ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೭೫. ಪುಲಸ್ತ್ಯ

ಪುಲಸ್ತ್ಯನು ಕದರ್ಮನಿಂದ ಕ್ರಮಶಃ ಹನ್ನೊಂದನೆಯ ಪ್ರಜಾಪತಿ;
ಬ್ರಹ್ಮದೇವನ ಮಾನಸಪುತ್ರ; ಪ್ರತ್ಯಕ್ಷ ಬ್ರಹ್ಮದೇವನಂತೆ ದೇವತೆಗಳಿಗೂ, ಜನರಿಗೂ
ಪ್ರಿಯವಾದವನಾಗಿದ್ದನು. ವಿಶ್ರವನು ಈತನ ಮಾನಸಪುತ್ರ. ದೇವವರ್ಣಿಯಿಂದ
ಈತನಿಗೆ ಹುಟ್ಟಿದ ಮಗನು ಧನಾಧ್ಯಕ್ಷನಾಗುವನೆಂಬ ಭವಿಷ್ಯವನ್ನು ಈ ಮಗುವಿನ
ಲಕ್ಷಣಗಳಿಂದ ಹೇಳಲಾಗಿತ್ತು. ಆದ್ದರಿಂದ ಆ ಮಗುವಿಗೆ ವೈಶ್ರವಣನೆಂಬ
ಹೆಸರನ್ನು ಇಡಲಾಯಿತು; ಮಾಂಧಾತ ಮತ್ತು ರಾವಣ ಇವರಲ್ಲಿ ಸ್ನೇಹವನ್ನು
ಗಾಲವ ಋಷಿಯ ನೆರವಿನಿಂದ ಮಾಡಿಸಿದನು. ಬ್ರಹ್ಮಾಂಡಪುರಾಣದ ಪ್ರಕಾರ
ಪುಲಸ್ತ್ಯನು ಬ್ರಹ್ಮದೇವನ ಉದಾನದಿಂದ ಹುಟ್ಟಿದವನು; ಸ್ವಾಯಂಭುವ-ದಕ್ಷನ
ಅಳಿಯ, ಶಂಕರನ ಷಡ್ಕಕ. ದಕ್ಷನು ಅವಮಾನಿಸಿದ್ದರಿಂದ ಶಂಕರನು ಇವನನ್ನು
ಸುಟ್ಟು ಭಸ್ಮ ಮಾಡಿದನು. ದಕ್ಷಕನ್ಯೆಯಾದ ಪ್ರೀತಿಯು ಪುಲಸ್ತ್ಯನ ಹೆಂಡತಿ
ಯಾಗಿದ್ದಳು. ಇವಳಿಂದ ದಾನಾಗ್ನಿ ಎಂಬ ಮಗನು ಹುಟ್ಟಿದನು. ಇವನಲ್ಲದೆ
ದೇವಬಾಹು ಮತ್ತು ಅತ್ರಿ ಎಂಬ ಎರಡು ಗಂಡುಮಕ್ಕಳೂ, ಸದ್ಗತಿ ಎಂಬ ಮಗಳೂ
ಹುಟ್ಟಿದರು. ಮಹಾಭಾರತ, ವಾಯುಪುರಾಣ ಮತ್ತು ಮತ್ಸ್ಯಪುರಾಣಗಳ ಪ್ರಕಾರ
ಪುಲಸ್ತ್ಯನು ಬ್ರಹ್ಮದೇವನ ಮಾನಸಪುತ್ರ, ಈತನು ಬ್ರಹ್ಮದೇವನ ಕಿವಿಯಿಂದ
ಹೊರಬಂದವ ನೆಂದೂ ಉಲ್ಲೇಖವಿದೆ. ಬ್ರಹ್ಮದೇವನು ನಿರ್ಮಿಸಿದ ಪ್ರಜಾಪತಿಗಳಲ್ಲಿ
ಇವನೂ ಒಬ್ಬನಾಗಿದ್ದಾನೆ. ಕರ್ದಮನ ಕನ್ಯೆಯಾದ ಹವಿರ್ಭುವಾ ಈತನ
ಪತ್ನಿಯಾಗಿದ್ದಳು. ಈಕೆಗೆ ಅಗಸ್ತ್ಯ ಮತ್ತು ವಿಶ್ರವಾ ಎಂಬ ಇಬ್ಬರು ಮಕ್ಕಳಾದರು.
ಅಗಸ್ತ್ಯನು ಪ್ರೀತಿಯ ಪುತ್ರನಾಗಿದ್ದನೆಂದು ವಿಷ್ಣುಪುರಾಣದಲ್ಲಿ ಹೇಳಿದೆ. ಮಹಾದೇವನ
ಶಾಪದಿಂದ ಮೃತಪಟ್ಟ ಬ್ರಹ್ಮದೇವನ ಮಾನಸಪುತ್ರರಲ್ಲಿ ಇವನೂ ಒಬ್ಬನಾಗಿದ್ದನು.
ಈ ರೀತಿ ಮೃತಪಟ್ಟ ಮಾನಸಪುತ್ರರನ್ನು ಬ್ರಹ್ಮದೇವನು ವೈವಸ್ವತ
ಮನ್ವಂತರದಲ್ಲಿ ಪುನಃ ಸೃಷ್ಟಿಸಿದನು. ಆಗ ಈತನು ಅಗ್ನಿಯ ಕೆಂಜುವರ್ಣದ
ಕೂದಲಿನಿಂದ ಹುಟ್ಟಿದನೆಂದು ಹೇಳಲಾಗಿದೆ. 'ಗಮನವಿರದೆ ತಪಸ್ಸಿಗೆ
ವಿಘ್ನವನ್ನುಂಟುಮಾಡುವ ಕನ್ಯೆಯರು ಕಣ್ಣಿಗೆ ಬೀಳುತ್ತಲೇ ಅವರಿಗೆ ಗರ್ಭದಾರಣೆ
ಯಾಗುವದು!' ಎಂಬ ಶಾಪವನ್ನು ಪುಲಸ್ತ್ಯನು ಕೊಟ್ಟ ಕಾರಣ, ತೃಣಬಿಂದುವಿನ
ಕನ್ಯೆಯು ಗರ್ಭವತಿಯಾದಳು. ತೃಣಬಿಂದುವಿನ ಪ್ರಾರ್ಥನೆಯ ಮೇರೆಗೆ ಪುಲಸ್ತ್ಯನು
ಈ ಕನ್ಯೆಯನ್ನು ವಿವಾಹವಾದನು. ಇವಳಿಂದ ವಿಶ್ರವಾ ಎಂಬ ಮಗನು ಹುಟ್ಟಿದನು
ಎಂದು ವಾಲ್ಮೀಕಿರಾಮಾಯಣದ ಉತ್ತರಕಾಂಡದಲ್ಲಿದೆ. ಪದ್ಮಪುರಾಣದ
ಪ್ರಕಾರ ಬ್ರಹ್ಮದೇವನ ಪುಷ್ಕರತೀರ್ಥದಲ್ಲಿಯ ಯಜ್ಞದಲ್ಲಿ ಪುಲಸ್ತ್ಯನು ಅಧ್ವರ್ಯು