ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ೩೭ ರಾಮನು ವನವಾಸಕ್ಕೆ ಹೋದನಂತರ, ಭರತನು ಇವಳನ್ನು ಭೇಟಿಯಾದಾಗ ಕೈಕೇಯಿಯು ಬಲು ಆನಂದದಿಂದ ಭರತನಿಗೆ ರಾಜ್ಯಾಭಿಷೇಕವಾಗಲಿದೆ ಎಂಬ ವಾರ್ತೆಯನ್ನು ತಿಳಿಸಿದಳು. ಅಷ್ಟೇ ಅಲ್ಲದೆ, ಮೊದಲು ದಶರಥರಾಜನ ಉತ್ತರ ಕ್ರಿಯೆಯನ್ನು ಪೂರೈಸಿ ಅನಂತರ ರಾಜ್ಯಾಭಿಷೇಕವನ್ನು ಹೊಂದು! ಎಂದು ದುಗುಡದಿಂದ ಆಜ್ಞೆ ಮಾಡಿದಳು. ಇದನ್ನು ಕೇಳಿ ಭರತನಿಗೆ ದುಃಖವಾಯಿತು. ಕಟುವಾದ ಶಬ್ದಗಳಲ್ಲಿ ಭರತನು ಕೈಕೇಯಿಯನ್ನು ತೆಗಳಿದನು. ಕೈಕೇಯಿಯು ಆತ್ಮಕಾಮಿ, ಸದಾಚಂಡಿ, ಕ್ರೋಧವುಳ್ಳವಳು, ತಾನೊಬ್ಬಳೇ ಜಾಣೆ ಎಂದು ತಿಳಿದುಕೊಂಡವಳು ಎಂದು ಮುಂತಾಗಿ ಭರತನು ಈಕೆಯನ್ನು ಜರೆದಿದ್ದಾನೆ. ವನವಾಸದಲ್ಲಿ ಭರದ್ವಾಜರ ಆಶ್ರಮದಲ್ಲಿದ್ದಾಗ ಖಿನ್ನನಾದ ರಾಮನು, `ನೀನು ಅಯೋಧ್ಯೆಗೆ ಮರಳಿ ಮಾತೆಯರನ್ನು ರಕ್ಷಿಸು!” ಎಂದು ಲಕ್ಷ್ಮಣನಿಗೆ ಆಜ್ಞಾಪಿಸಿದನು. ಮಾತ್ರವಲ್ಲದೆ, 'ಐಶ್ವರ್ಯದ ಮದವೇರಿದ ಕೈಕೇಯಿಯು, ಕೌಸಲ್ಯ ಮತ್ತು ಸುಮಿತ್ರೆಯರನ್ನು ಪೀಡಿಸಬಹುದು; ಕ್ಷುದ್ರಬುದ್ದಿಯವಳಾದ್ದರಿಂದ ದ್ವೇಷದಿಂದ ಅವರಿಗೆ ಅನ್ಯಾಯ ಮಾಡಬಹುದು. ಒಂದುವೇಳೆ ಅವರಿಗೆ ವಿಷವನ್ನೂ ಹಾಕಬಹುದು” ಎಂಬ ತನಗಿದ್ದ ಭೀತಿಯನ್ನು ಲಕ್ಷ್ಮಣನೆದುರು ವ್ಯಕ್ತಪಡಿಸಿದನು. ಕೌಸಲ್ಯಗೂ ಸಹ ಕೈಕೇಯಿಯ ಬಗ್ಗೆ ಇದೇ ಭೀತಿಯಿತ್ತು. ದಶರಥನು ತನ್ನ ಮನಸ್ಸಿನ ವ್ಯಥೆಯನ್ನು ಈ ರೀತಿ ವ್ಯಕ್ತಗೊಳಿಸಿದ್ದಾನೆ: 'ಬೂದಿ ಮುಚ್ಚಿದ ಕೆಂಡದಂತೆ ಇದ್ದ ಈ ಸ್ತ್ರೀಯ ಕಪಟನಾಟಕಕ್ಕೆ ನಾನು ಮೋಸಹೋದೆ. ನನ್ನನ್ನು ಮುಟ್ಟಬೇಡ! ವಿಧವೆಯಾಗಿ ರಾಜ್ಯವನ್ನಾಳು!” ಪತಿಘಾತಿನಿ, ಕುಲಘಾತಿನಿ ಎಂಬ ವಿಶೇಷಣಗಳಿಂದ ಸುಮಂತ್ರನು ಆಕೆಯನ್ನು ಸಂಬೋಧಿಸಿದ್ದಾನೆ. ಶತ್ರುಘ್ನನು ಈಕೆಯನ್ನು ಅತಿ ತೀಕ್ಷ್ಯ ಶಬ್ದಗಳಲ್ಲಿ ತೆಗಳಿದ್ದಾನೆ. ಲೋಕನಿಂದೆಗೆ ಗುರಿಯಾದ ಕೈಕೇಯಿಯು ಭರದ್ವಾಜಮುನಿಯ ಕಾಲಿಗೆರಗಿದಾಗ ಭರತನು ಇವಳ ಬಗ್ಗೆ ಈ ರೀತಿ ನುಡಿದನು: “ಇವಳಿಂದ ರಾಮ-ಲಕ್ಷ್ಮಣರ ಆಯುಸ್ಸು ನಷ್ಟವಾಯಿತು. ದಶರಥರಾಜನು ಪುತ್ರವಿಹೀನನಾಗಿ ಸ್ವರ್ಗವಾಸಿಯಾದನು. ಕೋಪ, ಅವಿವೇಕ, ಗರ್ವ, ಐಶ್ವರ್ಯದ ಲೋಭ ಇವನ್ನೆಲ್ಲ ಹೊಂದಿದ ಇವಳು ಆರ್ಯಳಿದ್ದರೂ, ಅನಾರ್ಯಳಾಗಿರುವಳು. ದುರ್ದೈವದಿಂದ ಇಂಥವಳು ನನ್ನ ಮಾತೆಯಾಗಿದ್ದಾಳೆ? ೩೭. ಕೌಸಲ್ಯ ಕೌಸಲ್ಯಯು ಕೋಸಲ ದೇಶದ ಭಾನುಮಾನನೆಂಬ ರಾಜನ ಪುತ್ರಿ; ದಶರಥರಾಜನ ಪಟ್ಟದ ರಾಣಿ, ತವರಿನಿಂದ ಇವಳಿಗೆ ಒಂದು ಸಹಸ್ರ ಗ್ರಾಮಗಳು