ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೪೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಬೇಕೆಂದು ವಿನಂತಿಸಿದನು. ಸಂವರ್ತನು ಈತನ ಯಜ್ಞದ ಋತ್ವಿಜತ್ವವನ್ನು
ಸ್ವೀಕರಿಸಿ ಪ್ರಯತ್ನಿಸಿದನು. ಆದರೆ ಸಂವರ್ತನ ಬೆಂಗಾವಲಿನಿಂದ ಇಂದ್ರನ
ಕುಚೇಷ್ಟೆಗಳು ವ್ಯರ್ಥವಾದವು. ಮರುತ್ತನು ಇಂದ್ರ, ಬೃಹಸ್ಪತಿ ಮೊದಲಾದ
ದೇವತೆಗಳನ್ನು ಸನ್ಮಾನಪೂರ್ವಕವಾಗಿ ಯಜ್ಞಕ್ಕೆ ಆಮಂತ್ರಿಸಿ, ಹವನ ಮಾಡಿದ
ಸೋಮವನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿದನು. ಅನಂತರ ಇಂದ್ರ ಮತ್ತು
ಮರುತ್ತರಲ್ಲಿ ಸ್ನೇಹವು ಬೆಳೆಯಿತು.
ರಾವಣನು ಮರುತ್ತನ ಯಜ್ಞದಲ್ಲಿ ವಿಘ್ನವನ್ನುಂಟುಮಾಡಿದನು. ಆಗ
ಮರುತ್ತನು ಅವನೊಡನೆ ಯುದ್ಧ ಮಾಡಲು ಸಜ್ಜಾದನು. 'ಯಜ್ಞದೀಕ್ಷೆಯನ್ನು
ಹೊಂದಿದವನು ಯುದ್ಧ ಮಾಡುವಂತಿಲ್ಲ!' ಎಂದು ಹೇಳಿ ಸಂವರ್ತನು ಆತನನ್ನು
ಪರಾವೃತಗೊಳಿಸಿದನು. ಆಗ ರಾವಣನು ತನಗೆ ಜಯವಾಯಿತು ಎಂದು
ಘೋಷಿಸಿಕೊಂಡು ಹೊರಟುಹೋದನು. ಮರುತ್ತನ ಯಜ್ಞವು ಅಭೂತ
ಪೂರ್ವವಾಯಿತು. ಮರುತ್ತನ ಗಣದವರೆಲ್ಲರೂ ಸಂತೋಷಗೊಂಡರು.
ಮರುತತನು ಬ್ರಾಹ್ಮಣಗಂಧರ್ವಾದಿಗಳಿಗೆ ಹೇರಳ ದ್ರವ್ಯವನ್ನು ಕೊಟ್ಟನು. ಗುರುವಿನ
ಆಜ್ಞೆಯ ಮೇರೆಗೆ ಯಜ್ಞವನ್ನು ಪೂರ್ಣಗೊಳಿಸಿದ ನಂತರ ಇವನು
ರಾಜ್ಯವನ್ನಾಳಿದನು. ಮರುತ್ತನಿಗೆ ದಮ ಎಂಬ ಹೆಸರಿನ ಒಬ್ಬ ಮಗನಿದ್ದನು.

೯೬. ಮಹಾಪಾರ್ಶ್ವ

ಇವನು ವಿಶ್ರವ ಮತ್ತು ಪುಷ್ಕೋತ್ಕಟಾ ಇವರ ಪುತ್ರ. ಇವನಿಗೆ 'ಮತ್ತ'ನೆಂತಲೂ
ಹೆಸರಿತ್ತು. ಇವನು ರಾವಣನ ಅಮಾತ್ಯರಲ್ಲಿ ಒಬ್ಬನಾಗಿದ್ದನು. ಹನುಮಾನನು
ಲಂಕಾ ದಹನದ ಕಾಲಕ್ಕೆ ಇವರ ಮನೆಗೆ ಬೆಂಕಿಯಿಟ್ಟನು. ಯುದ್ಧದಲ್ಲಿ ರಾಮನು
ಇವನನ್ನು ಓಡಿಸಿದನು. ಮಹಾಪಾರ್ಶ್ವನು ವಾನರರ ಸೇನೆಯನ್ನು ಅಪರಿಮಿತವಾಗಿ
ಸಂಹರಿಸಿದನು; ಜಾಂಬವಾನ ಹಾಗೂ ಗವಾಕ್ಷ ಇವರಿಗೆ ಗಾಯಗಳನ್ನು
ಉಂಟುಮಾಡಿದನು. ಅಂಗದನಿಂದ ಇವನ ವಧೆಯಾಯಿತು.

೯೭. ಮಾತಲಿ

ಇವನು ಇಂದ್ರನ ಸಾರಥಿ; ಇವನ ಪತ್ನಿ ಸುಧರ್ಮೆ. ಇವಳಿಂದ ಮಾತಲಿಗೆ
ಎರಡು ಮಕ್ಕಳಾದವು. ರಾಮ-ರಾವಣರ ಯುದ್ಧದಲ್ಲಿ ಇಂದ್ರನ ಸೂಚನೆಯಂತೆ
ಇವನು ರಥ, ಧನುಸ್ಸು, ಬಾಣ, ಕವಚಸಹಿತನಾಗಿ ರಾಮನ ನೆರವಿಗೆ ಬಂದನು.
ರಾಮನ ಸಾರಥ್ಯವನ್ನು ಬಹಳ ಕುಶಲತೆಯಿಂದ ಮಾಡಿ ರಾವಣನನ್ನು