ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಗಂಡುಮಕ್ಕಳಾದರು. ಅಗಸ್ತ್ಯನು ಸುಂದನನ್ನು ವಧಿಸಿದ ಕಾರಣ ಇವಳ ಮಕ್ಕಳ
ಸಹಿತ ಅಗಸ್ತ್ಯನ ಮೇಲೆ ಏರಿಹೋದಳು. ಆಗ ಅಗಸ್ತ್ಯನು ಇವಳಿಗೆ ಮತ್ತು
ಇವಳ ಮಕ್ಕಳನ್ನು ಶಪಿಸಿದನು. ಈ ಶಾಪದಿಂದ ತಾಟಕಿಯು ಕುರೂಪಗೊಂಡು
ರಾಕ್ಷಸಿಯಾದಳು. ಶಾಪ ತಗುಲಿದ ಸಮಯದಿಂದ ಅವಳು ಮಲದ ಮತ್ತು
ಕರುಷ ಎಂಬ ಪ್ರದೇಶದಲ್ಲಿ ವಾಸವಿದ್ದಳು. ಆ ಪ್ರದೇಶವು ಬಂಜರು ಭೂಮಿಯಾಗಿ
ತಾಟಕಾವನವೆಂದು ಕರೆಯಲ್ಪಟ್ಟಿತು. ವಿಶ್ವಾಮಿತ್ರನ ಆಶ್ರಮವು ಈ ವನದ
ಸಮೀಪದಲ್ಲಿಯೇ ಇತ್ತು. ವಿಶ್ವಾಮಿತ್ರನು ಕೈಗೊಂಡ ಯಜ್ಞಗಳಲ್ಲಿ ತಾಟಕಿಯ
ಮಕ್ಕಳು ವಿಘ್ನವನ್ನುಂಟುಮಾಡುತ್ತಿದ್ದರು. ತನ್ನ ಯಜ್ಞದ ರಕ್ಷಣೆಗಾಗಿ ವಿಶ್ವಾಮಿತ್ರನು
ರಾಮಲಕ್ಷ್ಮಣರನ್ನು ಅಯೋಧ್ಯೆಯಿಂದ ಕರೆತಂದನು. ವಿಶ್ವಾಮಿತ್ರನ ಹೇಳಿಕೆ
ಯನುಸಾರ ರಾಮನು ತಾಟಕಿಯ ಅವಯವಗಳನ್ನು ಕತ್ತರಿಸಿ ಆಕೆಯನ್ನು
ಕೊಂದುಹಾಕಿದನು.

೪೭. ತಾರ

ತಾರನೆಂದರೆ ಬೃಹಸ್ಪತಿಯಿಂದ ಹುಟ್ಟಿದ ವಾನರಪುತ್ರ. ಇವನು ಬಲ
ಬುದ್ದಿವಂತನಿದ್ದು ವಾನರಪ್ರಮುಖನಾಗಿದ್ದನು. ಈತನ ಮಗಳಾದ ರುಮೆಯು
ಸುಗ್ರೀವನ ಪತ್ನಿ. ಐದುಕೋಟಿ ವಾನರರನ್ನು ಜೊತೆಗೂಡಿಸಿಕೊಂಡು ಈತನು
ಸುಗ್ರಿವನ ಸೇನೆಯಲ್ಲಿ ದಾಖಲಾದನು. ಸೀತೆಯನ್ನು ಹುಡುಕಲು ಇವನು
ಜಾಂಬವಂತನ ಜೊತೆಗೆ ದಕ್ಷಿಣ ದಿಕ್ಕಿನತ್ತ ಹೋದನು. ಇತರ ವಾನರರೊಂದಿಗೆ
ಈತನು ಋಕ್ಷಗುಹೆಯಲ್ಲಿ ಪ್ರವೇಶಿಸಿದನು. ವಾಲಿಯ ಶಕ್ತಿ-ಬಲಗಳನ್ನು ಇವನು
ರಾವಣನಿಗೆ ನಿಶ್ಚಿತವಾಗಿ ಹೇಳಿದ್ದನು.

೪೮. ತುಂಬುರು

ಇವನು ಕಶ್ಯಪ ಹಾಗೂ ಪ್ರಾಧಾ ಇವರ ಮಕ್ಕಳಲ್ಲಿ ಒಬ್ಬ. ಈತನು
ಚೈತ್ರಮಾಸದ ಧಾತಾ ಎಂಬ ಸೂರ್ಯನೊಡನೆ ಇರುತ್ತಾನೆ. ರಂಭೆಯು ಇವನ
ಹೆಂಡತಿ. ಬ್ರಹ್ಮಸಭೆಯಲ್ಲಿ ಈತನು ನಾರದನ ಸಮೇತ ಸಂಗೀತವನ್ನು ಹೇಳಿ
ಭಗವಂತನನ್ನು ಸ್ತುತಿಸಿದ್ದನು. ಇವನು ರಂಭೆಯಲ್ಲಿ ಆಸಕ್ತನಾದ್ದರಿಂದ ಕುಬೇರನು
ಇವನಿಗೆ ಶಾಪಕೊಟ್ಟು 'ವಿರಾಧ' ರಾಕ್ಷಸನನ್ನಾಗಿ ಮಾಡಿದನು. ಇದನ್ನೆಲ್ಲ
ಗಮನಿಸಿದರೆ, ರಂಭೆಯು ಈತನು ಪತ್ನಿಯಾಗಿರಲಾರಳು ಎಂದು ಸ್ಪಷ್ಟ
ವಾಗುತ್ತದೆ.