ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೫೪ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ರಾವಣನು ಉಪಭೋಗಿಸಿದನು. ಪುಂಜಿಕಸ್ಥಲೆ ಮತ್ತು ರಂಭೆ ಈ ಅಪ್ಸರೆಯರನ್ನು ಬಲಾತ್ಕರಿಸಿದ್ದಕ್ಕಾಗಿ ಬ್ರಹ್ಮದೇವ ಹಾಗೂ ನಲಕೂಬರರು ರಾವಣನಿಗೆ ಶಾಪಕೊಟ್ಟರು. ವೇದವತಿಯೊಡನೆ ದುರ್ವತ್ರನೆ ಮಾಡಿದಾಗ, ಅವಳು ಈತನಿಂದ ಭ್ರಷ್ಟಳಾಗುವ ಬದಲು ಆತ್ಮದಹನವೇ ಲೇಸೆಂದು ಆ ರೀತಿ ಮಾಡಿದಳು. ಆಗ ವೇದವತಿ “ನಿನ್ನನ್ನು ವಧಿಸಲು ಪುನಃ ಸೀಜನ್ಮ ತಾಳುವೆ” ಎಂಬ ಪ್ರತಿಜ್ಞೆಯನ್ನು ಮಾಡಿದ್ದಳು. ಈ ವೇದವತಿಯೇ ನಂತರ ಸೀತೆಯಾಗಿದ್ದಳೆಂದು ನಂಬುತ್ತಾರೆ. ಸೀತಾಸ್ವಯಂವರದ ಸಮಯದಲ್ಲಿ ರಾವಣನು ಅಲ್ಲಿಗೆ ಹೋಗಿದ್ದನು; ಆದರೆ ಶಿವಧನುಸ್ಸನ್ನು ಎತ್ತುವದು ಅವನಿಂದಾಗಲಿಲ್ಲ. ರಾಮಲಕ್ಷ್ಮಣರ ಸಾಮರ್ಥ್ಯದ ಕಲ್ಪನೆಯನ್ನು ಮಾರೀಚನು ರಾವಣನಿಗೆ ಅರುಹಿದ್ದನು. ಆಗಲೂ ರಾವಣನು ಸೀತಾಪಹರಣದ ಕಾರ್ಯದಲ್ಲಿ ನೆರವಾಗಬೇಕೆಂದು ಮಾರೀಚನನ್ನು ಒತ್ತಾಯಪಡಿಸಿದನು. ಸಹಾಯ ಮಾಡದಿದ್ದಲ್ಲಿ ಕೊಂದುಹಾಕುವ ಬೆದರಿಕೆಯನ್ನು ಮಾರೀಚನಿಗೆ ಹಾಕಿದ್ದನು. ವಿಭೀಷಣನು ಸೀತಾಪಹರಣದ ಬಗ್ಗೆ ರಾವಣನನ್ನು ತುಂಬಾ ನಿಂದಿಸಿದನು; ಆದರೆ, ರಾವಣನು ಯಾವುದನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ. ಸೀತೆಯನ್ನು ಅನುನಯಿಸಿ ರಾವಣನು ವಿಫಲನಾದಾಗ ಆತನು ಆಕೆಯನ್ನು ಕೊಂದುಹಾಕಬಹುದಿತ್ತು. ಆದರೆ, ಎಲ್ಲರೂ ಅತನನ್ನು ಈ ವಿಚಾರದಿಂದ ಪರಾವೃತಗೊಳಿಸಿದರು. ರಾಮನು ವಧೆಯಾದನೆಂದು ಒಂದು ಮಾಯಾವೀ ದೃಶ್ಯವನ್ನು ಸೀತೆಗೆ ತೋರಿಸಿದನು. ಅದರಿಂದಲೂ ಅವಳು ವಶಳಾಗಲಿಲ್ಲ ವಾದ್ದರಿಂದ ರಾವಣನಿಗೆ ಬಹಳ ವಿಫಲತೆ ಎನಿಸಿತು. ಅನರಣ್ಯ, ಮಾಂಧಾತ- ಈ ರಾಜನನ್ನು ಸೋಲಿಸಿ ಇವನು ತನ್ನ ಸಾಮರ್ಥ್ಯವನ್ನು ಸ್ಥಾಪಿಸಿದನು. ಹನುಮಾನನ ಬಾಲಕ್ಕೆ ಬೆಂಕಿಹಚ್ಚಿ ಸ್ವಹಸ್ತದಿಂದ ಲಂಕೆಯನ್ನು ಸುಟ್ಟುಕೊಂಡಂತೆ ಮಾಡಿಕೊಂಡನು. ಮಾನವರನ್ನು ತರಗೆಲೆಗಳೆಂದು ತಿಳಿಯುತ್ತಿದ್ದ ರಾವಣನು ಯುದ್ಧದಲ್ಲಿ ರಾಮನನ್ನು ಸಹಜವಾಗಿ ಜಯಿಸ ಬಹುದೆಂಬ ಗರ್ವವನ್ನು ಹೊಂದಿದ್ದನು. ಆದರೆ, ಇವನ ಸೈನ್ಯದಲ್ಲಿಯ ಅತಿಕಾಯ, ಕುಂಭಕರ್ಣ ಈ ಮೊದಲಾದ ವಿರಾಗ್ರಣಿಗಳ ವಧೆಯಿಂದ ರಾವಣನ ಧೈರ್ಯ ಕುಗ್ಗಿತು. ಇಂದ್ರಜಿತನ ವಧೆಯಿಂದ ರಾವಣನ ಜಂಘಾಬಲವೇ ಉಡುಗಿತು. ಕೆಲವೊಮ್ಮೆ ಯುದ್ಧದಲ್ಲಿ ಗೆಲವು ಗೋಚರವಾದರೂ ಇನ್ನು ಪರಾಭವವು ನಿಶ್ಚಿತ ವೆಂಬ ಅರಿವು ರಾವಣನಿಗೆ ಉಂಟಾಗತೊಡಗಿತು. 'ಮರಣದ ನಂತರ ಶತ್ರುತ್ವ ವಿರದು' ಎಂಬ ನುಡಿಯಂತೆ ರಾಮನು ರಾವಣನ ಅಂತ್ಯಸಂಸ್ಕಾರಗಳೆಲ್ಲವನ್ನೂ ವಿಧಿಯುಕ್ತವಾಗಿ ಮಾಡಿಸಿದನು. ಬ್ರಹ್ಮದೇವ ಹಾಗೂ ಶಂಕರ ಇವರಿಂದ