ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೦೫


ಭರತನನ್ನು ಸತ್ಕರಿಸುವ ಸಂದರ್ಭದಲ್ಲಿ ಭರದ್ವಾಜನು ಇವನನ್ನು ಕರೆಯಿಸಿ
ಕೊಂಡಿದ್ದನು.

೪೯. ತೃಣಬಿಂದು

ತೃಣಬಿಂದು ಒಬ್ಬ ರಾಜರ್ಷಿ. ಭಾಗವತಪುರಾಣ ಹಾಗೂ
ವಾಯುಪುರಾಣಗಳ ಪ್ರಕಾರ ಈತನು ಬಂಧುರಾಜನ ಮಗ. ಈತನಿಗೆ ವಿಶಾಲ,
ಶೂನ್ಯಬಂಧು, ಧೂಮ್ರಕೇತು, ಇಡವಿಡಾ ಎಂಬ ನಾಲ್ಕು ಮಕ್ಕಳಿದ್ದರು.
ರಾಮಾಯಣ ಹಾಗೂ ವಿಷ್ಣುಪುರಾಣದ ಅನುಸಾರವಾಗಿ ಇವನು ಬುಧರಾಜನ
ಮಗನೆಂದು ತಿಳಿದುಬರುತ್ತದೆ. ಇವನ ಪತ್ನಿಯ ಹೆಸರು ಆಲಂಬುಷಾ ಎಂದಿತ್ತು.
ಇವನಿಗೆ ವಿಶಾಲ ಮತ್ತು ಇಲವಿಲಾ ಎಂಬ ಎರಡು ಮಕ್ಕಳಿದ್ದ ಉಲ್ಲೇಖವಿದೆ.
ಪುಲಸ್ತ್ಯಮುನಿಯ ಶಾಪದ ಕಲ್ಪನೆ ಇರದ ತೃಣಬಿಂದುವಿನ ಮಗಳಾದ
ಇಲವಿಲೆಯು ಪುಲಸ್ತ್ಯನ ತಪಸ್ಥಾನದ ಬಳಿ ಹೋದಳು. ಆತನ ಶಾಪದ
ಪ್ರಭಾವದಿಂದ ಇಲವಿಲೆಗೆ ಗರ್ಭಧಾರಣೆಯಾಯಿತು. ಅವಳು ಕೂಡಲೇ ತನ್ನ
ತಂದೆಯಾದ ತೃಣಬಿಂದುವಿಗೆ ನಡೆದ ವಿಷಯವನ್ನು ತಿಳಿಸಿದಳು. ಅವನು
ಧ್ಯಾನಸಾಧನೆಯಿಂದ ನಡೆದ ಸಂಗತಿಯ ಕಾರಣವನ್ನು ಅರಿತುಕೊಂಡು, ಪುಲಸ್ತ್ಯನ
ಬಳಿಗೆ ಹೋಗಿ ತನ್ನ ಕನ್ಯೆಯನ್ನು ಮದುವೆಯಾಗಲು ವಿನಂತಿಸಿದನು.
ತೃಣಬಿಂದುವಿನ ಈ ಕನ್ಯೆಯ ಹೆಸರು 'ಗೋ' ಎಂತಲೂ ಇತ್ತು.

೫೦. ತ್ರಿಶಂಕು

ಇವನ ನಿಜವಾದ ಹೆಸರು ಸತ್ಯವ್ರತ ಎಂದಿತ್ತು. ಶಾಪವೊಂದರ
ಪರಿಣಾಮವಾಗಿ ಇವನಿಗೆ ತ್ರಿಶಂಕು ಎಂಬ ಹೆಸರು ಬಂದಿತು. ಈತನ ತಂದೆಯ
ಹೆಸರು ನಿಬಂಧನ; ಕೆಲವು ಗ್ರಂಥಗಳಲ್ಲಿ ತಂದೆಯ ಹೆಸರು 'ತ್ರಯ್ಯಾರುಣ' ಇಲ್ಲವೇ
'ಅರುಣ' ಎಂದಿದೆ. ತ್ರಿಶಂಕುವು ಪೌರಾಣಿಕ ಕಾಲದವನಲ್ಲವೆಂದು ತೋರುತ್ತದೆ.
ಇವನು ಬ್ರಹ್ಮಜ್ಞ, ಸರ್ವಜ್ಞ ಎಂದೂ ಎನಿಸಿಕೊಳ್ಳುತ್ತಿದ್ದನು. ಈತನ ಆಚರಣೆಯು
ಸರಿ ಇರದ ಕಾರಣ ಇವನ ಬಗ್ಗೆ ಜನರು ಒಳ್ಳೆಯ ಅಭಿಪ್ರಾಯ ಹೊಂದಿರಲಿಲ್ಲ.
ಆತನು ಒಬ್ಬ ಬ್ರಾಹ್ಮಣಸ್ತ್ರೀಯನ್ನು ಅಪಹರಿಸಿದ್ದರಿಂದ ಇವನ ತಂದೆಯು ಇವನನ್ನು
ಗಡಿಯಾಚೆ ತಳ್ಳಿದನು. ಆಗ ಅವನು ವಿಶ್ವಾಮಿತ್ರನ ಬಳಿ ಇರಹತ್ತಿದನು. ಒಮ್ಮೆ
ಮಾಂಸಾಹಾರವು ಸಿಗದಿದ್ದಾಗ ತ್ರಿಶಂಕುವು ವಸಿಷ್ಠ ಋಷಿಯ ಕಾಮಧೇನುವನ್ನು
ಕೊಂದನು. ಗೋವಧೆ, ಸ್ತ್ರೀ ಅಪಹರಣ ಮತ್ತು ಈತನ ತಂದೆಯ ಕ್ರೋಧ- ಈ