ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೧೫


೬೪. ನಳಕೂಬರ

ಇವನು ವೈಶ್ರವಣನ ಮಗ ಮತ್ತು ವಾಣಿಗ್ರೀವನ ಸಹೋದರ. ಒಮ್ಮೆ
ಕೈಲಾಸ ಪರ್ವತದ ಗಂಗಾತೀರದಲ್ಲಿಯ ಉಪವನದಲ್ಲಿ ಸ್ತ್ರೀಯರೊಡನೆ ಕೂಡಿ
ಮದ್ಯಪಾನ ಮಾಡಿ ರತಿಕ್ರೀಡೆಯಲ್ಲಿ ಈ ಸಹೋದರರಿಬ್ಬರೂ ತೊಡಗಿದ್ದರು.
ಎಲ್ಲರೂ ವಸ್ತ್ರರಹಿತರಾಗಿದ್ದರು. ನಾರದನು ಇದನ್ನೆಲ್ಲ ದೃಷ್ಟಿಸಿದಾಗ ಆತನು
ಶಾಪ ಕೊಡಬಹುದೆಂಬ ಭಯದಿಂದ ಸ್ತ್ರೀಯರೆಲ್ಲರೂ ತಮ್ಮ ತಮ್ಮ ವಸ್ತ್ರಗಳನ್ನು
ತೊಟ್ಟುಕೊಂಡರು. ಈ ಸಹೋದರರಿಬ್ಬರೂ ಮದ್ಯದ ಮತ್ತಿನಲ್ಲಿ ನಗ್ನರಾಗಿಯೇ
ಉಳಿದರು. ನಾರದನು ಇವರನ್ನು ಶಿಕ್ಷಿಸಲು ಇವರಿಗೆ ನೂರು ವರ್ಷಗಳ ಕಾಲ
ದಿವ್ಯ ವೃಕ್ಷಗಳಾಗಿ ನಿಲ್ಲುವ ಶಾಪವನ್ನು ಕೊಟ್ಟನು. ಅಂಥ ಸ್ಥಿತಿಯಲ್ಲಿಯೂ
ನಾರದನ ಕೃಪೆಯಿಂದ ಪೂರ್ವಸ್ಮರಣೆಯು ಅವರಿಗೆ ಇತ್ತು. ಕೃಷ್ಣನ ಸಾನ್ನಿಧ್ಯದಿಂದ
ಇವರು ಶಾಪದಿಂದ ಮುಕ್ತರಾದರು. ನಂತರ ಇವರು ಕೃಷ್ಣನ ಭಕ್ತರಾದರೆಂದು
ಮಹಾಭಾರತದ ಸಭಾಪರ್ವದಲ್ಲಿ ಉಲ್ಲೇಖವಿದೆ.
ರಂಭೆಯಲ್ಲಿ ನಲಕೂಬರನು ಬಹಳ ಪ್ರೀತಿಯುಳ್ಳವನಾಗಿದ್ದನು. ರಂಭೆಗೆ
ನಲಕೂಬರನೆಂದರೆ ಪಂಚಪ್ರಾಣದಂತಿದ್ದನೆಂದು ವಾಲ್ಮೀಕಿ ರಾಮಾಯಣದಲ್ಲಿದೆ.
'ನಲಕೂಬರನು ಧರ್ಮದಲ್ಲಿ ಬ್ರಾಹ್ಮಣನಂತೆ, ಶೌರ್ಯಸಾಹಸಗಳಲ್ಲಿ ಕ್ಷತ್ರಿಯನಂತೆ,
ಕ್ರೋಧದಲ್ಲಿ ಅಗ್ನಿಯಂತೆ ಮತ್ತು ಕ್ಷಮಾವೃತ್ತಿಯಲ್ಲಿ ಪೃಥ್ವಿಯಂತಿದ್ದಾನೆ' ಎಂದು
ರಂಭೆಯು ರಾವಣನ ಮುಂದೆ ಉದ್ಗರಿಸಿದ್ದಳು. ಸಂಕೇತದನುಸಾರವಾಗಿ
ರಂಭೆಯು ಒಮ್ಮೆ ಸರ್ವಾಲಂಕಾರಭೂಷಿತಳಾಗಿ ಶೃಂಗರಿಸಿಕೊಂಡು ನಲಕಬೂರನ
ಭೇಟಿಗೆ ನಡೆದಿದ್ದಳು. ರಾವಣನು ಮಾರ್ಗದಲ್ಲಿ ಮಧ್ಯೆ ಬಂದು ಅವಳನ್ನು
ಬಲಾತ್ಕರಿಸಿ ಉಪಭೋಗಿಸಿದನು. ಈ ವಿಷಯವನ್ನು ರಂಭೆಯು ನಲಕೂಬನಿಗೆ
ತಿಳಿಸಿದಾಗ ಆತನು ರೊಚ್ಚಿಗೆದ್ದು ಕೈಯಲ್ಲಿ ಉದಕವನ್ನು ಹಿಡಿದು ರಾವಣನಿಗೆ
ಶಾಪವಿತ್ತನು.

೬೫. ನಹುಷ

ಇವನು ಪುರೂರವನ ಮೊಮ್ಮಗ, ಆಯುವಿನ ಪುತ್ರ, ಯಯಾತಿಯ
ಪಿತ, ಬೇರೆಬೇರೆ ಪುರಾಣಗಳಲ್ಲಿ ಇವನ ತಾಯಿಯ ಹೆಸರು ಬೇರೆಬೇರೆಯಾಗಿದೆ.
ತನ್ನ ಹೊಟ್ಟೆಯಿಂದ ಹುಟ್ಟುವ ಮಗನು ಪಿತೃಘಾತಕನಾಗಲಿರುವನು!- ಎಂಬ
ಭವಿಷ್ಯವನ್ನು ಇವನ ತಾಯಿಯು ಗರ್ಭಧರಿಸಿದಾಗಲೇ ತಿಳಿದುಕೊಂಡಿದ್ದಳು.
ಹೀಗಾದ್ದರಿಂದ ಹುಟ್ಟಿದಂದಿನಿಂದ ನಹುಷನು ಸಂಕಟದಲ್ಲಿ ಸಿಲುಕಿದ್ದನು. ವಸಿಷ್ಠನು