ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ೪ರ್೩ ಮಂಥರೆಯು ತನ್ನ ದುಷ್ಟಬುದ್ದಿಯಿಂದ ಕೈಕೇಯಿಯ ಬುದ್ದಿಗೆಡಿಸಿದಳು. ಶತ್ರುಘ್ನ ಹಾಗೂ ಭರತ ಇವರು ಮಾತನಾಡುತ್ತಿದ್ದಾಗ, ಶೃಂಗರಿಸಿಕೊಂಡು ಬಾಗಿಲಿನಲ್ಲಿ ನಿಂತಿದ್ದ ಮಂಥರೆಯನ್ನು ಕಂಡು ಶತ್ರುಘ್ನನಿಗೆ ತಡೆಯಲಾರದ ಕೋಪ ಬಂದಿತು. ಇವಳಿಗೆ ಸರಿಯಾದ ಶಿಕ್ಷೆ ಮಾಡಬೇಕೆಂದು ಉದ್ಯುಕ್ತನಾದ ಶತ್ರುಘ್ನನನ್ನು ಭರತನು ತಡೆದನು. ಮಂಥರೆಯು ಗೋಳಿಡುತ್ತ ಕೈಕೇಯಿಯ ಬಳಿ ಹೋದಾಗ ಕೈಕೇಯಿಯು ಅವಳನ್ನು ಸಂತೈಸಿದಳು. ೯೪, ಮಂಡೋದರಿ ಇವಳು ಮಯಾಸುರನ ಮಗಳಾಗಿದ್ದಳು. ರಾವಣನ ಭಯದಿಂದ ಮಯನು ತನ್ನ ಕನ್ಯಯಾದ ಇವಳನ್ನು ಅವನಿಗೆ ಒಪ್ಪಿಸಿ ಅವನೊಡನೆ ಸ್ನೇಹವನ್ನು ಸಂಪಾದಿಸಿದನೆಂದು ವಾಲ್ಮೀಕಿರಾಮಾಯಣದ ಯುದ್ದಕಾಂಡ ೭/೭ರಲ್ಲಿದೆ. ಸೀತೆಯ ಶೋಧಾರ್ಥವಾಗಿ ಅಲೆಯುತ್ತಿದ್ದ ಹನುಮಾನನಿಗೆ ಲಂಕೆಯ ಅರಮನೆಯಲ್ಲಿ, ಆಭರಣಗಳನ್ನು ಧರಿಸಿದ, ಗೌರಾಂಗಿಂಯಾದ. ಓರ್ವ ರೂಪಸಂಪನ್ನೆ, ಅಂತಃಪುರದ ಸ್ವಾಮಿನಿಯೆನಿಸುತ್ತಿದ್ದ ಮಂಡೋದರಿಯು ಕಂಡುಬಂದಳು (ಸುಂದರಕಾಂಡ, ೧೦/೫೦-೫೨).* ಸ್ಕಂದಪುರಾಣದಲ್ಲಿ ರಂಭೆ ಇಲ್ಲವೆ ಹೇಮಾ, ಈ ಅಪ್ಪರೆಯಿಂದ ಮಯಾ ಸುರನಿಗೆ ಹುಟ್ಟಿದ ಕನ್ಯ ಮಂಡೋದರಿ ಎಂದಿದೆ. ಬ್ರಹ್ಮಾಂಡಪುರಾಣದಲ್ಲಿಯೂ ಇದೇ ರೀತಿಯ ಉಲ್ಲೇಖವಿದೆ. 'ಸೀತೆಯು ಇವಳ ಕನ್ಯಯಾಗಿದ್ದಳು' ಎಂಬ ಅಭಿಪ್ರಾಯವೂ ಕಂಡುಬರುತ್ತದೆ. ಮೇಘನಾದನು ಮಂಡೋದರಿಯ ಮಗ. - ಪಂಚಪತಿವ್ರತೆಯರಲ್ಲಿ ಮಂಡೋದರಿ ಒಬ್ಬಳಾಗಿದ್ದಾಳೆ. 'ಅಹಲ್ಯಾ ದೌಪದೀ ಸೀತಾ ತಾರಾ ಮಂಡೋದರೀ ತಥಾ' ಎಂದಿದೆ. ೯೫. ಮರುತ್ತ ಈ ರಾಜರ್ಷಿಯು ಸಂವರ್ತಋಷಿಯ ಶಿಷ್ಯ. ಐತರೇಯಬ್ರಾಹ್ಮಣದ ಪ್ರಕಾರ ಈತನು ಕಾಮಪಾನ ವಂಶಜನಾಗಿದ್ದನು. ಬೃಹಸ್ಪತಿಯು ಇವನಿಗೆ ಪುರೋಹಿತ ನಾಗಿದ್ದನು. ಇಂದ್ರ ಮತ್ತು ಮರುತ್ತರಲ್ಲಿ ಯಾವಾಗಲೂ ಸ್ಪರ್ಧೆ ನಡೆಯುತ್ತಿತ್ತು. ಮರುತನ ಮುಂದೆ ಇಂದ್ರನ ಆಟವು ನಡೆಯುತ್ತಿರಲಿಲ್ಲ. ಆಗ ಇಂದ್ರನು ಬೃಹಸ್ಪತಿಗೆ ಮರುತ್ತನ ಪೌರೋಹಿತ್ಯವನ್ನು ಬಿಡಲು ಹೇಳಿದನು. ನಾರದನ ಹೇಳಿಕೆಯಂತೆ ಮರುತ್ತನು ಸಂವರ್ತನ ಬಳಿಗೆ ಹೋಗಿ, ಯಜ್ಞದ ಋತ್ವಿಜತ್ವವನ್ನು ಸ್ವೀಕರಿಸ