ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ೪೫೭ ಶಾಪಕೊಟ್ಟಳು. ಆಗ ಕುಬೇರನ ಒಂದು ಕಣ್ಣು ಸುಟ್ಟು ಬೂದಿಯಾಯಿತು. ಇನ್ನೊಂದು ಕಣ್ಣು ಕೆಂಜುಬಣ್ಣದ್ದಾಯಿತು. ಆಗ ಕುಬೇರನು ಮಹಾದೇವನನ್ನು ಪ್ರಸನ್ನಗೊಳಿಸಿ ಆತನ ಮಿತ್ರತ್ವವನ್ನು ಪಡೆದನು. ಒಮ್ಮೆ ಶಿವನು ಪಾರ್ವತಿಯೊಡನೆ ಪರ್ವತದಲ್ಲಿ ಕ್ರೀಡಿಸುತ್ತಿದ್ದಾಗ ರಾವಣನು ಅಲ್ಲಿಗೆ ಆಗಮಿಸಿದನು. ನಂದೀಶ್ವರನು ರಾವಣನ ಪ್ರವೇಶವನ್ನು ತಡೆದನು. ಆಗ ಕೋಪಗೊಂಡ ರಾವಣನು ಆ ಪರ್ವತವನ್ನೇ ಕಿತ್ತು ಎಸೆಯಲು ಉದ್ಯುಕ್ತನಾದನು. ಆಗ ಶಿವನು ತನ್ನ ಪಾದದ ಹೆಬ್ಬೆರಳಿನಿಂದ ಪರ್ವತವನ್ನು ಅದುಮಿ ರಾವಣನ ಕೈಗಳನ್ನು ಪರ್ವತದಡಿಯಲ್ಲಿ ಸಿಲುಕುವಂತೆ ಮಾಡಿದನು. ಆಗ ರಾವಣನ ಉದ್ದಿಷ್ಟವು ವಿಫಲವಾಯಿತು. ರಾವಣನು ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡನು. ಆಗ ಶಿವನು ಈತನಿಗೆ ಚಂದ್ರಹಾಸವೆಂಬ ಖಡ್ಗವನ್ನು ಕೊಟ್ಟನು; ಅಲ್ಲದೇ ಕೆಲವು ನಿರ್ಬಂಧಗಳನ್ನು ಹಾಕಿ ಮಿಕ್ಕ ಆಯುಷ್ಯವನ್ನು ಭೋಗಿಸಲು ವರವನ್ನಿತ್ತನು. ಇಲನೆಂಬ ರಾಜನಿಗೆ ಸ್ತ್ರೀತ್ವವು ಉಂಟಾಗಿತ್ತು. ಆಗ ಕರ್ದಮನು ಶಿವನಿಗೆ ಪ್ರಿಯವಾಗಿರುವ ಅಶ್ವಮೇಧ ಯಜ್ಞವನ್ನು ಮಾಡಿ ಸಂತೋಷಗೊಳಿಸಿದನು. ಆಗ ಇಲನಿಗೆ ಪುನಃ ಪುರುಷತ್ವವು ದೊರಕಿತು. ೧೧೨. ಲಕ್ಷ್ಮಣ ಲಕ್ಷಣನು ದಶರಥ ಮತ್ತು ಸುಮಿತ್ರಾ ಇವರ ಹಿರಿಯ ಮಗನು ಮತ್ತು ಶತ್ರುಘ್ನನ ಸಹೋದರನಾಗಿದ್ದನು. ರಾಮನಲ್ಲಿ ಈತನಿಗೆ ವಿಶೇಷ ಭಕ್ತಿ. ಆದರ ಪ್ರೇಮಗಳಿದ್ದವು. ಸ್ವತಃದ ಸುಖದುಃಖಗಳ ಪರಿವೆಯಿಲ್ಲದೇ ಈತನು ಸಂಪೂರ್ಣ ಆಯುಸ್ಸನ್ನು ರಾಮನ ಏಕನಿಷ್ಠ ಸೇವೆಯಲ್ಲಿ ಕಳೆದನು. ಲಕ್ಷ್ಮಣನು ರಾಮನೊಡನೆ ವನವಾಸವನ್ನು ಸ್ವ-ಇಚ್ಛೆಯಿಂದ ಅಂಗೀಕರಿಸಿದನು. ಈತನ ಪತ್ನಿ ಊರ್ಮಿಳೆ. ಲಕ್ಷಣನು ಶಸ್ತ್ರಾಸ್ತನಿಪುಣನಿದ್ದನು. ರಾಮ-ರಾವಣರ ಯುದ್ಧದಲ್ಲಿ ಈತನ ಶೌರ್ಯವು ಪ್ರಕಟವಾಯಿತು. ತನ್ನ ಯಜ್ಞರಕ್ಷಣೆಗೆಂದು ವಿಶ್ವಾಮಿತ್ರನು ರಾಮನೊಡನೆ ಲಕ್ಷಣನನ್ನೂ ಕರೆದೊಯ್ದಿದ್ದನು. ತಾಟಕಿ, ಶೂರ್ಪನಖಿ ಮತ್ತು ಅಯೋಮುಖಿ ಇವರ ಕಿವಿಮೂಗುಗಳನ್ನು ಕತ್ತರಿಸಿ ಅವರಿಗೆ ಅತಿಭಯವನ್ನುಂಟುಮಾಡಿದನು. ಅದೇ ರೀತಿ ಅತಿಕಾಯ, ವಿರೂಪಾಕ್ಷ ಮೊದಲಾದ ರಾಕ್ಷಸರನ್ನು ಯಮಸದನಕ್ಕೆ ಅಟ್ಟಿದನು. ಮೇಘನಾದನು ನಿಕುಂಭಿಲೆಯಲ್ಲಿ ಹೋಮವನ್ನು ಪೂರೈಸಿ ಹೊರಬರುವ ಮೊದಲೇ, ವಿಭೀಷಣನ ಹೇಳಿಕೆಯಂತೆ, ಲಕ್ಷ್ಮಣನು ಆತನನ್ನು ವಧಿಸಿದನು. ಆನಂದರಾಮಾಯಣದಂತೆ ಅಯೋಧ್ಯೆಯನ್ನು ಬಿಟ್ಟ ಸಮಯದಿಂದ