ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೨ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಒಂದು ಉದಾತ್ತಧೇಯದಿಂದ ಲಕ್ಷ್ಮಣನು ಅಣ್ಣನ ಆಜ್ಞೆಯನ್ನು ಮೀರಿದನು. ನಂತರ ಈ ಕಾರಣದಿಂದಲೇ ರಾಮನು ಲಕ್ಷ್ಮಣನನ್ನು ಬಿಟ್ಟುಕೊಡಬೇಕಾಯಿತು. ಆಮೇಲೆ ತಾನು ಸಹ ಲಕ್ಷ್ಮಣನನ್ನು ಹಿಂಬಾಲಿಸಿ ಮಹಾಪ್ರಸ್ಥಾನವನ್ನು ಕೈಕೊಂಡನು. ರಾಮನ ನಿಃಸ್ವಾರ್ಥತೆ ಅಪೂರ್ವವಾಗಿದೆ. ಶರಭಂಗ ಮತ್ತು ಸುತೀಕ್ಷ್ಯ ಋಷಿಗಳು ತಾವು ಸಂಪಾದಿಸಿದ್ದ ಬ್ರಹ್ಮಲೋಕ-ಸ್ವರ್ಗಲೋಕಗಳನ್ನು ರಾಮನಿಗೆ ಕೊಡಲು ಇಚ್ಚಿಸಿದಾಗ ರಾಮನು ಅವುಗಳನ್ನು ಬಹು ವಿನಯಪೂರ್ವಕವಾಗಿ ಬೇಡವೆಂದನು. ಭರದ್ವಾಜಮುನಿ ವರವನ್ನು ಕೊಡಲು ಬಯಸಿದಾಗ 'ಅಯೋಧ್ಯೆಯ ಮಾರ್ಗದಲ್ಲಿಂಯ ಗಿಡಮರಗಳು ಎಲ್ಲ ಋತುಗಳಲ್ಲಿಯೂ ಫಲ ಪುಷ್ಪಗಳಿಂದ ತುಂಬಿರಬೇಕು!” ಎಂಬ ತನ್ನ ಇಚ್ಛೆಯನ್ನು ಆತನ ಮುಂದೆ ವ್ಯಕ್ತಮಾಡಿದನು. ಶಂಬೂಕನ ವಧೆಯಿಂದ ಸಂತೋಷಗೊಂಡ ದೇವತೆಗಳಿಗೆ ಬ್ರಾಹ್ಮಣನ ಪುತ್ರನನ್ನು ಜಿವಿತಗೊಳಿಸಲು ಹೇಳಿದನು. ಸೀತಾತ್ಯಾಗ ಹಾಗೂ ವಾಲಿಯ ವಧೆ- ಈ ಎರಡು ರಾಮನ ವರ್ತನೆಗಳು ಸರಿ ಎನಿಸುವದಿಲ್ಲ. ಶಂಬೂಕನ ವಧೆಯ ಬಾಬತ್ತಿನಲ್ಲಿಯೂ ಹಾಗೇ ಎನಿಸುತ್ತದೆ. ರಾಮನ ಸಂಪೂರ್ಣ ಜೀವನಚರಿತ್ರೆ ವರ್ತನೆ ಆದರ್ಶಪೂರ್ಣವಾಗಿದೆ. ಇವನೊಬ್ಬ ಅಲೌಕಿಕ ಪುರುಷ, ಮರ್ಯಾದಾ ಪುರುಷೋತ್ತಮನೆಂದೆನ್ನಬಹುದು. ಕರ್ತವ್ಯ ಪೂರ್ತಿಯೇ ಈತನ ಜೀವನ ನಿಷ್ಟೆಯಾಗಿತ್ತು. ಪುತ್ರ, ಪತಿ, ಬಂಧು, ಶಾಸಕ, ಮಿತ್ರ ಎಲ್ಲ ಸಂಬಂಧಗಳಲ್ಲಿಯೂ ತನ್ನ ಕರ್ತವ್ಯ ಕಠೋರ ವರ್ತನೆಯಿಂದ ಸಮಾಜದ ಮುಂದೆ ಒಂದು ಆದರ್ಶವನ್ನಿಟ್ಟನು. ರಾಮನ ಅನೇಕ ತೀರ್ಮಾನಗಳು ಕೆಲವು ವ್ಯಕ್ತಿಗಳಿಗೆ ಅನ್ಯಾಯವೆಂದೆನಿಸಿದರೂ ಸಮಷ್ಟಿ ಕಲ್ಯಾಣದ ಅರಿವು ರಾಮನಿಗೆ ಸದಾಕಾಲವೂ ಇತ್ತು. ೧೧೦. ರಾವಣ ಇವನು ಪುಲಸ್ಯನ ಮಗನಾದ ವಿಶ್ರವಾ ಮತ್ತು ಸುಮಾಲಿ ರಾಕ್ಷಸನ ಮಗಳಾದ ಕೈಕಸಿ ಇವರ ಪುತ್ರನಾಗಿ ಹುಟ್ಟಿದನು. ಈತನಿಗೆ 'ಮಲತಾಯಿಯ ಮಗನಾದ ಕುಬೇರನಂತೆ ಆಗು?” ಎಂದು ಕೈಕಸಿ ನುಡಿದಿದ್ದರಿಂದ ರಾವಣ ಗೋಕರ್ಣಕ್ಷೇತ್ರದಲ್ಲಿ ಹತ್ತು ಸಾವಿರ ವರ್ಷ ಉಗ್ರತಪಸ್ಸನ್ನಾಚರಿಸಿದನು. ಪ್ರತಿಸಲ ಒಂದು ಸಾವಿರ ವರ್ಷಗಳು ಪೂರ್ಣಗೊಂಡಾಗ ಇವನು ತನ್ನ ಒಂದು ಶಿರವನ್ನು ಅಗ್ನಿಯಲ್ಲಿ ಹವನ ಮಾಡುತ್ತಿದ್ದನು. ಈ ಪ್ರಕಾರ ಹತ್ತನೆಯ ಶಿರವನ್ನು ಅರ್ಪಿಸಲು ಸಿದ್ಧನಾದಾಗ ಬ್ರಹ್ಮದೇವನು ಪ್ರಸನ್ನನಾಗಿ 'ಮರ್ಯಾದಿತ ಸಂದರ್ಭದಲ್ಲಿ