ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೪೩೩


ಸತ್ಕರಿಸಿ ಭರತನು ಆತನ ರಾಜ್ಯವನ್ನು ಅವನಿಗೆ ಒಪ್ಪಿಸಿದನು. ಲಕ್ಷ್ಮಣನು
ಯೌವರಾಜ್ಯಪದವನ್ನು ನಿರಾಕರಿಸಿದ್ದರಿಂದ, ಅದನ್ನು ಭರತನು ಸ್ವೀಕರಿಸ
ಬೇಕಾಯಿತು. ಭರತನು ಲವಣಾಸುರನನ್ನು ಕೊಲ್ಲಲು ಹವಣಿಸಿದ್ದನು; ಆದರೆ
ಇದನ್ನ ಶತ್ರುಘ್ನನು ವಹಿಸಿಕೊಂಡನು. ಭರತನಿಗೆ ತಕ್ಷ ಹಾಗೂ ಪುಷ್ಕಲ ಎಂಬ
ಎರಡು ಗಂಡುಮಕ್ಕಳಿದ್ದರು, ತಕ್ಷನಿಗೆ ತಕ್ಷಶಿಲಾ ಎಂಬ ಪಟ್ಟಣವನ್ನೂ, ಪುಷ್ಕಲನಿಗೆ
ಪುಷ್ಕಲಾವರ್ತ ಎಂಬ ಪಟ್ಟಣವನ್ನೂ ಸ್ಥಾಪಿಸಿಕೊಟ್ಟನು. ಲಕ್ಷ್ಮಣನ ಪುತ್ರರಿಗಾಗಿ
ಎರಡು ಪಟ್ಟಣಗಳನ್ನು ನೆಲೆಸಿಕೊಟ್ಟನು. ರಾಮನು ಮಹಾಪ್ರಸ್ಥಾನಕ್ಕಾಗಿ ನಡೆದಾಗ
ಭರತನೂ ಅವನನ್ನು ಹಿಂಬಾಲಿಸಿದನು.

೮೬. ಭರದ್ವಾಜ

ಇವನು ವಾಲ್ಮೀಕಿ ಋಷಿಯ ಶಿಷ್ಯರಲ್ಲೊಬ್ಬ. ವಾಲ್ಮೀಕಿಯ ಮುಖದಿಂದ
'ಮಾ ನಿಷಾದ' ಎಂಬ ಶಾಪವಾಣಿ ಹೊರಬಂದಾಗ ಭರದ್ವಾಜನು ಅಲ್ಲಿಯೇ
ಇದ್ದನು. ಇವನು ಪ್ರಯಾಗದಲ್ಲಿರುತ್ತಿದ್ದನು. ದಂಡಕಾರಣ್ಯದತ್ತ ಹೋಗುವ
ರಾಮನನ್ನು ಇವನು ದರ್ಶನ ಮಾಡಿ ಯೋಗ್ಯವಾಗಿ ಸತ್ಕರಿಸಿ ಆಶ್ರಮದಲ್ಲಿ
ತಂಗಲು ಹೇಳಿದನು. ಅಯೋಧ್ಯೆ ತೀರ ಸಮೀಪವಾದ್ದರಿಂದ ಸುರಕ್ಷಿತವಾದ
ಇನ್ನೊಂದು ಸ್ಥಳವನ್ನು ಸೂಚಿಸಲು ರಾಮನು ಭರದ್ವಾಜನನ್ನು ಕೇಳಿದಾಗ,
ಭರದ್ವಾಜನು ಅವನಿಗೆ ಚಿತ್ರಕೂಟದಲ್ಲಿ ವಾಸವುಳಿಯಲು ಹೇಳಿದನು. ರಾಮನನ್ನು
ಅಯೋಧ್ಯೆಗೆ ಮರಳಿ ಕರೆದೊಯ್ಯಲು ಸೈನ್ಯಸಮೇತನಾಗಿ ಬಂದ ಭರತನನ್ನು
ಕಂಡು ಭರದ್ವಾಜನಿಗೆ ಸಂದೇಹವುಂಟಾಯಿತು; ಆದರೆ ಕಂಬನಿಗಳಿಂದ ಭರತನು
ಎಲ್ಲವನ್ನೂ ತಿಳಿಸಿ ಹೇಳಿದ ನಂತರ ಭರತನಿಗೆ ಭರದ್ವಾಜನು ಯೋಗ್ಯ ಸ್ವಾಗತವನ್ನು
ಬಯಸಿದನು. ರಾಮನಿದ್ದ ವಾಸಸ್ಥಳದ ಮಾರ್ಗವನ್ನು ನಿರೂಪಿಸಿದನು. ರಾಮನು
ವನನಾಸದಿಂದ ಮರಳುವಾಗ ಮಾರ್ಗದಲ್ಲಿ ಪುನಃ ಭರದ್ವಾಜನ ದರ್ಶನವನ್ನು
ಪಡೆದನು. ಭರದ್ವಾಜನು ಆಗ ರಾಮನನ್ನು ಅಭಿನಂದಿಸಿ ವರವನ್ನು ಕೊಟ್ಟನು.
ಅಶ್ವಮೇಧಯಜ್ಞದ ನಂತರ ಮತ್ತೊಮ್ಮೆ ರಾಮನು ಭರದ್ವಾಜನನ್ನು ಕಾಣಲು
ಬಂದಿದ್ದನು.
ಪುಲಸ್ತ್ಯನ ವಿಸ್ರವಾ ಎಂಬ ತಪಸ್ವಿಪುತ್ರನಿಗೆ ಭರದ್ವಾಜನು ದೇವವರ್ಣಿ
ಎಂಬ ತನ್ನ ಕನ್ಯೆಯನ್ನು ಮದುವೆ ಮಾಡಿಕೊಟ್ಟನು.