ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೪ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ೧೦೨. ಮಿತ್ರ ವರುಣಪದಕ್ಕೆ ಸಂಬಂಧವಿದ್ದ ಒಂದು ದೇವತೆ. ಈತನು ಹನ್ನೆರಡು ಆದಿತ್ಯರಲ್ಲಿ ಒಬ್ಬ ಇವನಿಗೆ ರೇವತಿ ಎಂಬ ಸ್ತ್ರೀಯಿಂದ ಉತ್ಸರ್ಗ, ಅರಿಷ್ಟ ಮತ್ತು ಪಿಪ್ಪಲ ಎಂಬ ಮೂವರು ಪುತ್ರರಾದರು. ಇವನು ವರುಣಪದದ ಅಧಿಕಾರದಲ್ಲಿದ್ದಾಗ ಉರ್ವಶಿಗೆ ತನ್ನೊಡನೆ ಮದುವೆಯಾಗಲು ಕೇಳಿದ್ದನು. ಉರ್ವಶಿಯು ಅದಕ್ಕೆ ಸಮ್ಮತಿಸಿದ್ದಳು. ನಂತರ ಉರ್ವಶಿಯನ್ನು ವರುಣನು ಕಂಡಾಗ ಈತನ ಕಾಮಭಾವನೆಯು ಕೆರಳಿ, ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಕೇಳಿದನು. ಆಗ ಉರ್ವಶಿ 'ನಾನು ಮೊದಲು ಮಿತ್ರನಿಗೆ ಮಾತುಕೊಟ್ಟಿದ್ದೇನೆ; ನನ್ನ ದೇಹವು ಅವನ ಅಧಿಕಾರದ್ದಾಗಿದೆ' ಎಂದು ನುಡಿದು ಕೇವಲ ತನ್ನ ಪ್ರೇಮವನ್ನು ಕೊಟ್ಟಳು. ಆಗ ವರುಣನು ತನ್ನ ಕಾಮೋದ್ರೇಕವನ್ನು ತಡೆಯಲರದೆ, ಉರ್ವಶಿಗಾಗಿದ್ದ ತನ್ನ ತೇಜಸ್ಸನ್ನು ಒಂದು ಕುಂಭದಲ್ಲಿ ವಿಸರ್ಜಿಸಿದನು. ಈ ಸಮಾಚಾರವು ಮಿತ್ರನಿಗೆ ತಿಳಿದುಬಂದಾಗ ಅವನು ಕೋಪಗೊಂಡು ಉರ್ವಶಿಗೆ ಶಾಪವನ್ನಿತ್ತು, ತನ್ನ ವೀರ್ಯವನ್ನು ಅದೇ ಕುಂಭದಲ್ಲಿ ವಿಸರ್ಜಿಸಿದನು. ಆ ಕುಂಭದಿಂದ ಅಗಸ್ಯ ಮತ್ತು ವಸಿಷ್ಠರು ಜನ್ಮ ತಾಳಿದರು. 'ನಾನು ಕೇವಲ ನಿನ್ನೊಬ್ಬನ ಮಗ ಮಾತ್ರವಲ್ಲ' ಎಂದು ಅಗಸ್ಯನು ಮಿತ್ರನಿಗೆ ಹೇಳಿ ಅವನನ್ನು ತ್ಯಜಿಸಿದನು. ೧೦೩. ಮೇಘನಾದ (ಇಂದ್ರಜಿತು) ಇವನು ರಾವಣ ಮತ್ತು ಮಂಡೋದರಿಯ ಹಿರಿಯ ಮಗ. ಹುಟ್ಟಿದ ಕ್ಷಣವೇ ಇವನು ಮೇಘದಂತೆ ಘರ್ಜಿಸಿದನಾಗಿ ಇವನಿಗೆ ಮೇಘನಾದನೆಂಬ ಹೆಸರು ಬಂದಿತು. ಪ್ರಾಯಕ್ಕೆ ಬಂದ ನಂತರ ಇವನು ಶುಕ್ರಾಚಾರ್ಯರ ಸಹಾಯದಿಂದ ಅಶ್ವಮೇಧ, ಅಗ್ನಿಷ್ಟೋಮ, ಬಹುಸುವರ್ಣಕ, ರಾಜಸೂಯ, ಗೋಮೇಧ, ವೈಷ್ಣವ ಮತ್ತು ಮಹೇಶ್ವರಿ ಎಂಬ ಏಳು ಯಜ್ಞಗಳನ್ನು ನಿಕುಂಭಿಲೆಯಲ್ಲಿ ನೆರವೇರಿಸಿದನು. ಆಗ ಶಿವನಿಂದ ಮೇಘನಾದನಿಗೆ ದಿವ್ಯವಾದ ರಥ, ತಾಮಸೀ ಮಾಯಾವಿದ್ಯೆ, ಶಸ್ತ್ರಗಳು, ಧನುಸ್ಸು, ಬಾಣಗಳು, ಇವೆಲ್ಲ ಪ್ರಾಪ್ತವಾದವು. ಬ್ರಹ್ಮದೇವನು ಇವನಿಗೆ ಮರ್ಯಾದಿಕ ಸಂದರ್ಭಗಳಲ್ಲಿ ಮಧೆಯಾಗಲಾರದೆಂಬ ವರ ಕೊಟ್ಟಿದ್ದನು. ಮೇಘನಾದನು ಬಲು ಶೂರ; ಇಂದ್ರನನ್ನು ಜಯಿಸಿದವನು. ಇಂದ್ರನ ಬಿಡುಗಡೆಗಾಗಿ ಬ್ರಹ್ಮದೇವನು, ಇವನಿಗೆ ಅಮರತ್ವವನ್ನು ಹೊರತುಪಡಿಸಿ ಏನು ಬೇಕಾದರೂ ಬೇಡಿಕೊಳ್ಳಲು ಹೇಳಿದನು.