ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೪೩೮
ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು
 


ಎಂಬ ಸಹೋದರನಿದ್ದನು. ಮಯನ ಪತ್ನಿಯರು ಮತ್ತು ಮಕ್ಕಳ ಬಗ್ಗೆ ವಿವಿಧ
ಗ್ರಂಥಗಳಲ್ಲಿ ಭಿನ್ನಭಿನ್ನ ಮಾಹಿತಿ ಇದೆ. ಹೇಮಾ ಎಂಬ ಅಪ್ಸರೆಯು ಈತನ
ಮಡದಿಯಾಗಿದ್ದು ಇವಳಿಂದ ಮಯನಿಗೆ ಮಂಡೋದರಿ ಎಂಬ ಕನೈಯಾದಳು. ಅವಳ ಮದುವೆಯು ರಾವಣನೊಡನೆ ನಡೆಯಿತೆಂದು ವಾಲ್ಮೀಕಿ ರಾಮಾಯಣ ದಲ್ಲಿದೆ. ಮಂಡೋದರಿಯಂತೆ, ಮಾಯಾವಿನ ಮತ್ತು ದುಂದುಭಿ ಎಂಬ ಇನ್ನೆರಡು ಮಕ್ಕಳ ಉಲ್ಲೇಖವೂ ಸಹ ಇದೆ. ಮಂಡೋದರಿಯ ಜೊತೆ ಕುಹೂ ಮತ್ತು ಉಪದಾನವಿ ಎಂಬ ಇನ್ನೆರಡು ಕನೈಯರ ಹೆಸರುಗಳೂ ಕಂಡುರಬುತ್ತವೆಎಂದು ಮತ್ಯಪುರಾಣದಲ್ಲಿದೆ. ಬ್ರಹ್ಮಾಂಡಪುರಾಣದಲ್ಲಿ ರಂಭೆಯಿಂದ ಮಯನು ಆರು ಮಕ್ಕಳನ್ನು ಹೊಂದಿದನು ಎಂದು ತಿಳಿದುಬರುತ್ತದೆ. ಋಕ್ಷಗುಹೆಯಲ್ಲಿ, ಮಾಯಾವೀ ಶಿಲ್ಪಕಾರನಾದ ಈ ಮಯನೆಂಬ ದಾನವನು ಒಂದು ಸುವರ್ಣ ಭವನವನ್ನು ನಿರ್ಮಿಸಿದನು. ಬ್ರಹ್ಮದೇವನ ವರದಿಂದ ಉಶನಸ ಎಂಬುವನ ಸಂಪತ್ತೆಲ್ಲವೂ ಮಯನಿಗೆ ಲಭಿಸಿತು. ಮಯನು ಹೇಮಾ ಎಂಬುವಳೊಡನೆ ಲಂಪಣನಾದ್ದರಿಂದ ಇಂದ್ರನು ಮರನನ್ನು ವಧಿಸಿದನೆಂದು ವಾಲ್ಮೀಕಿ ರಾಮಾಯಣದಲ್ಲಿದೆ. ನಮುಚಿಯ ವಧೆಯಿಂದ ಉಂಟಾದ ವೈರತ್ವವು ಕೊನೆಗೊಂಡು ಇಂದ್ರ ಮತ್ತು ಮಯ ಇವರಲ್ಲಿ ಸ್ನೇಹ ಬೆಳೆಯಿತೆಂದೂ, ಪರಸ್ಪರರು ತಮ್ಮ ಮಾಯಾವೀ ವಿದ್ಯೆಗಳನ್ನು ಹಂಚಿಕೊಂಡರೆಂದೂ ಬ್ರಹ್ಮ ಪುರಾಣದಲ್ಲಿದೆ. ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರಗಳನ್ನು ಕುರಿತು ಮಯನು ಗ್ರಂಥಗಳನ್ನು ರಚಿಸಿದ್ದಾನೆ. ೯೩. ಮಂಥರೆ ಮಂಥರೆಯು ಕೈಕೇಯಿಯ ತವರಿನಿಂದ ಬಂದ ದಾಸಿಯಾಗಿದ್ದಳು. ಪೂರ್ವಜನ್ಮದಲ್ಲಿ ಇವಳು ದುಂದುಭಿ ಎಂಬ ಗಂಧರ್ವಿಯಾಗಿದ್ದಳು. ಕೃಷ್ಣಾವ ತಾರದಲ್ಲಿ ಇವಳು ಕುಯ್ದೆಯಾಗಿದ್ದಳು. ಇವಳಿಗೆ ಗೂನು ಇತ್ತು. ಕೈಕೇಯಿಯು ರಾಮನ ಬಗ್ಗೆ ಅತಿಶಯವಾದ ಪ್ರೀತಿಯನ್ನು ಇಟ್ಟುಕೊಂಡಿದ್ದಳು. ಆದರೂ ಮಂಥರೆಯು ರಾಮನ ಬಗ್ಗೆ ಕೈಕೇಯಿಯ ಮನಸ್ಸಿನಲ್ಲಿ ಮತ್ಸರವನ್ನು ಜಾಗೃತ ಗೊಳಿಸಿದಳು. ರಾಮನ ಯೌವರಾಜ್ಯಭಿಷೇಕದ ಸಮಯದಲ್ಲಿಯೇ, ದಶರಥನು ಕೈಕೇಯಿಗೆ ಕೊಡಬೇಕಿದ್ದ ಎರಡು ವರಗಳನ್ನು ಬೇಡಿಕೊಳ್ಳಬೇಕೆಂದು ಮಂಥರೆಯು ಒತ್ತಾಯಪಡಿಸಿದಳು. ಭರತನಿಗೆ ಯೌವರಾಜ್ಯಾಭಿಷೆಕ ಮತ್ತು ರಾಮನಿಗೆ ಹದಿನಾಲ್ಕು ವರ್ಷಗಳ ವನವಾಸವಾಗಬೇಕೆಂದು ಕೈಕೇಯಿಗೆ ಒಪ್ಪಿಗೆಯಾಗುವಂತೆ ಹೇಳಿದಳು.