ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ಅತ್ಯಂತ ಕಾಮುಕನಿದ್ದನು. ಸಾವಿರಾರು ವರ್ಷಗಳನ್ನು ಭೋಗವಿಲಾಸ ಗಳಲ್ಲಿ ಕಳೆದಿದ್ದರೂ ಅವನಿಗೆ ತೃಪ್ತಿಯಾಗಿರಲಿಲ್ಲ. ಆತನು ಧರ್ಮಿಷ್ಠನಾಗಿದ್ದನು. ಪುರುನಿಗೆ ಕೊಟ್ಟ ತನ್ನ ವಾರ್ಧಕ್ಯವನ್ನು ಇವನು ಪುನಃ ಪಡೆದು ಪುರುವಿನ ಯೌವನವನ್ನು ಅವನಿಗೆ ಮರಳಿ ಕೊಟ್ಟನು. ಸ್ವರ್ಗದಲ್ಲಿಯೂ ಇವನ ಅಹಂಕಾರವು ಈತನಿಗೆ ಅಡಚಣೆಗೊಳಮಾಡಿತು. ಇಂದ್ರನು ಸ್ವರ್ಗದಿಂದ ಇವನನ್ನು ಪುನಃ ಭೂಮಿಗೆ ತಳ್ಳಿದನು. ಇವನು ಅನೇಕ ಯಜ್ಞಯಾಗಗಳನ್ನು ಸಾಕಾರಗೊಳಿಸಿದನು. ರಾಜನೀತಿಯನ್ನು ಅನುಸರಿಸಿ ಪ್ರಜೆಗಳ ರಕ್ಷಣೆ-ಪೋಷಣೆಗಳನ್ನು ಮಾಡಿದನು. ಬ್ರಾಹ್ಮಣರಿಗೆ ಸಹಸ್ರಾರು ಗೋವುಗಳನ್ನು ದಾನವಾಗಿ ಕೊಟ್ಟನು; ಖ್ಯಾತ ದಾನಿ ಎನಿಸಿದನು. ದೇವಯಾನಿಯಿಂದ ಇವನಿಗೆ ಯದು-ತುರ್ವಸು ಎಂಬ ಮಕ್ಕಳಾದರು. ಶರ್ಮಿಷ್ಠೆಯಿಂದ ದ್ರುಹ್ಯು ಅನು ಮತ್ತು ಪುರು ಎಂಬ ಮಕ್ಕಳಾದರು. ಯಯಾತಿಗೆ ಮಾಧವಿ ಮತ್ತು ಸುಕನ್ಯ ಎಂಬ ಇಬ್ಬರು ಕನೈಯರಿದ್ದರೆಂಬ ಉಲ್ಲೇಖ ಕೆಲವು ಗ್ರಂಥಗಳಲ್ಲಿದೆ. ಸುಕನ್ಯ ಯಯಾತಿಯ ಮಗಳಿರದೇ ಶರ್ಯಾತಿಯ ಮಗಳಿರಬೇಕೆಂಬ ಊಹೆ ಇದೆ. ಯಯಾತಿಯ ವೃತ್ತಾಂತ ಬೇರೆ ಬೇರೆಯಾಗಿದೆ. ೧೦.೮ ರಂಭೆ ಇವಳು ಒರ್ವ ಅತ್ಯಂತ ಸುಂದರಿಯಾದ ಅಪ್ಪರೆ. ಇವಳು ಕಶ್ಯಪ ಹಾಗೂ ಪ್ರಾಧಾ ಇವರ ಮಗಳು. ಕುಬೇರನ ಪುತ್ರನಾದ ನಲಕ್ಬರನೊಡನೆ ಇವಳು ಪತ್ನಿಯಂತೆ ಇರುತ್ತಿದ್ದಳು. ಒಮ್ಮೆ ಇವಳು ವಸ್ತಾಲಂಕಾರಭೂಷಿತಳಾಗಿ ಹೊರಟಾಗ ರಾವಣನ ಕಣ್ಣಿಗೆ ಬಿದ್ದಳು. ಆಗ ರಾವಣನು ಇವಳಲ್ಲಿ ಕಾಮಮೋಹಿತನಾಗಿ ರತಿಸುಖವನ್ನು ಅಪೇಕ್ಷಿಸಿದನು. ಆಗ ರಂಭೆ 'ನಾನು ನಲಕ್ಬರನನ್ನು ಪ್ರೀತಿಸುತ್ತೇನೆ, ನಾನು ಅವನ ಸಮಾಗಮವನ್ನು ಬಯಸಿ ಹೊರಟಿರುವೆನು; ನಾನು ನಿನ್ನ ಸೊಸೆಯಾಗಿದ್ದೇನೆ' ಎಂದು ರಾವಣನಿಗೆ ತಿಳಿಸಿದಳು. ರಾಮನು ಅವಳ ಹೇಳಿಕೆಯನ್ನು ಕಿವಿಗೆ ಹಾಕಿಕೊಳ್ಳದೇ ಬಲಾತ್ಕರಿಸಿ ಅವಳನ್ನು ಉಪಭೋಗಿಸಿದನು. ಶ್ವೇತಮುನಿ ಹಾಗೂ ಓರ್ವ ರಾಕ್ಷಸಿ, ಇವರಲ್ಲಿ ಯುದ್ಧವು ನಡೆದಾಗ, ವಾಯುವ ಅಸ್ತ್ರದ ಪ್ರಭಾವದಿಂದ ವಿಶ್ವಮಿತ್ರನ ಶಾಪದಿಂದ ಶಿಲೆಯಾದ ರಂಭೆ ಹಾಗೂ ಈ ರಾಕ್ಷಸಿ ಇಬ್ಬರೂ ಕಪಿತೀರ್ಥದಲ್ಲಿ ಬಿದ್ದರು. ಆಗ ಇವರಿಬ್ಬರ ಉದ್ದಾರವಾಯಿತು. ಮಹಾಭಾರತ ಉದ್ಯೋಗ ಪರ್ವದಲ್ಲಿಯ ಉಲ್ಲೇಖದಂತೆ