ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯೪ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಅವರಿಗೆ ರಾಮಾಯಣವನ್ನು ಕಲಿಸಿದನು. ರಾಮಾಯಣ ಕಾವ್ಯವನ್ನು ಹಾಡಿ ತೋರಿಸುವ ನೆವದಲ್ಲಿ ಕುಶ-ಲವರ ಮತ್ತು ರಾಮನ ಭೇಟಿ ನಡೆಯಿತೆಂದು ವಾಲ್ಮೀಕಿರಾಮಾಯಣದಲ್ಲಿ ಹೇಳಿದ್ದಾರೆ. ಅಶ್ವಮೇಧಯಜ್ಞದ ಸಮಯದಲ್ಲಿ ರಾಮನು ಇವರಿಬ್ಬರನ್ನೂ ಅಯೋಧ್ಯೆಗೆ ಕರೆದುಕೊಂಡು ಹೋಗಿದ್ದನು. ಎಳ್ಳಷ್ಟೂ ಧನದ ಅಪೇಕ್ಷೆಯನ್ನು ಇಟ್ಟುಕೊಳ್ಳದೆ, ಈ ಬಾಲಕರು ಸುಶ್ರಾವ್ಯವಾಗಿ ತಾಳ-ಲಯಬದ್ದವಾಗಿ 'ರಾಮಾಯಣ' ಮಹಾಕಾವ್ಯದ ಇಪ್ಪತ್ತು ಸರ್ಗಗಳನ್ನು ಪ್ರತಿದಿನ ಹಾಡುತ್ತಿದ್ದರು. ಆಗ ಇವರು ವಾಲ್ಮೀಕಿ ಪುತ್ರರೆಂದೆನಿಸಿ ಕೊಳ್ಳುತ್ತಿದ್ದರು. ರಾಮನು ಅನಂತರ ಇವರು ತನ್ನ ಪುತ್ರರೆಂದು ಅರಿತುಕೊಂಡನು. ಅವನಿಗೆ ಕೋಶಲ ದೇಶದ ರಾಜ್ಯವನ್ನೂ ಕುಶನಿಗೆ ಉತ್ತರಕೋಶಲ ದೇಶವನ್ನೂ ಕೊಟ್ಟನು. ಸುಮತಿ ಮತ್ತು ಕುಂಜಾನನಾ ಎಂಬ ಇಬ್ಬರು ಮಡದಿಯರು ಅವನಿಗಿದ್ದರು. ಕುಶನ ಹೆಂಡತಿಯ ಹೆಸರು ಚಂಪಕಾ ಎಂದಿತ್ತು. ರಾಮನ ಅಶ್ವಮೇಧದ ಕುದುರೆಯನ್ನು ಲವ-ಕುಶರು ಸೆರೆಹಿಡಿದರು. ಕುದುರೆಯನ್ನು ಮರಳಿ ಪಡೆಯಲು ಶತ್ರುಘ್ನ, ಲಕ್ಷ್ಮಣ, ಭರತ, ಹನುಮಂತ ಇವರಷ್ಟೇ ಅಲ್ಲದೇ, ಸ್ವತಃ ರಾಮನೂ ಲವ-ಕುಶರೊಡನೆ ಯುದ್ಧಕ್ಕೆ ನಿಂತಾಗ, ಲವ-ಕುಶರು, ರಾಮನೊಬ್ಬನನ್ನುಳಿದು ಮಿಕ್ಕೆಲ್ಲವರನ್ನೂ ಸೋಲಿಸಿದರು. ಲವ-ಕುಶರು ತನ್ನ ಸ್ವಂತ ಮಕ್ಕಳು ಎಂದು ತಿಳಿದುಬಂದ ರಾಮನ ಕೈಯಿಂದ ಧನಸ್ಸು ಕಳಚಿಬಿದ್ದಿತು. ಎಲ್ಲರನ್ನೂ ಗೆದ್ದುಕೊಂಡ ಲವ-ಕುಶರು ಸೀತೆಯ ಬಳಿ ಬಂದರು. ಸೀತೆಯು ಅವರೆಲ್ಲರನ್ನೂ ಬಿಟ್ಟುಕೊಡಲು ಲವ-ಕುಶರಿಗೆ ಹೇಳಿದಳು. ಆಗ ಕುಶ-ಲವರು ಆ ಕುದುರೆಯ ಸಂರಕ್ಷಕರಾದರು. ರಾಮನ ಯಜ್ಞವು ಪೂರ್ಣಗೊಂಡಿತು. ಮೇಲೆ ವಿವರಿಸಿದ ಕಥೆಯು ಬೇರೆ ಗ್ರಂಥಗಳಲ್ಲಿ ಕಂಡುಬಂದರೂ ವಾಲ್ಮೀಕಿ ರಾಮಾಯಣದಲ್ಲಿಲ್ಲ. ೩೧. ಕೃಶಾಶ್ವ - ಈ ಹೆಸರಿನ ಒಬ್ಬ ಋಷಿಯಿದ್ದನು. ಆತನು ಪ್ರಜಾಪತಿಯಾಗಿದ್ದನು. ಪ್ರಾಚೇತಸದಕ್ಷನು ತನ್ನ ಅರವತ್ತುಸಾವಿರ ಕನೈಯರಲ್ಲಿ ಇಬ್ಬರನ್ನು ಇವನಿಗೆ ವಿವಾಹ ಮಾಡಿಕೊಟ್ಟಿದ್ದನು. ಎಲ್ಲ ಅಸ್ತ್ರಗಳೆಂದರೆ ಕೃಶಾಶ್ವನ ಪುತ್ರರು. ತಾಟಕಿಯ ವಧೆಯಾದ ನಂತರ ದೇವತೆಗಳು ಸಂತೋಷಗೊಂಡು ಎಲ್ಲ ಅಸ್ತ್ರಗಳನ್ನೂ, ಅಂದರೆ, ಕೃಶಾಶ್ವಪ್ರಜಾಪತಿಯ ಪುತ್ರರನ್ನು ರಾಮನಿಗೆ ಕೊಡಬೇಕೆಂದು ವಿಶ್ವಾಮಿತ್ರನಿಗೆ ಹೇಳಿದರು. ವಿಶ್ವಾಮಿತ್ರನು ಈ ಅಸ್ತ್ರಗಳನ್ನು ರಾಮನಿಗೆ ಕೊಟ್ಟನು.