ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ೩೯೩ ಹೇಳಲು ಪ್ರಯತ್ನಿಸಿದನು. ತನ್ನ ಸರಿಸಾಟಿಯಿಲ್ಲದ ಗದೆಯನ್ನು ಈತನು ಹನುಮಂತನಿಗೆ ಕೊಟ್ಟನು. ೨೯. ಕುಶನಾಭ, ಕುಶಕನೈಯರು ಕುಶನಾಭನು ಬ್ರಹ್ಮನ ಪುತ್ರನಾಗಿದ್ದನು. ಈತನು ಕುಶರಾಜನಿಗೆ ವಿದರ್ಭಕಸ್ಯೆಯಿಂದ ಜನಿಸಿದ ನಾಲ್ಕನೆಯ ಮಗ ಈತನು ಧೃತಾಚಿ ಎಂಬ ಅಪ್ಪರೆಯಿಂದ ನೂರು ಕನೈಯರನ್ನು ಪಡೆದನು. ಅವರೆಲ್ಲರೂ ಅನುಪಮ ಸುಂದರಿಯರಾಗಿದ್ದರು. ಅವರ ರೂಪಕ್ಕೆ ಬಲಿಯಾಗಿ ವಾಯುವು ಕಾಮ ಮೋಹಿತನಾಗಿ, ಅವರೊಡನೆ ವಿವಾಹವಾಗುವ ಪ್ರಸ್ತಾಪವನ್ನಿಟ್ಟನು. ಆದರೆ ಆ ಕುಶಕನೈಯರು ಈತನ ಬೇಡಿಕೆಯನ್ನು ನಿರಾಕರಿಸಿದರು. ಅದರಿಂದ ಕೋಪಗೊಂಡ ವಾಯುವು ಆ ಕನೈಯರ ಅಂಗಾಂಗಗಳಲ್ಲಿ ಪ್ರವೇಶಿಸಿ ಅವರನ್ನು ಭಷ್ಟಗೊಳಿಸಿದನು. ಆ ಕನ್ಯಯರ ರೂಪವು ನಷ್ಟವಾಗಿ ಅವರು ಕುಬೈಯರಾದರು. ಕುಶನಾಭನು ಅವರ ವಿವಾಹವನ್ನು ' ಸೋಮದಾ' ಎಂಬ ಗಂಧರ್ವಿಯ ಮಗನಾದ ಬ್ರಹ್ಮದತ್ತ ನೊಡನೆ ಮಾಡಿಕೊಟ್ಟನು. ಪತಿಯ ಪ್ರಥಮ ಸ್ಪರ್ಶದಿಂದ ಅವರ ಕುರೂಪತ್ವವು ಇಲ್ಲದಂತಾಗಿ ಅವರು ಮೊದಲಿನಂತೆ ಸೌಂದರ್ಯಸಂಪನ್ನೆಯರಾದರು. ಆ ದೇಶಕ್ಕೆ “ಕಾನ್ಯಕುಬ್ಬ'ವೆಂಬ ಹೆಸರು ಬಂದಿತು. ಕುಶನಾಭನು 'ಮಹೋದಯ'ವೆಂಬ ಪಟ್ಟಣವನ್ನು ಸ್ಥಾಪಿಸಿದನು. ೩೦. ಕುಶ-ಲವ ರಾಮನು ಲೋಕಪವಾದಕ್ಕೆ ಅಂಜಿ ಸೀತೆಯನ್ನು ಬಿಟ್ಟುಕೊಟ್ಟನು. ರಾಮನ ಆಜ್ಞೆಯನುಸಾರ ಲಕ್ಷ್ಮಣನು ಆಕೆಯನ್ನು ತಮಸಾ ನದಿಯ ತೀರದಲ್ಲಿದ್ದ ಒಂದು ಆಶ್ರಮದ ಬಳಿ ಬಿಟ್ಟುಬಂದನು. ಶಿಷ್ಯರಿಂದ ಇದನ್ನು ಅರಿತ ವಾಲ್ಮೀಕಿಯು ತನ್ನ ಆಶ್ರಮದಲ್ಲಿ ಸೀತೆಗೆ ಅವಶ್ಯವಿದ್ದ ವ್ಯವಸ್ಥೆಯನ್ನು ಮಾಡಿದನು. ಸೀತೆಯು ಅಲ್ಲಿ ಪ್ರಸೂತಳಾಗಿ, ಅವಳಿಗೆ ಹುಟ್ಟಿದ ಮಕ್ಕಳೆಂದರೆ ಕುಶ-ಲವರು, ಇವರು ಹುಟ್ಟಿದ ದಿನದಂದು ಶತ್ರುಘ್ನನು ವಾಲ್ಮೀಕಿಯ ಆಶ್ರಮದಲ್ಲಿಯೇ ಇದ್ದನು. ದರ್ಭೆ ಮತ್ತು ಮೆದ(ಒಂದು ಪ್ರಕಾರದ)ಯಿಂದ ಈ ಮಕ್ಕಳ ಮೇಲೆ ಪ್ರೋಕ್ಷಣೆ ಮಾಡಿದ್ದರಿಂದ ಇವರಿಗೆ ಕುಶ-ಲವ ಎಂಬ ನಾಮಾಭಿಮಾನವಾಯಿತು. ವಾಲ್ಮೀಕಿಯು ಈ ಬಾಲಕರಿಗೆ ಒಳ್ಳೆಯ ಸಂಸ್ಕಾರಗಳನ್ನು ಮಾಡಿದನು. ಅವರನ್ನು ವೇದ, ಧನುರ್ವೇದ, ಕ್ಷಾತ್ರ ವಿದ್ಯೆಗಳಲ್ಲಿ ಪರಿಣತರನ್ನಾಗಿ ಮಾಡಿದನು. ವೇದಗಳ ದೃಢೀಕರಣಕ್ಕಾಗಿ