ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೦೧


೪೨. ಚೂಲಿ

ಇವನೊಬ್ಬ ಬ್ರಹ್ಮರ್ಷಿ. ಸೋಮದಾ ಎಂಬ ಗಂಧರ್ವಿ ಚೂಲಿಯು
ತಪಸ್ಸನ್ನಾಚರಿಸುತ್ತಿದ್ದ ಕಾಲದಲ್ಲಿ ಉತ್ತಮವಾಗಿ ಸೇವೆ ಮಾಡಿದಳು. ಚೂಲಿಯು
ಸಂತೋಷಗೊಂಡು ಸೋಮದೆಗೆ ಒಬ್ಬ ಮಾನಸಪುತ್ರನನ್ನು ಕೊಟ್ಟನು. ಆತನ
ಹೆಸರು ಬ್ರಹ್ಮದತ್ತನೆಂದಿತ್ತು.

೪೩. ಚ್ಯವನ-ಭಾರ್ಗವ

ಭೃಗು ಋಷಿಯ ಪತ್ನಿಯ ಹೆಸರು ಪುಲೋಮೆ ಎಂದಿತ್ತು.
ಭೃಗುವಿನ ವೀರ್ಯದಿಂದ ಅವಳ ಉದರದಲ್ಲಿ ಗರ್ಭಸಂಭವವಾಯಿತು.
ಋಷಿಯು ಮಿಂದುಬರಲು ಜಲಾಶಯಕ್ಕೆ ಹೋದಾಗ ಈತನ ಆಶ್ರಮಕ್ಕೆ
ಪುಲೋಮನೆಂಬ ರಾಕ್ಷಸನು ಬಂದನು. ಪುಲೋಮೆಯ ಲಾವಣ್ಯಕ್ಕೆ ಮೋಹಿತನಾಗಿ
ಅವನು ಆಕೆಯನ್ನು ಅಪಹರಿಸಿದನು. ರಾಕ್ಷಸನ ಭೀತಿಯಿಂದ ಅವಳು ದಾರಿಯಲ್ಲಿ
ಪ್ರಸೂತಳಾದಳು. ಆ ಮಗುವಿನ ಹೆಸರು ಚ್ಯವನ. ಈ ಚ್ಯವನನ ತೇಜಸ್ಸಿನಿಂದ
ಆ ರಾಕ್ಷಸನು ಸುಟ್ಟುಹೋದನು. ಪುಲೋಮೆಯು ಮಗುವಿನ ಸಹಿತ ಆಶ್ರಮಕ್ಕೆ
ಹಿಂತಿರುಗಿದಳು. ಚ್ಯವನನು ವೇದಪಾರಂಗತ ನಾಗಿದ್ದನು. ಈತನ ಉಗ್ರ
ತಪಸ್ಸನ್ನಾಚರಿಸಿದನು. ಈ ಚೈವನನ ದೇಹದ ಮೇಲೆ ಹುತ್ತ ಬೆಳೆದರೂ ತಪಸ್ಸಿನಲ್ಲಿದ್ದ
ಆತನಿಗೆ ಅದರ ಪರಿವೆಯೇ ಇರಲಿಲ್ಲ. ಇದೇ ಕಾಡಿಗೆ ಶರ್ಯಾತಿ ಎಂಬ
ವೈವಸ್ವತ ಮನು ನ ಪುತ್ರನು ತನ್ನ ಪರಿವಾರದೊಂದಿಗೆ ಕ್ರೀಡೆಗಾಗಿ ತಲುಪಿದನು.
ಶರ್ಯಾತಿಯ ಮಗಳಾದ ಸುಕನ್ಯೆಯು ತನ್ನ ಸಖಿಯರೊಂದಿಗೆ ಆ ಹುತ್ತದ
ಸಮೀಪಕ್ಕೆ ಬಂದಳು. ಆ ಹುತ್ತದೊಳಗೆ ಹೊಳೆಯುತ್ತಿರುವ ಹಾಗೆ ಏನೋ
ಅವಳಿಗೆ ಕಂಡಿತು. ಅದು ಏನಿರಬಹುದೆಂಬ ಉತ್ಸುಕತೆಯಿಂದ ಅವಳು ಹುತ್ತದಲ್ಲಿ
ಹೊಳೆಯುವ ಭಾಗಕ್ಕೆ ಮುಳ್ಳುಕಡ್ಡಿಯನ್ನು ತಿವಿದಳು. ಆ ಮುಳ್ಳಿನಿಂದ ಋಷಿಯ
ಕಣ್ಣು ಒಡೆಯಿತು. ಆಗ ಕೋಪಗೊಂಡ ಋಷಿಯು ತಪೋಬಲದಿಂದ ರಾಜನ
ಪರಿವಾರದವರೆಲ್ಲರ ಮಲ-ಮೂತ್ರ ಕ್ರಿಯೆಯನ್ನು ವಿರೋಧಿಸಿದನು. ಆಗ ಆ
ರಾಜನು ಚೈವನನಿಗೆ ಶರಣಾದನು. ಚ್ಯವನನು 'ಸುಕನ್ಯೆಯೊಡನೆ ನನ್ನ ವಿವಾಹವನ್ನು
ನಡೆಯಿಸಿಕೊಡು!' ಎಂದು ಪ್ರಸ್ತಾಪವಿಟ್ಟನು. ಚ್ಯವನನು ವಯೋವೃದ್ಧನಾಗಿದ್ದರೂ
ರಾಜನು ತನ್ನ ಮಗಳಾದ ಸುಕನ್ಯೆಯ ಮದುವೆಯನ್ನು ಚ್ಯವನನೊಡನೆ
ಮಾಡಿಕೊಟ್ಟನು. ಒಂದು ಸಲ ಸುಕನ್ಯೆಯು ಅಶ್ವಿನೀಕುಮಾರರ ಕಣ್ಣಿಗೆಬಿದ್ದಳು.
ಅವರು ತಮ್ಮೊಡನೆ ಬರಲು ಸುಕನ್ಯೆಗೆ ಹೇಳಿದರು. ಸುಕನ್ಯೆಯು ತನ್ನ ಪಾತಿವ್ರತ್ಯದಿಂದ