ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೦೬
ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು
 


ತ್ರಿವಿಧ ಶಂಕುಗಳು ನಿನ್ನ ತಲೆಯ ಮೇಲೆ ಹುಟ್ಟುವವು ಮತ್ತು ನೀನು
ಪಿಶಾಚಿಯಾಗುವೆ!' ಎಂಬ ಶಾಪವನ್ನು ವಸಿಷ್ಠನು ಇವನಿಗೆ ಕೊಟ್ಟನು. ದೇವಿಯ
ಕೃಪೆಯಿಂದ ಈತನ ಪಿಶಾಚಿಸ್ವರೂಪವು ಇಲ್ಲದಾಯಿತು. ತಂದೆಯು ಇವನನ್ನು
ಪಟ್ಟಕ್ಕೆ ಕೂಡಿಸಿದನು. ವಿಶ್ವಾಮಿತ್ರನು ಇವನಿಂದ ಯಜ್ಞವನ್ನು ಮಾಡಿಸಿ, ದೇವಸಹಿತ ಸ್ವರ್ಗವನ್ನು ಸೇರಬೇಕೆಂಬ ಈತನ ಇಚ್ಛೆಯನ್ನು ಪೂರ್ತಿಗೊಳಿಸಿದನು. ವಿಶ್ವಾಮಿತ್ರನು ಈತನ ಯಜ್ಞಕ್ಕೆ ಅಧ್ವರ್ಯುವಾಗಿದ್ದನು. ಆದ್ದರಿಂದ ದೇವತೆಗಳನ್ನು ಆಹ್ವಾನಿಸಿದ್ದರೂ ಅವರು ಬಂದಿರಲಿಲ್ಲ. ಆಗ ವಿಶ್ವಾಮಿತ್ರನು ತನ್ನ ತಪೋಬಲದಿಂದ ತ್ರಿಶಂಕುವನ್ನು ಸ್ವರ್ಗಕ್ಕೆ ಕಳಿಸಿದನು. ಆಗ ಇಂದ್ರನು ತ್ರಿಶಂಕುವನ್ನು ಅಲ್ಲಿಂದ ಕೆಳಗೆ ನೂಕಿಬಿಟ್ಟನು. 'ತ್ರಾಹಿ! ತ್ರಾಹಿ” ಎಂದು ಚೀರುತ್ತ ತ್ರಿಶಂಕು ತಲೆಕೆಳಗಾಗಿ ಬೀಳುತ್ತಿದ್ದಾಗ ವಿಶ್ವಾಮಿತ್ರನು ಕೋಪಗೊಂಡು ನಿಲ್ಲು ನಿಲ್ಲು!” ಎಂದು ಕೂಗಿದನು. ತನ್ನ ಪ್ರತಿಜ್ಞೆಯು ಸುಳ್ಳಾಗಬಾರದೆಂದು ವಿಶ್ವಾಮಿತ್ರನು ನಕ್ಷತ್ರ, ದೇವತೆಗಳ ನ್ನೊಳಗೊಂಡ ಪ್ರತಿಸೃಷ್ಟಿಯನ್ನೇ ನಿರ್ಮಿಸಲಾರಂಭಿಸಿದನು. ವಿಶ್ವಾಮಿತ್ರನು ತನ್ನ ಸ್ವರ್ಗದಲ್ಲಿ ಇಂದ್ರನಿರಲೇಬಾರದು. ಇದ್ದರೆ ತಾನೇ ಬೇರೆ ಇಂದ್ರನನ್ನು ಸೃಷ್ಟಿಸುವು ದೆಂದು ನಿರ್ಧರಿಸಿದನು. ಆಗ ದೇವತೆಗಳಲ್ಲಿ ದೊಡ್ಡ ಗೊಂದಲವುಂಟಾಯಿತು. ತ್ರಿಶಂಕುವು ಗುರುಪಾಶದಿಂದ ದಗ್ಗನಾದ್ದರಿಂದ ಸದೇಹ ಸ್ವರ್ಗವನ್ನು ಸೇರಲು ಯೋಗ್ಯವಿರಲಿಲ್ಲವಾದರೂ ದೇವತೆಗಳು ಅದನ್ನು ಮನ್ನಿಸಿದನು. ಈ ಸಂದಪುರಾಣದಲ್ಲಿ ಈ ಕಥೆಯನ್ನು ಭಿನ್ನವಾಗಿ ಹೇಳಿದ್ದಾರೆ. ಹರಿವಂಶದಲ್ಲಿ ಈತನ ಪತ್ನಿಯ ಹೆಸರನ್ನು ಸತ್ಯರಥಾ ಎಂದು ಹೇಳಿದ್ದಾರೆ. ಇವಳಿಂದ ತ್ರಿಶಂಕುವಿಗೆ ಸುಪ್ರಸಿದ್ಧನಾದ ಹರಿಶ್ಚಂದ್ರನು ಹುಟ್ಟಿದನು. ವಿಶ್ವಾಮಿತ್ರನು ತ್ರಿಶಂಕುವಿನ ಧಾರ್ಮಿಕ ವೃತ್ತಿಯನ್ನು ಪ್ರಶಂಸಿಸಿದ್ದಾನೆ. ವನವಾಸದಲ್ಲಿದ್ದಾಗ ಈತನ ಆಚರಣೆಯು ಪರಿಶುದ್ದವಿತ್ತು. ಇವನು ನೂರು ಯಜ್ಞಗಳನ್ನು ಸಾಂಗಗೊಳಿಸಿದನು; ವಿಶ್ವಾಮಿತ್ರನ ಮಕ್ಕಳ ರಕ್ಷಣೆಯನ್ನು ಮಾಡಿದನು.

ದೇಹಸಹಿತವಾಗಿ ಸ್ವರ್ಗವನ್ನು ಸೇರಬೇಕೆಂಬ ಈತನ ಇಚ್ಚೆಯು ವಿಚಿತ್ರ ವಿದ್ದರೂ ಅಸಾಧ್ಯವಿರಲಿಲ್ಲ. ವಸಿಷ್ಠ-ವಿಶ್ವಾಮಿತ್ರಾದಿ ಋಷಿಗಳು ದೇಹಸಹಿತ ಸ್ವರ್ಗಕ್ಕೆ ಆಗಾಗ ಹೋಗಿಬರುತ್ತಿದ್ದರು. ಮಹಾಭಾರತದಲ್ಲಿ ಅರ್ಜುನನು ಸ್ವರ್ಗಕ್ಕೆ ಹೋಗಿ ಇಂದ್ರನ ಅತಿಥಿಸತ್ಕಾರವನ್ನು ಪಡೆದುಕೊಂಡು ಮರಳಿದ್ದು ಜ್ಞಾತ ವಿಷಯವಾಗಿದೆ. ವಿಶ್ವಾಮಿತ್ರನ ಬಲವಂತದಿಂದ ತ್ರಿಶಂಕುವು ಎಂದಿಗೂ ತಲೆ ಕೆಳಗಾಗಿ ನಕ್ಷತ್ರಗಳಲ್ಲಿ ಹೊಳೆಯುತ್ತ ಉಳಿಯುವನು ಎಂದು ದೇವತೆಗಳು ಆಶ್ವಾಸಿಸಿದರು.