ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೨೭


ಕುಲದ್ಲಲಿ ಜನಿಸಿದ್ದರೂ ಈತನ ಒಲವು ಅಧರ್ಮದತ್ತ ಇರಲಿಲ್ಲ. ಆದ್ದರಿಂದಲೇ
ಬ್ರಹ್ಮದೇವನು ಇವನಿಗೆ ಅಮರತ್ವನ್ನು ಕರುಣಿಸಿದನು. ವಿಭೀಷಣನು ಸಪ್ತ
ಚಿರಂಜೀವಿಗಳಲ್ಲಿ ಒಬ್ಬನಾದನು. ಅಶ್ವಮೇಧಯಜ್ಞಕ್ಕೆ ರಾಕ್ಷಸರೊಂದಿಗೆ ಬರ
ಬೇಕೆಂದು ರಾಮನು ವಿಭೀಷಣನನ್ನು ಆಮಂತ್ರಿಸಿದ್ದನು. ಆತನ ಆಜ್ಞೆಯಂತೆ
ವಿಭೀಷಣನು ನಡೆದುಕೊಂಡನು.

೮೦. ಬುಧ

ಈತನು ಬೃಹಸ್ಪತಿಯ ಪತ್ನಿಯಾದ ತಾರೆಗೆ ಚಂದ್ರನಿಂದ ಹುಟ್ಟಿದ ಮಗ.
ಇವನು ಚಂದ್ರವಂಶೋತ್ಪಾದಕನೆಂದೂ, ಬೃಹಸ್ಪತಿಯ ಪತ್ನಿಯ ಮಗನೆಂದೂ
ಖ್ಯಾತನಿದ್ದಾನೆ. ಭವಿಷ್ಯಪುರಾಣದಂತೆ ಬುಧನು ಚಂದ್ರ ಹಾಗೂ ರೋಹಿಣಿ
ಇವರ ಪುತ್ರ. ಬೃಹಸ್ಪತಿಯು ಬುಧನ ಜಾತಕಮರ್ಮಾದಿಗಳನ್ನು ಮಾಡಿಸಿದನು.
ಬುಧನು ಮಹಾವಿದ್ವಾಂಸನಾಗಿದ್ದು ಹಸ್ತಿಶಾಸ್ತ್ರದಲ್ಲಿ ಪ್ರವೀಣನಾಗಿದ್ದನು. ಇವನು
ಗ್ರಹಮಾಲೆಯಲ್ಲಿ ಶುಕ್ರನಿಂದ ಎರಡು ಲಕ್ಷ ಯೋಜನಗಳಷ್ಟು ದೂರದಲ್ಲಿದ್ದಾನೆ;
ಅನಾವೃಷ್ಟಿ ಮೊದಲಾದ ಅರಿಷ್ಟಗಳು ಸಂಭವಿಸುವ ಸೂಚನೆ ದೊರೆಯುತ್ತದೆ.
ಬುಧನು ಸರೋವರದಲ್ಲಿದ್ದುಕೊಂಡು ಕಠೋರ ತಪಸ್ಸನ್ನಾಚರಿಸಿದನು. ಇಲಾ
ಎಂಬ ರೂಪವತಿಗೆ ಈತನು ಮೋಹಿತನಾದನು. ಇವಳಿಂದ ಬುಧನಿಗೆ ಪುರೂರವ
ಎಂಬ ಮಗನು ಹುಟ್ಟಿದನು. ಪದ್ಮಪುರಾಣದ ಪ್ರಕಾರ ಸೋಮವಂಶದ ಮೂಲ
ಪುರುಷನೇ ಪುರೂರವ.

೮೧. ಬ್ರಹ್ಮದತ್ತ

ಇವನು ಉರ್ಮಿಳಾ ಎಂಬ ಗಂಧರ್ವಿಯ ಮಗಳಾದ ಸೋಮದೆಗೆ
ಚೂಲೀ ಮಹರ್ಷಿಯ ಕೃಪೆಯಿಂದ ಹುಟ್ಟಿದ ಪುತ್ರ. ಸೋಮದೆಯ ಸೇವೆಯಿಂದ
ಸಂತೋಷಗೊಂಡ ಚೂಲಿಯು ಇವಳಿಗೆ ಈ ಮಾನಸಪುತ್ರನನ್ನು ಕೊಟ್ಟನು.
ಬ್ರಹ್ಮದತ್ತನು ಕಾಂಪಿಲ್ಯ ಪಟ್ಟಣದ ರಾಜನಾಗಿದ್ದನು. ವಾಯುವಿನ ಕೋಪದಿಂದ
ಕುಬ್ಜೆಯರಾದ ಕುಶನಾಭನ ನೂರು ಕನ್ಯೆಯರನ್ನು ಈತನು ಮದುವೆಯಾಗಿದ್ದನು.
ಬ್ರಹ್ಮದತ್ತನ ಪ್ರಥಮ ಸ್ಪರ್ಶದಿಂದ ಆ ಕನ್ಯೆಯರ ವಿರೂಪವು ಇಲ್ಲದಂತಾಗಿ
ಅವರು ಮೊದಲಿನಂತೆ ರೂಪಸಂಪನ್ನೆಯರಾದರು.