ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೯೮ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಸ್ತ್ರೀಧನವಾಗಿ ದೊರೆತಿದ್ದವು. ಪಾಯಸದ ಅರ್ಧವನ್ನು ದಶರಥನು ಇವಳಿಗೆ ಕೊಟ್ಟನು. ತನ್ನ ಪುತ್ರನಾದ ರಾಮನಿಗೆ ಯೌವರಾಜ್ಯಾಭಿಷೇಕವಾಗಲಿದೆ ಎಂಬುದನ್ನು ಕೇಳಿ ಅವಳಿಗೆ ಎಷ್ಟು ಸಂತೋಷವಾಯಿತೋ, ಅಷ್ಟೇ ದುಃಖವು ರಾಮನು ವನವಾಸಕ್ಕೆ ಹೋಗಬೇಕಾಗಿದೆ ಎಂಬುದನ್ನು ತಿಳಿದಾಗ ಕೌಸಲ್ಯಗೆ ಉಂಟಾಯಿತು. ಇವಳಿಗೆ ಪತಿಯಿಂದ ಹೆಚ್ಚಾಗಿ ಸುಖವು ಲಭಿಸಲಿಲ್ಲ. ಹೀಗಿರುವಾಗ, ತನ್ನ ಪುತ್ರ ಸುಖವೂ ಇಲ್ಲದಾಗುತ್ತಿದೆ ಎಂಬ ಕಲ್ಪನೆಯನ್ನು ಕೂಡ ಅವಳಿಗೆ ಸಹಿಸಲಿಕ್ಕಾಗಲಿಲ್ಲ. ರಾಮನು ವನವಾಸಕ್ಕೆ ಹೋಗಬಾರದು, ಹಾಗೆ ಹೋಗುವುದಾದರೆ ತನ್ನನ್ನೂ ಜೊತೆಗೆ ಕರೆದುಕೊಂಡೇ ಹೋಗಬೇಕೆಂದು ಅವಳು ರಾಮನಿಗೆ ಪರಿಪರಿಯಾಗಿ ಹೇಳಿ, ಇಲ್ಲದಿದ್ದರೆ ಪ್ರಾಣತ್ಯಾಗ ಮಾಡುವ ತನ್ನ ನಿರ್ಧಾರವನ್ನು ವ್ಯಕ್ತಮಾಡಿದಳು. ಆಗ ರಾಮನು ಅವಳನ್ನು ಸಂತೈಸಿ ಅಯೋಧ್ಯೆಯಲ್ಲಿಯೇ ಇರಲು ಹೇಳಿದನು. ಕೈಕೇಯಿಯು ಇವಳಿಗೆ ಯಾವಾಗಲೂ ಕೊಂಕುಮಾತುಗಳನ್ನಾಡುತ್ತಿದ್ದಳು; ಆದರೆ ಕೌಸಲ್ಯಯು ಮಾತ್ರ ಕೈಕೇಯಿಯೊಡನೆ ಅಕ್ಕನಂತೆಯೇ ವರ್ತಿಸುತ್ತಿದ್ದಳು. ಭರತನ ಬಗ್ಗೆ ಇವಳಿಗೆ ಸಂದೇಹವುಂಟಾಗಿತ್ತಾದರೂ ಅವನ ವರ್ತನೆಯಿಂದ ಅದು ದೂರವಾಯಿತು. ತಾನು ಅಯೋಧ್ಯೆಯಲ್ಲಿ ಇರದ ಕಾಲದಲ್ಲಿ ಕೌಸಲ್ಯಗೆ ತಾಪತ್ರಯ ವಾಗಬಹುದು ಎಂಬುದರ ಕಲ್ಪನೆ ರಾಮನಿಗಿತ್ತು. ಪಿತನನ್ನು ನಿಗ್ರಹಿಸಿ ರಾಜ್ಯವನ್ನು ಕಬಳಿಸುವ ಸಲಹೆಯನ್ನು ಲಕ್ಷ್ಮಣನು ಕೊಟ್ಟನು; ಆಗ ಪುತ್ರವಾತ್ಸಲ್ಯದಿಂದ ಅಂಧಳಾದ ಕೌಸಲ್ಯಯು ಅದಕ್ಕೆ ಸಮ್ಮತಿಸಿದಳು. ರಾಮನು ವನಕ್ಕೆ ತೆರಳಿದ ನಂತರ ಈಕೆಯು ದಶರಥನಿಗೆ ಚುಚ್ಚುಮಾತನಾಡಹತ್ತಿದಳು. ದಶರಥನು ಆಗ . ಅತ್ಯಂತ ದೀನನಾಗಿ ಕೌಸಲ್ಯಗೆ ಕೈಜೋಡಿಸಿದನು. ಇದರಿಂದಾಗಿ ತಾನು ಈ ರೀತಿ ನುಡಿಯುವದು ತಪ್ಪೆಂದು ಆಕೆಗೆ ಎನಿಸಿತು. ಅತಿಯಾದ ಪುತ್ರಶೋಕದಿಂದ ತಾನು ಈ ರೀತಿ ನುಡಿದನೆಂದು ಕರಗಳನ್ನು ಜೋಡಿಸಿ ತಪೊಪ್ಪಿಕೊಂಡಳು. ಇವಳು ಮೃದುಸ್ವಭಾವದವಳು; ತುಂಬಾ ಖಿನ್ನವಾದ ಅವಸ್ಥೆಯಲ್ಲಿದ್ದವಳು; ಉದಾಸೀನಭಾವ ತಳೆಯಬೇಕಾಗಿ ಬಂದವಳು. ೩೮. ಗಾಲವ ಗಾಲವನು ವಿಶ್ವಾಮಿತ್ರನ ಶಿಷ್ಯ; ಗುರುಸೇವೆಯನ್ನು ನಿಷ್ಠೆಯಿಂದ ಮಾಡಿ ಗುರುಕೃಪೆಯನ್ನು ಸಂಪಾದಿಸಿದ್ದನು. ಈತನ ತೀವಬೇಡಿಕೆಯಂತೆ ವಿಶ್ವಾಮಿತ್ರನು ಇವನಿಗೆ ಎಂಟುನೂರು ಶ್ಯಾಮಕರ್ಣಗಳಿದ್ದ ಅಶ್ವಗಳನ್ನು ಗುರುದಕ್ಷಿಣೆಯಾಗಿ ತರಲು ಹೇಳಿದನು. ಇಷ್ಟೊಂದು ಗುರುದಕ್ಷಿಣೆಯನ್ನು ಕೊಡಲು ಆತನಿಗೆ