ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೮ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಇವನು ದಕ್ಷಿಣ ದಿಕ್ಕಿನ ಅಧಿಪತಿ, ಕುಂಭಕರ್ಣನು ಇವನನ್ನು ಪರಾಭವ ಗೊಳಿಸಿದ್ದನು. ರಾವಣನ ಅಂಜಿಕೆಯಿಂದ ಈತನು ಕಾಗೆಯಾಗಿ ಅವಿತು ಕೊಂಡಿದ್ದನು. ರಾವಣನು ಹೊರಟುಹೋದನಂತರ ಇವನು ಕಾಗೆಗಳಿಗೆ ನಿಮಗೆ ರೋಗಗಳು ಬರಲಾರವು; ಮತ್ತು ನಿಮ್ಮ ವಂಶದವರಿಗೆ ಸ್ವಾಭಾವಿಕ ಮರಣವು ಬರಲಾರವು; ಯಾರಾದರೂ ನಿಮ್ಮನ್ನು ಕೊಂದರೆ ಮಾತ್ರ ನಿಮಗೆ ಮರಣ! ಇಲ್ಲವಾದರೆ ನೀವು ಜೀವಿತವಾಗಿಯೇ ಉಳಿಯುವಿರಿ!” ಎಂಬ ವರವನ್ನು ಕೊಟ್ಟನು. ಯಮ ಮತ್ತು ರಾವಣರಲ್ಲಿ ಏಳು ರಾತ್ರಿಗಳವರೆಗೆ ಯುದ್ಧ ನಡೆದಿತ್ತು. ಕೊನೆಗೆ ಯಮನು ಕಾಲದಂಡವನ್ನು ಎತ್ತಿಕೊಂಡನು. ಆಗ ಬ್ರಹ್ಮದೇವನು ಅದನ್ನು ಪ್ರಯೋಗಿಸಬಾರದೆಂದು ಯಮನಿಗೆ ಹೇಳಿ ತಡೆದನು. ಏಕೆಂದರೆ ಇದರಿಂದ ಬ್ರಹ್ಮದೇವನು ರಾವಣನಿಗೆ ಕೊಟ್ಟ ವರವನ್ನು ವಿರೋಧಿಸಿದಂತಾಗುತ್ತಿತ್ತು. 'ನನ್ನ ಕಾಲದಂಡದಿಂದ ನೀನು ಸಾಯಲಾರೆ! ನೀನು ರೋಗಮುಕ್ತನಾಗಿರುವಿ!” ಎಂಬ ವರವನ್ನು ಯಮನು ಹನುಮಾನನಿಗೆ ಕೊಟ್ಟಿದ್ದನು. ೧೦೭. ಯಯಾತಿ

  • ಈತನು ಇಕ್ಷಾಕುಕುಲದ ನಹುಷರಾಜನ ಮಗ, ದೈತ್ಯರ ಗುರುವಾದ

ಶುಕ್ರಾಚಾರನ ಮಗಳಾದ ದೇವಯಾನಿ ಈತನ ಭಾರ್ಯೆಯಾಗಿದ್ದಳು. ದೈತ್ಯರಾಜನಾದ ವೃಷಪರ್ವನ ಕನ್ಯಯಾದ ಶರ್ಮಿಷ್ಠೆಯೂ ಸಹ ಈತನ ಹೆಂಡತಿಯಾಗಿದ್ದಳು. ಶರ್ಮಿಷ್ಠೆಯು ದೇವ ಯಾನಿಯ ದಾಸಿಯಾಗಿ ಮದುವೆಯ ನಂತರ ಯಯಾತಿಯ ಬಳಿಗೆ ಬಂದಿದ್ದಳು. ಆಗ ಶುಕ್ರಾಚಾರ್ಯನು ಯಯಾತಿಗೆ “ನೀನು ಶರ್ಮಿಷ್ಠೆಯ ಶಯನಸೇವೆಯನ್ನು ಪಡೆಯಕೂಡದು” ಎಂದು ಹೇಳಿದ್ದರೂ ಯಯಾತಿಯಿಂದ ಶರ್ಮಿಷ್ಠೆಗೆ ಮೂರು ಮಕ್ಕಳಾದರು. ದೇವಯಾನಿಗೆ ಇಬ್ಬರೇ ಮಕ್ಕಳಾಗಿದ್ದರು. ಈ ಕಾರಣ ದೇವಯಾನಿಗೆ ತಡೆಯಲಾಗದ ಕೋಪವುಂಟಾಯಿತು. ಅವಳು ತಂದೆಯಾದ ಶುಕ್ರಾಚಾರ್ಯನಿಗೆ ದೂರುಕೊಟ್ಟಳು. ಆಗ ಶುಕ್ರಾಚಾರ್ಯನು ಯಯಾತಿಗೆ 'ನೀನು ಜರಾಜರ್ಜರನಾಗಿ ದುರ್ಬಲನಾಗುವೆ' ಎಂಬ ಶಾಸನವನ್ನು ಉಸುರಿದನು. 'ನಿನ್ನ ವಾರ್ಧಕ್ಯವನ್ನು ಯಾರಾದರೂ ಸ್ವೀಕರಿಸಿದರೆ ಅವರ ತಾರುಣ್ಯವು ನಿನಗೆ ಪಾಪವಾಗುವದು' ಎಂಬ ಸಂಗತಿಯನ್ನು ತಿಳಿಸಿದನು, ಯಯಾತಿ ತನ್ನ ಮುಪ್ಪನ್ನು ಸ್ವೀಕರಿಸಲು ತನ್ನ ಪುತ್ರನಿಗೆ ವಿನಂತಿಸಿದನು. ಪುರೂರವನು ಅದಕ್ಕೆ ಒಪ್ಪಿ ಸ್ವೀಕರಿಸಿದನು. ಇನ್ನುಳಿದ ಮಕ್ಕಳು ನಿರಾಕರಿಸಿದರು. ಅಂಥ ಮಕ್ಕಳಿಗೆ ಯಯಾತಿ ಹಲವು ಬೇರೆ ಬೇರೆ ಶಾಪಗಳನ್ನು ಕೊಟ್ಟನು. ಯಯಾತಿ