ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೩೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ತನ್ನ ಸೋದರಮಾವನ ಮನೆಗೆ ಹೋಗಿದ್ದನು. 'ಭರತನು ಧರ್ಮಾತ್ಮನಿದ್ದು
ಎಲ್ಲರ ಸಂಗಡ ಒಳ್ಳೆಯದಾಗಿ ಮಾತನಾಡುವವನು' ಎಂದು ರಾಮನು ಕೌಸಲ್ಯೆಗೆ
ಭರತನ ಬಗ್ಗೆ ಹೇಳಿದ್ದಾನೆ. ವಸಿಷ್ಠನು ಸಹ 'ಭರತನು ರಾಮನ ಹಾಗೆ
ವಲ್ಕಗಳನ್ನುಟ್ಟು ವನವಾಸಕ್ಕೆ ಹೋಗುವನು. ಪಿತನಿಂದ ದೊರೆಯದ
ರಾಜ್ಯವನ್ನಾಳಲು ಭರತನು ಇಚ್ಛಿಸುವದಿಲ್ಲ' ಎಂದು ನಿಖರವಾಗಿ ನುಡಿದಿದ್ದನು.
ಭರತನು ಅಯೋಧ್ಯೆಗೆ ಕೂಡಲೇ ಬರಬೇಕೆಂದು ಹೇಳಿ ದೂತರನ್ನು ಕಳುಹಿಸ
ಲಾಗಿತ್ತು. ಆ ದೂತರು ತಲುಪುವ ಮುನ್ನವೇ ಅಶುಭಸೂಚಕ ಕನಸುಗಲನ್ನು
ಭರತನು ಕಂಡನು. ಅಯೋಧ್ಯೆಗೆ ಮರಳಿದ ನಂತರ ನಡೆದ ಸಂಗತಿಗಳು
ಆತನಿಗೆ ತಿಳಿದವು. ಆಗ ಭರತನು ಕೈಕೇಯಿಯ ಮೇಲೆ ಸಿಟ್ಟುಬೆಂಕಿಯಾದನು.
ಆತನು ಅತಿ ಕಠೋರಶಬ್ದಗಳಲ್ಲಿ ಕೈಕೇಯಿಯನ್ನು ಜರೆದನು. 'ಮಾತೆಯ ರೂಪ
ದಲ್ಲಿಯ ವೈರಿಣಿಯೇ ನೀನು! ನೀನು ನರಕಕ್ಕೆ ಹೋಗು! ನೀನು ನನ್ನ ಪಿತನ
ಕುಲವನ್ನು ಹಾಳುಮಾಡಿದೆ!' ಎಂದನು. ಹೀಗೆ ನುಡಿದು, ತನಗೆ ರಾಜ್ಯದ
ಆಕಾಂಕ್ಷೆಯು ಎಳ್ಳಷ್ಟೂ ಇಲ್ಲವೆಂದು ಮಂತ್ರಿಗಳಿಗೆ ಸ್ಪಷ್ಟವಾಗಿ ತಿಳಿಸಿದನು. ಕೌಸಲ್ಯೆ,
ಗುಹ ಹಾಗೂ ಭರದ್ವಾಜ- ಇವರಿಗೆ ಭರತನ ಬಗ್ಗೆ ಸಂದೇಹ ಮೂಡಿತ್ತು.
ಭರತನು ನನ್ನ ವರ್ತನೆಯಿಂದ ಮತ್ತು ಶಪಥ ಮಾಡಿ ಅದನ್ನು ನಿವಾರಿಸಿದನು.
ದಶರಥನ ಉತ್ತರಕ್ರಿಯಾ-ಕರ್ಮಗಳನ್ನು ಭರತನಿಂದ ಮಾಡಿಸಿದಂತಹ ವಸಿಷ್ಠನು,
'ರಾಜ್ಯವನ್ನು ಸ್ವೀಕರಿಸು!' ಎಂದು ಭರತನಿಗೆ ಹೇಳಿದನು. ಭರತನು ಅದಕ್ಕೆ
ಒಪ್ಪಲಿಲ್ಲ.
ರಾಮನನ್ನು ಅಯೋಧ್ಯೆಗೆ ಮರಳಿ ಕರೆತರಲು ವಸಿಷ್ಠ ಹಾಗೂ
ಮಾತೆಯರೊಡನೆ ಭರತನೂ ರಾಜ್ಯವನ್ನು ಸ್ವೀಕರಿಸಲು ಭರತನು ಎಷ್ಟೇ ಬಲವಂತ
ಮಾಡಿದರೂ ರಾಮನು ತನ್ನ ನಿಶ್ಚಯದಿಂದ ಪರಾವೃತ್ತನಾಗಲಿಲ್ಲ. ಅಷ್ಟೇ ಅಲ್ಲದೆ,
ಭರತನಿಗೆ ಆತನ ಕರ್ತವ್ಯದ ಅರಿವನ್ನು ಮಾಡಿಕೊಟ್ಟನು. ರಾಮನ ಪಾದುಕೆಗಳನ್ನು
ತೆಗೆದುಕೊಂಡು ಭರತನು ಅಯೋಧ್ಯೆಗೆ ಮರಳಿದನು. ಈ ಪಾದುಕೆಗಳನ್ನು
ಸಿಂಹಾಸನದಲ್ಲಿಟ್ಟು ರಾಜ್ಯವನ್ನಾಳುತ್ತ ಸನ್ಯಾಸವೃತ್ತಿಯನ್ನು ಅಂಗೀಕರಿಸಿದನು.
ವನವಾಸ ಮುಗಿದೊಡನೆ ಅಯೋಧ್ಯೆಗೆ ಮರಳುವ ಭರವಸೆಯನ್ನು ರಾಮನು
ಕೊಟ್ಟಿದ್ದನು. ಈ ಆಶ್ವಾಸನೆಯಂತೆ ನಡೆಯದಿದ್ದಲ್ಲಿ 'ನಾನು ಅಗ್ನಿಪ್ರವೇಶ ಮಾಡುವೆ'
ಎಂದು ಭರತನು ರಾಮನಿಗೆ ಹೇಳಿದ್ದನು. ರಾಮನು ವನವಾಸದನಂತರ ಮರಳಿ
ಅಯೋಧ್ಯೆಯ ಸಮೀಪ ಬಂದಾಗ, ಭರತನನ್ನು ಭೇಟಿಯಾಗಲು ಮೊದಲಿಗೆ
ಹನುಮಾನನನ್ನು ಕಳಿಸಿದನು. ಅನಂತರ ರಾಮನನ್ನು ಯಥಾ ಯೋಗ್ಯವಾಗಿ