ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಇವನು ರಾಮನಿಗೆ ನೆರವಾಗಿ, ಯುದ್ದದಲ್ಲಿ ವಜ್ರಮುಷ್ಟಿ ಹಾಗೂ ಯೂಪಾಕ್ಷರೆಂಬ ರಾಕ್ಷಸರನ್ನು ವಧಿಸಿದನು. ವಾಲಿಯ ವಧೆಯಾದನಂತರ ಸುಗ್ರೀವನು ಸೀತೆಯ ಶೋಧಾರ್ಥಕ್ಕಾಗಿ ಕಳಿಸಿದ ವಾನರರಲ್ಲಿ ಮೈಂದನೂ ಒಬ್ಬನಾಗಿದ್ದನು. ಬ್ರಹ್ಮದೇವನು ಈತನಿಗೆ ಮರ್ಯಾದಿತ ಸಂದರ್ಭದಲ್ಲಿ ವಧೆಯಾಗಲಾರದೆಂಬ ವರವನ್ನು ಕೊಟ್ಟಿದ್ದನು. ಕಲಿಯುಗದವರೆಗೆ ಜೀವಿಸಿರಬೇಕೆಂದು ರಾಮನು ಮೈಂಧನಿಗೆ ಹೇಳಿದ್ದನು. ೧೦೫. ಯದು ಇವನು ಯಯಾತಿ ಹಾಗೂ ದೇವಯಾನಿಯರ ಮಗ. ಯಯಾತಿ ಮತ್ತು ಆತನ ಎರಡನೇ ಹೆಂಡತಿಯಾದ ಶರ್ಮಿಷ್ಠೆಯ ಜೇಷ್ಠಪುತ್ರನಾದ ಪುರು ಯಯಾತಿಗೆ ತುಂಬಾ ಮೆಚ್ಚಿಗೆಯವನಾಗಿದ್ದನು. ಇದು ಯದುವಿನ ಕೊರಗಿಗೆ ಕಾರಣವಾಯಿತು. ಯದುವಿಗೆ ಪುರು ಬಗ್ಗೆ ಮತ್ತರವಿದ್ದು ತಂದೆಯಾದ ಯಯಾತಿಯ ಬಗ್ಗೆ ಒಂದು ರೀತಿಯ ತಿರಸ್ಕಾರವಿತ್ತು. ದೈತ್ಯರ ಗುರುವಾದ ಶುಕ್ರಾಚಾರ್ಯನ ಶಾಪದಿಂದ ಪ್ರಾಪ್ತವಾದ ಮುಪ್ಪನ್ನು ಕೆಲವು ಕಾಲದವರೆಗೆ ಮಗನು ಸ್ವೀಕರಿಸಿ, ತನ್ನ ತಾರುಣ್ಯವನ್ನು ತಂದೆಗೆ ಕೊಡಬೇಕೆಂಬ ಅಪೇಕ್ಷೆಯು ಯಯಾತಿಯದಾಗಿತ್ತು. ಈ ಮುಪ್ಪನ್ನು ಸ್ವೀಕರಿಸಲು ಯದುವಿಗೆ ಯಯಾತಿಯು ಹೇಳಿದಾಗ ಅವನು ನಿರಾಕರಿಸಿದನು. ಇದಕ್ಕೆ ಯದುವು ಕೊಟ್ಟ ಕಾರಣಗಳು ಅನೇಕವಾಗಿವೆ. ಯಯಾತಿಯು ಯದುವನ್ನು ಪ್ರೀತಿಮಮತೆಗಳಿಂದ ಕಾಣುತ್ತಿರ ಲಿಲ್ಲವೆಂಬುದೂ ಒಂದು ಕಾರಣವಾಗಿತ್ತು. ಅದಲ್ಲದೆ, ಯದುವು ಒಬ್ಬ ಬ್ರಾಹ್ಮಣನಿಗೆ ಏನಾದರೊಂದನ್ನು ಕೊಡುವ ವಚನವನ್ನು ಕೊಟ್ಟಿದ್ದನು. ಮುಪ್ಪನ್ನು ಒಪ್ಪಿಕೊಂಡಿದ್ದರೆ ಅದರಲ್ಲಿ ಯದುವಿಗೆ ಅಡಚಣೆ ಬರುವ ಸಂಭವವಿತ್ತು. ಇದಕ್ಕಿಂತ ಮಹತ್ವದ ಕಾರಣವೆಂದರೆ, ತನ್ನ ತಾರುಣ್ಯವನ್ನು ಸ್ವೀಕರಿಸಿದ ತಂದೆಯು ತನ್ನ ತಾಯಿಯೊಡನೆ ರತಿ ಕ್ರೀಡೆಯಲ್ಲಿ ತೊಡಗುವದರಿಂದ ಮಾತೃಗಮನದ ಪಾಪವು ತನಗೆ ತಾಗುವದೆಂಬ ಭಯವು ಯದುವಿಗೆ ಇತ್ತು. ಕಾರಣಗಳು ಏನೇ ಇದ್ದರೂ, ಯಯಾತಿಯು ಯದುವಿನ ಮೇಲೆ ಕೋಪಗೊಂಡು ಅವನಿಗೆ “ನೀನು ಒಬ್ಬ ಭಯಂಕರ ರಾಕ್ಷಸನಾಗು! ನೀನು ಯಾತುಧಾನವನ್ನು ಉಂಟುಮಾಡು! ಸೋಮಕುಲದಲ್ಲಿಂಯ ನಿನ್ನ ದುಷ್ಟಸಂತತಿಯು ಬಾಳಲಾರದು! ನಿನ್ನಂತೆಯೇ ನಿನ್ನ ವಂಶಜರೂ ಉದ್ದಟರಾಗುವರು!” ಎಂಬ ಶಾಪವನ್ನು ಕೊಟ್ಟನು. ಯಯಾತಿಯ ತರುವಾಯ ರಾಜ್ಯದ ಹಕ್ಕುದಾರನು ಜೇಷ್ಠಪುತ್ರನಾದ ಯದುವೇ