ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೩೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಹೂವುಗಳು ಅರಳಿದವು. ಆ ಹೂವುಗಳು ಎಂದೂ ಬಾಡಲಾರದಂತಹವಿದ್ದವು.
ರಾಮನಿಗೆ ಹಣ್ಣುಗಳನ್ನು ಅರ್ಪಿಸಿದ ಶಬರಿ ಇಲ್ಲಿಯೇ ಇರುತ್ತಿದ್ದಳು. ಮತಂಗನು
ಶಬರಿಯ ಗುರುವಾಗಿದ್ದನು.
ಬ್ರಾಹ್ಮಣತ್ವವು ಜನ್ಮವನ್ನು ಅವಲಂಬಿಸಿರುತ್ತದೆ ಎಂಬುದನ್ನು ಸ್ಪಷ್ಟಪಡಿಸಲು
ಮಹಾಭಾರತದ ಅನುಶಾಸನಪರ್ವದಲ್ಲಿ ಮತಂಗನ ಕಥೆ ಇದೆ. ತಂದೆಯ
ಯಜ್ಞಕ್ಕಾಗಿ ಸಮಿಧೆ ಮತ್ತು ದರ್ಭೆಯನ್ನು ತರಲು ಒಂದು ಬಂಡಿಗೆ ಅದರ
ಒಂದು ಬದಿಗೆ ಹೆಣ್ಣುಕತ್ತೆಯನ್ನೂ, ಇನ್ನೊಂದು ಬದಿಗೆ ಮರಿ ಗಂಡುಕತ್ತೆಯನ್ನೂ
ಹೂಡಿದನು. ಗಂಡುಕತ್ತೆಯ ಬಂಡಿಯನ್ನು ಸರಿಯಾಗಿ ಎಳೆಯಲೊಲ್ಲದು.
ಆಗ ಮತಂಗನು ಅದರ ಮೂಗಿನ ಮೇಲೆ ಚಾಟಿಯಿಂದ ಹೊಡೆದನು. ಆಗ
ಅದನ್ನು ಕಂಡ ತಾಯಿಕತ್ತೆಯು ಮರಿಕತ್ತೆಗೆ ತಿಳಿಸಿದ ಸಂಗತಿಯ ಆಶಯವು
ಮತಂಗನಿಗೆ ತಿಳಿದುಬಂದಿತು. ಈ ಬಗ್ಗೆ ಮತಂಗನು ಕೇಳಿದ್ದರಿಂದ ಆ ಹೆಣ್ಣು
ಕತ್ತೆಯು, ಮತಂಗನು ಚಾಂಡಾಲನು ಏಕಾದನು ಎಂಬ ಬಗ್ಗೆ ವಿವರಿಸಿತು.
ಮತಂಗನ ತಾಯಿಯು ಬ್ರಾಹ್ಮಣಾಗಿದ್ದರೂ ತಂದೆಯು ಕ್ಷೌರಿಕನಾಗಿದ್ದನು. ಆದ್ದರಿಂದ
ಮತಂಗನಿಗೆ ಬ್ರಾಹ್ಮಣತ್ವವು ಇಲ್ಲವಾಗಿದೆ ಎಂದಿತು. ಇದನ್ನು ಕೇಳಿಕೊಂಡ ಮತಂಗನು
ಯಜ್ಞದ ಸಿದ್ದತೆಯನ್ನು ಮಾಡುವುದನ್ನು ಬಿಟ್ಟು ತಪಸ್ಸಿಗಾರಂಭಿಸಿದನು. ಅವನಿಗೆ
ಇಂದ್ರನು ಪ್ರಸನ್ನನಾದನು. ಚಾಂಡಾಲಯೋನಿಯಲ್ಲಿ ಜನಿಸಿದವನಿಗೆ ಬ್ರಹ್ಮಣತ್ವವು
ಸಿಗುವುದು ಅಶಕ್ಯವೆಂದು ಇಂದ್ರನು ಹೇಳಿದನು. ಅನಂತರ ಮತಂಗನು ಒಂಟಿ
ಕಾಲಿನಲ್ಲಿ ನಿಂತು ನೂರು ವರ್ಷಗಳ ಕಾಲ ತಪಸ್ಸನ್ನಾಚರಿಸಿದನು. ಇಂದ್ರನು ಅವನಿಗೆ
ಅಸಾಧ್ಯ ಸಂಗತಿಗಳ ಆಸೆ ಇಟ್ಟುಕೊಳ್ಳಬಾರದೆಂದು ಹೇಳಿದನು. ಬ್ರಾಹ್ಮಣತ್ವವು
ಸಹಜಸಾಧ್ಯವಿರದೆ ಅನೇಕ ಜನ್ಮಗಳ ನಂತರ ದೊರಕುತ್ತದೆ ಎಂದು ತಿಳಿಸಿದಾಗ,
ಮತಂಗನು ಇನ್ನೂ ಒಂದು ಸಾವಿರ ವರ್ಷಗಳ ತಪಸ್ಸನ್ನು ಮಾಡಿದನು. ಆಗ
ಇಂದ್ರನು ಮತಂಗನಿಗೆ ಬ್ರಾಹ್ಮಣತ್ವವನ್ನು ಹೊರತುಪಡಿಸಿ, ಕಾಮವಿಹಾರಿ, ಕಾಮ
ರೂಪಿ, ಆಕಾಶಗಾಮಿ, ಅಕ್ಷಯಕೀರ್ತಿ ಉಳ್ಳವನಾಗಬೇಕೆಂಬ ವರಗಳನ್ನು ಕೊಟ್ಟನು.
ಮತಂಗನು ದೇಹತ್ಯಾಗ ಮಾಡಿ ವರಗಳಿಂದ ದೊರೆತ ಸ್ಥಾನಕ್ಕೆ ತಲುಪಿದನು.

೮೯. ಮದಯಂತಿ

ಇವಳು ಸೌದಾಸ (ಕಲ್ಮಾಷಪಾದ) ರಾಜನ ಪತ್ನಿಯಾಗಿದ್ದಳು. ಪುರೋಹಿತ
ನಾದ ವಸಿಷ್ಠನು ರಾಜನಿಗೆ ಶಾಪವನ್ನು ಕೊಟ್ಟ ನಂತರ, ಸೌದಾಸರಾಜನು
ವಸಿಷ್ಠನಿಗೆ ಪ್ರತಿಶಾಪವನ್ನು ಕೊಡಲು ಸಿದ್ಧನಾಗಿದ್ದನು. ಆಗ ಮದಯಂತಿಯು