಲಿ ಈತನು ಎರಡನೆಯವನು. ಭಾಗವತಪುರಾಣದಲ್ಲಿ ಈತನು ತಾಯಿಯ ಹೆಸರು ಕೇಶಿನಿ ಎಂದಿದೆ. ಇವನು ರಾವಣನ ತಮ್ಮ, ಈತನು ಹುಟ್ಟಿದ ಕ್ಷಣವೇ ಸಾವಿರಾರು ಜನರನ್ನು ನುಂಗಿ ಹಾಕಿದನು. ಆಗ ಜನರೆಲ್ಲರೂ ಇಂದ್ರನಿಗೆ ದೂರು ಕೊಟ್ಟರು. ಇಂದ್ರನು ಕೋಪಗೊಂಡು ಕುಂಭಕರ್ಣನ ಮೇಲೆ ತನ್ನ ಆಯುಧವಾದ ವಜ್ರವನ್ನೆಸೆದನು. ಅದರಿಂದ ರೊಚ್ಚಿಗೆದ್ದ ಕುಂಭಕರ್ಣನು ಜನರನ್ನು ಇನ್ನಷ್ಟು ಕಾಡಹತ್ತಿದನು. ಐರಾವತದ ಒಂದು ದಂತವನ್ನು ಕಿತ್ತು ಇಂದ್ರನ ಮೇಲೆ ಎಸೆದು ಅವನನ್ನು ಗಾಯಗೊಳಿಸಿದನು. ಬ್ರಹ್ಮದೇವನು ಕುಂಭಕರ್ಣನಿಗೆ 'ನೀನು ಯಾವಾಗಲೂ ನಿದ್ರೆಯಲ್ಲಿ ಮುಳುಗಿರು!” ಎಂಬ ಶಾಪವನ್ನು ಕೊಟ್ಟಿದ್ದನು. ರಾವಣನ ವಿನಂತಿಯಿಂದ ಕುಂಭಕರ್ಣನಿಗೆ ಉಃಶಾಪವು ದೊರಕಿ, ಆರು ತಿಂಗಳ ಗಾಢನಿದ್ರೆಯ ನಂತರ ಒಂದು ದಿನದ ಮಟ್ಟಿಗೆ ಎಚ್ಚರಾಗಿರುವ ಅವಕಾಶವನ್ನು ಪಡೆದನು. ಕುಬೇರನೊಡನೆ ಸ್ಪರ್ಧಿಸಲು ಆತನು ಹತ್ತು ಸಾವಿರ ವರ್ಷಗಳ ತಪಸ್ಸನ್ನು ಮಾಡಿದನು. ಬ್ರಹ್ಮದೇವನು ವರ ಕೊಡಲು ಸಿದ್ದನಾದಾಗ ದೇವತೆಗಳು ಅದನ್ನು ವಿರೋಧಿಸಿದರು. ಇದಕ್ಕೆ ಕಾರಣ ಕುಂಭಕರ್ಣನೇ ಆಗಿದ್ದನು. ಆತನು ನಂದನವನದಲ್ಲಿಯ ಏಳು ಅಪ್ಸರೆಯರನ್ನೂ, ಇಂದ್ರನ ಹತ್ತು ಸೇವಕರನ್ನೂ, ಮತ್ತು ಅನೇಕ ಋಷಿಗಳು ಮತ್ತಿತರರನ್ನೂ ತಿಂದುಹಾಕಿದ್ದನು. ದೇವತೆಗಳ ಬಯಕೆಯನ್ನು ಪೂರ್ಣಗೊಳಿಸಲು ಬ್ರಹ್ಮದೇವನು ಸರಸ್ವತಿಯಿಂದ ಕುಂಭಕರ್ಣನು ವರವನ್ನು ಬೇಡಿಕೊಳ್ಳುವಂತೆ ಮಾಡಿದನು. ಆಗ ಕುಂಭಕರ್ಣನು ದೀರ್ಘಕಾಲ ನಿದ್ರೆಯ ವರವನ್ನು ಬೇಡಿ