ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಕೊಳ್ಳಬೇಕೆಂದು ರಾವಣನಿಗೆ ಪದೇ ಪದೇ ವಿಭೀಷಣನು ಹೇಳುತ್ತಲೇ ಇದ್ದನು.
ಆಗಾಗ ರಾವಣನಿಗೆ ಉಪದೇಶಿಸುತ್ತಿದ್ದನು; ಸಲಹೆ ಕೊಡುತ್ತಿದ್ದನು. 'ದೂತನನ್ನು
ಹೇಗೆ ಕಾಣಬೇಕು?' ಎಂಬ ಬಗ್ಗೆ ನೀತಿಯ ಮಾತುಗಳನ್ನಾಡಿದನು. 'ರಾಮನ
ಬಲದ ಮುಂದೆ ಮಾತಿನ ಮಲ್ಲರಾದ ರಾಕ್ಷಸರ ಆಟವು ನಡೆಯಲಾರದು!
ನೀನೂ ಪಾರಾಗುವದು ಅಸಾಧ್ಯ!' ಎಂದು ತುಂಬಿದ ರಾಜಸಭೆಯಲ್ಲಿ ರಾವಣನಿಗೆ
ವಿಭೀಷಣನು ಸ್ಪಷ್ಟವಾಗಿ ನುಡಿದನು. ರಾವಣನು ಇವನ ಮಾತಿಗೆ ಎಳ್ಳಷ್ಟೂ
ಬೆಲೆ ಕೊಡಲಿಲ್ಲ; ಬದಲಾಗಿ ಅವನನ್ನು ಧಿಕ್ಕರಿಸಿದನು. ಆಗ ವಿಭೀಷಣನು
ರಾವಣನನ್ನು ಬಿಟ್ಟುಹೋಗಲು ನಿರ್ಧರಿಸಿದನು. ಇಂದ್ರಜಿತುವಿನಿಂದ ಸೆರೆ
ಹಿಡಿಯಲ್ಪಟ್ಟ ಹನುಮಾನನನ್ನು ರಾವಣನು ವಧಿಸಲು ಹೊರಟಾಗ ವಿಭೀಷಣನು
ಹನುಮಾನನನ್ನು ಬದುಕಿಸಿದನು. ರಾಮನೊಡನೆ ಆಗಬಹುದಾದ ಯುದ್ಧವನ್ನು
ತಪ್ಪಿಸಿ, ಲಂಕೆಯನ್ನು ರಕ್ಷಿಸಬೇಕೆಂದು ರಾವಣನಿಗೆ ಪುನಃಪುನಃ ವಿನಂತಿಸಿದನು.
ಆದರೆ ರಾವಣನು ಎಲ್ಲವನ್ನೂ ಕಡೆಗಾಣಿಸಿದನು. ಆಗ ವಿಭೀಷಣನು ರಾಮನಿಗೆ
ಶರಣು ಹೋದನು. ರಾಮ-ರಾವಣರಲ್ಲಿಯ ಸಂಗ್ರಾಮದಲ್ಲಿ ವಿಭೀಷಣನು
ತನ್ನ ಪರಾಕ್ರಮವನ್ನು ಪ್ರದರ್ಶಿಸಿ, ಧೂಮ್ರಾಕ್ಷ, ಪ್ರಹಸ್ತಾದಿ ರಾಕ್ಷಸರನ್ನು
ಕೊಂದನು. ತನ್ನ ಮಂತ್ರಿಗಳನ್ನು ಗುಪ್ತರೀತಿಯಲ್ಲಿ ಲಂಕೆಯಲ್ಲಿರಿಸಿ ರಾಮನಿಗೆ
ಆವಶ್ಯಕವಿದ್ದ ಮಾಹಿತಿಯನ್ನು ಕಾಲಕಲಕ್ಕೆ ಒದಗಿಸಿದನು. ಇಂದ್ರಜಿತುವಿನಿಂದ
ಯಜ್ಞವು ಪೂರ್ಣವಾಗುವ ಮೊದಲೇ ಆತನನ್ನು ವಧಿಸಬೇಕೆಂಬ
ಸಲಹೆಯನ್ನು ಲಕ್ಷ್ಮಣನಿಗೆ ಕೊಟ್ಟನು. ಆ ಸಲಹೆಯಂತೆ ಲಕ್ಷ್ಮಣನು ಇಂದ್ರ
ಜಿತುವನ್ನು ವಧಿಸಿದನು. ರಾಮನಿಂದ ರಾವಣನು ಕೊಲ್ಲಲ್ಪಟ್ಟ ನಂತರ ಮಾತ್ರ
ವಿಭೀಷಣನು ಅಣ್ಣನ ಸಾವಿಗಾಗಿ ತುಂಬ ಶೋಕಪಟ್ಟನು. ರಾಮನ ಸೂಚನೆ
ಯಂತೆ ರಾವಣನ ಉತ್ತರಕ್ರಿಯೆ-ಕರ್ಮಗಳನ್ನು ಪೂರೈಸಿದನು. ರಾಮನು
ಲಕ್ಷ್ಮಣನಿಂದ ವಿಭೀಷಣನಿಗೆ ಲಂಕೆಯ ರಾಜ್ಯಾಭಿಷೇಕವನ್ನು ಮಾಡಿಸಿದನು.
ರಾವಣನ ತರುವಾಯ ವಿಭೀಷಣನು ಲಂಕಾಧಿಪತಿಯಾದನು. ರಾಮನೊಡನೆ
ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಹೋದನು. ರಾಜ್ಯಾಸನಾಧಿಷ್ಠಿತ ರಾಮನಿಗೆ
ಇವನು ಚಾಮರ ಬೀಸಿದನು. ರಾಮನು ಈತನಿಗೆ ರತ್ನಾದಿಗಳನ್ನರ್ಪಿಸಿ
ಸತ್ಕರಿಸಿದನು. ರಾಮನಿಗೆ ನೆರವು ನೀಡಿದುದಕ್ಕಾಗಿ ಭರತನು ವಿಭೀಷಣನಿಗೆ
ಧನ್ಯವಾದಗಳನ್ನು ಅರ್ಪಿಸಿದನು.
ವಿಭೀಷಣನು ಅತ್ಯಂತ ಧರ್ಮಪರಾಯಣನೂ ಜಿತೇಂದ್ರಿಯನೂ
ಸ್ವಾಧ್ಯಾಯದಲ್ಲಿ ಮಗ್ನನಾದವನೂ ಮತ್ತು ಮಿತಾಹಾರಿಯೂ ಆಗಿದ್ದನು. ರಾಕ್ಷಸರ