ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಓರ್ವ ಕನ್ಯೆಯ ಮದುವೆಯ ಪ್ರಸ್ತಾಪವಿಟ್ಟನು. ಈ ಋಷಿಯು ತೀರ ವೃದ್ಧನಾದ್ದರಿಂದ ತನ್ನ ಕನ್ಯೆಯನ್ನು ಕೊಡಲು ಮಾಂಧಾತನ ಮನಸ್ಸಿಗೆ ಸರಿಯೆನಿಸಲಿಲ್ಲ. ಆಗ ಮಾಂಧಾತನು ಅಂತರ್ಗೃಹಕ್ಕೆ ಹೋಗಿ 'ಯಾವ ಕನ್ಯೆಯು ಈ ವೃದ್ಧ ಋಷಿಯೊಡನೆ ಮದುವೆಯಾಗಲು ಇಷ್ಟಪಡುವಳೋ ಅವಳಿಗೆ ಆತನೊಡನೆ ಮದುವೆ ಮಾಡುವೆನು; ಎಂದು ಹೇಳಿದನು. ವೃದ್ಧನು ರೂಪವನ್ನು ಕಂಡನಂತರ ಯಾವ ಕನ್ಯೆಯೂ ಒಪ್ಪಲಾರಳೆಂಬ ನಂಬಿಕೆ ರಾಜನಿಗಿತ್ತು. ಈ ಕಪಟವನ್ನರಿತ ಆ ವೃದ್ಧ ಋಷಿಯು ಅತಿಸುಂದರ ರೂಪವನ್ನು ತಾಳಿ ಅಂತರ್ಗೃಹದಲ್ಲಿ ಪ್ರವೇಶಿಸಿದನು. ಆಗ ಅಲ್ಲಿದ್ದ ಪ್ರತಿಯೊಬ್ಬ ಕನ್ಯೆಯೂ ತನಗೆ ಈತನೇ ಪತಿಯಾಗಿರ

ಬೇಕೆಂದು ದೃಢವಾಗಿ ಹೇಳಿದಳು. ಹೀಗಾದ್ದರಿಂದ ಮಾಂಧಾತನು ತನ್ನ ಎಲ್ಲ ಕನೈಯರನ್ನೂ ಈ ಋಷಿಗೆ ಮದುವೆ ಮಾಡಿಕೊಟ್ಟನೆಂಬ ಕಥೆಯು ಪದ್ಯ ಪುರಾಣ, ವಿಷ್ಣುಪುರಾಣ ಮತ್ತು ಗರುಡಪುರಾಣಗಳಲ್ಲಿದೆ. ೯೯. ಮಾರೀಚ, ಸುಬಾಹು ಮಾರೀಚ-ಸುಬಾಹು ಇವರು ತಾಟಕಿ ಮತ್ತು ಸುಂದರ ಇವರ ಮಕ್ಕಳು. ಇಬ್ಬರೂ ತುಂಬಾ ಬಲಶಾಲಿಗಳೂ, ಸುಶಿಕ್ಷಿತರೂ ಆಗಿದ್ದರೆಂದು ವಿಶ್ವಾಮಿತ್ರನು ಹೇಳಿದ್ದಾನೆ. ಮಾರೀಚನು ಈ ಮೊದಲು ಯಕ್ಷನಾಗಿದ್ದನು. ಅಗಸ್ಯನ ಶಾಪದಿಂದ ಅವನು ರಾಕ್ಷಸನಾದನು. ಸೀತೆಯನ್ನು ಅಪಹರಿಸಬಾರದೆಂದು ಈತನು ರಾವಣನಿಗೆ ಮತ್ತೆ ಮತ್ತೆ ಹೇಳಿದನು. ರಾಮನ ಸಾಮರ್ಥ್ಯದ ಅನುಭವವು ಮಾರೀಚನಿಗೆ ಇತ್ತಾದರೂ, ರಾವಣನು ಈತನನ್ನು ಕೊಂದುಹಾಕುವ ಬೆದರಿಕೆ ಹಾಕಿದ ಕಾರಣ ಅನಿವಾರ್ಯವಾಗಿ ಇವನು 'ಸುವರ್ಣಮೃಗವಾಗಿ ರಾವಣನಿಗೆ ಸೀತಾಪಹರಣ ಕಾರ್ಯದಲ್ಲಿ ನೆರವಾದನು. ಮಾರೀಚನಿಗೆ ಹತ್ತು ಸಹಸ್ರ ಆನೆಗಳ ಬಲವಿತ್ತು. ಸುಮಾಲಿ ರಾಕ್ಷಸನ ಬಳಿಯ ನಾಲ್ಕು ಅಮಾತ್ಯರಲ್ಲಿ ಇವನು ಒಬ್ಬ ವಿಶ್ವಾಮಿತ್ರನ ಯಜ್ಞದಲ್ಲಿ ಮಾರೀಚ ಹಾಗೂ ಸುಬಾಹು ತುಂಬ ವಿಘ್ನ ಗಳನ್ನುಂಟುಮಾಡುತ್ತಿದ್ದರು. ರಾಮನು ಸುಬಾಹುವನ್ನು ವಧಿಸಿದನು. ಮಾರೀಚನು ಬಾಣಗಳ ಹೊಡೆತದಿಂದಾಗಿ ಸಮುದ್ರದಲ್ಲಿ ಬಿದ್ದನು; ಲಂಕೆಗೆ ಹೋಗಿ ರಾವಣನ ಆಶ್ರಯವನ್ನು ಆಗ ಪಡೆದಿದ್ದನು. ಮಾರೀಚನು ಸುವರ್ಣಮೃಗದ ರೂಪವನ್ನು ಧರಿಸಿದಾಗ ಇವನನ್ನು ಬೆನ್ನಟ್ಟಿದ ರಾಮ ಇವನನ್ನು ಕೊಂದನು. ಬ್ರಹ್ಮದೇವನಿಂದ ಈತನಿಗೆ ಯಾರಿಂದಲೂ ವಧೆಯಾಗದ ವರವಿತ್ತು.