ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೧೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಶತ್ರುಗಳು ಋಗ್ವೇದದಲ್ಲಿ ಇವಳ ಉಲ್ಲೇಖವು ಎರಡು ಬಾರಿ ಬಂದಿದೆ; ಒಂದು,
ಅದಿತಿಯೊಡನೆ; ಇನ್ನೊಂದು, ಅಗ್ನಿ, ಸವಿತಾ ಹಾಗೂ ಭಗ ಇವರೊಡನೆ.
ಅಥರ್ವವೇದದಲ್ಲಿ ಇವಳ ಮಕ್ಕಳ ಉಲ್ಲೇಖವಿದೆ. ದಿತಿಯು ವಿರೋಧಿಸಲು
ಬಂದಂತಿದ್ದಾಳೆ.

೫೬. ದುಂದುಭಿ

ದುಂದುಭಿಯು ಮಯಾಸುರ ಮತ್ತು ಅಪ್ಸರೆಯಾದ ಹೇಮಾ ಇವರ
ಎರಡನೆಯ ಮಗ. ದೀರ್ಘ ತಪಸ್ಸನ್ನಾಚರಿಸಿ ಈತನು ಸಹಸ್ರ ಆನೆಗೆಳ ಶಕ್ತಿಯನ್ನು
ಪಡೆದುಕೊಂಡಿದ್ದನು. ಇವನಿಗೆ ತನ್ನ ಬಲದ ಅಹಂಕಾರವಿತ್ತು. ವಾಲಿಯು
ಇವನನ್ನು ಕೊಂದು ದೂರ ಎಸೆದಾಗ ಇವನ ರಕ್ತವು ಮತಂಗಋಷಿಯ
ಆಶ್ರಮದಲ್ಲಿ ಸಿಡಿಯಿತು. ರಾಮ-ಸುಗ್ರೀವರಲ್ಲಿ ಸ್ನೇಹವಾದನಂತರ, ತನ್ನ
ಸಾಮರ್ಥ್ಯವನ್ನು ಸುಗ್ರೀವನಿಗೆ ತೋರಿಸಿಕೊಡಲು ರಾಮನು ದುಂದುಭಿಯ
ಭಾರವಾದ ಅಸ್ಥಿಪಂಜರವನ್ನು ತನ್ನ ಕಾಲಿನ ಹೆಬ್ಬೆರಳಿನಿಂದ ಹತ್ತು ಯೋಜನೆಗಳಷ್ಟು
ದೂರಕ್ಕೆ ಚಿಮ್ಮಿದನು. ದುಂದುಭಿಯು ಹದಿನಾರು ಸಾವಿರ ಸ್ತ್ರೀಯರನ್ನು
ಬಂಧನದಲ್ಲಿಟ್ಟಿದ್ದನು. ಒಂದು ಲಕ್ಷ ಸ್ತ್ರೀಯರನ್ನು ಏಕಕಾಲಕ್ಕೆ ಮದುವೆಯಾಗುವ
ಇಚ್ಛೆ ಈತನದಿತ್ತು. ಈತನಿಗೆ ಮಾಯಾವಿ ಎಂಬ ಮಗನಿದ್ದನು.

೫೭. ದುರ್ವಾಸ

ಇವನು ಅತ್ರಿಋಷಿ ಹಾಗೂ ಅನಸೂಯೆ ಇವರ ಮಗ. ಶಿವಶತರುದ್ರ
ಸಂಹಿತೆ ಮತ್ತು ಮಹಾಭಾರತದ ಅನುಶಾಸನಪರ್ವದಲ್ಲಿಯ ಈತನ ಜನ್ಮದ
ಬಗೆಗಿನ ಕಥೆಗಳು ಭಿನ್ನವಾಗಿವೆ. ಅತ್ರಿಋಷಿಯ ಶಿರದಿಂದ ಮೂಡಿದ ತೇಜಃ
ಪೂರ್ಣ ಜ್ವಾಲೆಯಿಂದ ದುರ್ವಾಸನು ಜನ್ಮತಾಳಿದನೆಂದು ಶಿವಶತರುದ್ರ
ಸಂಹಿತೆಯಲ್ಲಿ ಹೇಳಿದೆ. ತ್ರಿಪುರಾಸುರನ ನಾಶಕ್ಕೆಂದು ಬಿಟ್ಟ ಶರವು ಚಿಕ್ಕ ಮಗುವಿನ
ರೂಪ ತಾಳಿ ಶಂಕರನ ತೊಡೆಯಮೇಲೆ ಬಂದು ಕುಳಿತಿತು. ಆತನೇ
ದುರ್ವಾಸನೆಂದು ಮಹಾಭಾರತದಲ್ಲಿ ಬಣ್ಣಿಸಲಾಗಿದೆ. ದುರ್ವಾಸನೆಂದರೆ ಶಿವನ
ಅವತಾರವೆಂದು ಭಾವಿಸುವದುಂಟು. ದುರ್ವಾಸನು ಅತ್ಯಂತ ಶೀಘ್ರಕೋಪಿ
ಯಾಗಿದ್ದನು. ಇಡೀ ಪೃಥ್ವಿಯಲ್ಲಿಯೇ ಎತ್ತರವಾಗಿ ಬೆಳೆದ ಈತನು ಸದಾಕಾಲವೂ
ಜನರನ್ನು ಪೀಡಿಸುತ್ತಿದ್ದನು. ಇವನ ಕ್ರೋಧದ ಅನೇಕ ಕಥೆಗಳು ಪುರಾಣಗಳಲ್ಲಿವೆ.
ಇಂದ್ರನಿಗೆ ಕೊಟ್ಟ ಮಾಲೆಯು ಐರಾವತದ ಕಾಲಿನಡಿಯಲ್ಲಿ ತುಳಿಯಲ್ಪಟ್ಟ ಕಾರಣ