ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೮೭. ಭೃಗು

ಭೃಗು ಹೆಸರಿನ ಅನೇಕ ವ್ಯಕ್ತಿಗಳಿದ್ದು ಬೇರೆ ಬೇರೆ ಗ್ರಂಥಗಳಲ್ಲಿ ಅವರ ಬಗ್ಗೆ ಭಿನ್ನ ಭಿನ್ನ ಮಾಹಿತಿಯು ದೊರೆಯುತ್ತದೆ. ಪ್ರಜಾಪತಿಯ ವೀರ್ಯದಲ್ಲಿ ಮೂರು ಭಾಗಗಳಾಗಿ ಆದಿತ್ಯ, ಭೌಗು ಮತ್ತು ಅಂಗೀರಸರು ಜನ್ಮ ಪಡೆದರೆಂದು ಐತರೇಯ ಬ್ರಾಹ್ಮಣದಲ್ಲಿದೆ. ತೈತ್ತರೀಯ ಉಪನಿಷತ್ತಿನಲ್ಲಿ ಬೃಗುವು ವರುಣ ಪುತ್ರನೆಂಬ ಉಲ್ಲೇಖವಿದೆ. ವರುಣನಿಂದ ಈತನು ಬ್ರಹ್ಮಜ್ಞಾನವನ್ನು ಪಡೆದುಕೊಂಡ ಕಾರಣ ಇವನಿಗೆ ವಾರುಣಿಭ್ಯಗು ಎಂದು ಕರೆಯುತ್ತಾರೆ. ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಲೋಸುಗ ತಪಸ್ಸನ್ನಾಚರಿಸುತ್ತಿದ್ದಾಗ ಅವನ ಮೈಯ ಬೆವರು ಭೂಮಿಗೆ ಬಿದ್ದಿತು. ಆ ಬೆವರಿನಲ್ಲಿ ತನ್ನ ಸ್ವಂತ ಪ್ರತಿಬಿಂಬವನ್ನು ಕಂಡು ಈತನ ವೀರ್ಯಸ್ಕಲನ ವಾಯಿತು. ಈ ವೀರ್ಯದಲ್ಲಿ ಎರಡು ಭಾಗಗಳಾದವು. ಒಂದು ಭಾಗವು ಸೌಮ್ಯವೂ ಸ್ವಾದಿಷ್ಟವೂ ಆದ ಪಾನೀಯವಾಯಿತು. ಇನ್ನೊಂದು ಭಾಗವು ಕ್ಷಾರಯುಕ್ತವಾಗಿದ್ದು, ಕುಡಿಯಲು ಬಾರದಂಥ, ರುಚಿಯಿಲ್ಲದಾಯಿತು. ಈ ಎರಡು ಭಾಗಗಳಿಂದ ಅನುಕ್ರಮವಾಗಿ ಬೃಗು ಮತ್ತು ಅಂಗೀರಸ- ಇವರು ಹುಟ್ಟಿದರೆಂದು ಗೋಪಥಬ್ರಾಹ್ಮಣದಲ್ಲಿ ಉಲ್ಲೇಖಿಸಲಾಗಿದೆ. - ಬ್ರಹ್ಮನ ಹೃದಯದಿಂದ ಹುಟ್ಟಿದ ಬೃಗು ಮನುವಿನ ಅಳಿಯ; ಶಂಕರನ ಷಡ್ಡಕ, ದಕ್ಷನ ಯಜ್ಞದ ಕಾಲಕ್ಕೆ ಶಿವನಿಗೆ ಅವಮಾನವಾಯಿತು. ಆಗ ಶಿವನನ್ನು ನಿಂದಿಸಿದವರಲ್ಲಿ ಭ್ರಗುವೂ ಒಬ್ಬನಾಗಿದ್ದನು. ವೀರಭದ್ರನು ದಕ್ಷನ ಯಜ್ಞವನ್ನು ಧ್ವಂಸಗೊಳಿಸುತ್ತಿದ್ದಾಗ, “ಗುವಿನ ಗಡ್ಡವನ್ನು ಸುಟ್ಟನು. ಶಂಕರನನ್ನು ಸ್ತುತಿಸಿದ ನಂತರ ಅವನು ಪ್ರಸನ್ನನಾಗಿ ಬೃಗುವಿಗೆ ಹೋತದ ಗಡ್ಡವನ್ನು ಅಂಟಿಸಿದನೆಂದು ಭಾಗವತದಲ್ಲಿ ಹೇಳಿದ್ದಾರೆ. ದಕ್ಷನಿಂದ ಅವಮಾನಗೊಂಡ ಶಂಕರನು ಬೃಗುವನ್ನು ಸುಟ್ಟುಹಾಕಿದನೆಂದು ಒಮದೆಡೆ ಉಲ್ಲೇಖವಿದೆ. ದೇವ-ದೈತ್ಯರ ಕಾಳಗದಲ್ಲಿ ದೇವತೆಗಳ ಕೈಮೇಲಾದಾಗ ಸಂಜೀವಿನೀ ಮಂತ್ರವನ್ನು ಪಡೆಯಲು ಶುಕ್ರನು ಹೊರಟನು. ಬೃಗುವು ತಪಸ್ಸನ್ನು ಆರಂಭಿಸಿದನು. ಭ್ರಗುಪತ್ನಿಯು ದೇವತೆಗಳೊಡನೆ ಕಾದಾಡಹತ್ತಿದಳು. ಈಕೆ ಓರ್ವ ಸ್ತ್ರೀ ಇರುವಳೆಂಬುದನ್ನು ಗಮನಿಸದೆ, ವಿಷ್ಣುವು ತನ್ನ ಚಕ್ರವನ್ನು ಆಕೆಯ ಮೇಲೆ ಬಿಟ್ಟು ಅವಳನ್ನು ವಧಿಸಿದನು. “ಗುವು ಸಂಜೀವಿನೀಮಂತ್ರದಿಂದ ಅವಳನ್ನು ಜೀವಿತಗೊಳಿಸಿದನು. ವಿಷ್ಣುವಿಗೆ 'ನೀನು ಗರ್ಭವಾಸದ ದುಃಖವನ್ನು ಅನುಭವಿಸುವ ದೃಷ್ಟಿಯಲ್ಲಿ ಅವತರಿಸುವೆ' ಎಂಬ ಶಾಪವನ್ನು ಕೊಟ್ಟನೆಂದು ದೇವೀಭಾಗವತದಲ್ಲಿದೆ.