ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬೦ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಇನ್ನೊಬ್ಬನೊಡನೆ ನಡೆಯಿತು. ಆಗ ವರುಣನು ಇವಳನ್ನು ಓಡಿಸಿತಂದನು. ದೇವತೆಗಳು ಈತನಿಗೆ ಜಲಾಧಿಪತಿಯೆಂದು ಅಭಿಷೇಕ ಮಾಡಿದನು. ರಾವಣನು ಬಂಧನದಿಂದ ಮುಕ್ತಳಾಗಿ ಬಂದ ಸೀತೆ ನಿರ್ದೋಷಿಯಾಗಿದ್ದ ಬಗ್ಗೆ ವರುಣನು ರಾಮನಿಗೆ ಮನವರಿಕೆ ಮಾಡಿಕೊಟ್ಟನು. ರುದ್ರನ ಯಜ್ಞದಿಂದ ನಿರ್ಮಾಣಗೊಂಡ ಅಂಗೀರಸನನ್ನು ಈತನು ಪುತ್ರನೆಂದು ಸ್ವೀಕರಿಸಿದನು. ಮಾನಸೋತ್ತರ ಪರ್ವತದ ಹಿಂಭಾಗದಲ್ಲಿದ್ದ ನಿವೇಚನಿ ನಗರವು ಈತನದಾಗಿತ್ತು. ಈತನು ಓರ್ವ ಆದಿತ್ಯ ದೇವತೆ. ಶಾಪ ಕ್ರಮಸಂಖ್ಯೆ ೫೨ ಮಿತ್ರ < ಉರ್ವಶಿ ಪರಿಶೀಲಿಸಿರಿ. ೧೧೫. ವಸಿಷ್ಠ ಪ್ರಾಚೀನ ಗ್ರಂಥಗಳಲ್ಲಿ 'ವಸಿಷ್ಠ' ಹೆಸರಿನಲ್ಲಿ ಕಂಡುಬರುವ ಎಲ್ಲ ಉಲ್ಲೇಖಗಳು ಒಂದೇ ವ್ಯಕ್ತಿಯ ಬಗ್ಗೆ ಇರಲಿಕ್ಕಿಲ್ಲ. ವಸಿಷ್ಠ ಹೆಸರಿನ ಅನೇಕರಿರಲು ಸಾಧ್ಯ ವಸಿಷ್ಠನು ಋಗೈದದ ಏಳನೆಯ ಮಂಡಲದ ದ್ರಷ್ಟಾರನಿದ್ದು ಇವನು ಸೂಕ್ತವನ್ನು ರಚಿಸಿದನೆಂಬ ಉಲ್ಲೇಖ ಮಂತ್ರದಲ್ಲಿ ನಿರ್ದೇಶಿತವಾಗಿದೆ. ಉರ್ವಶಿಯ ಕಾರಣದಿಂದ ಮಿತ್ರ-ವರುಣರ ವೀರ್ಯವು ಕುಂಭ ಅಥವಾ ಕಮಲದಲ್ಲಿ ಬಿದ್ದುದರಿಂದ ಈತನು ಜನ್ಮತಾಳಿದನು. ವಸಿಷ್ಠ ವಿಶ್ವಾಮಿತ್ರರಲ್ಲಿಯ ವಾದವು ಋಗೈದದಲ್ಲಿಯೂ ಕಂಡುಬರುತ್ತದೆ. ಈತನು ಸುದಾಸನ ಪುರೋಹಿತನಾಗಿದ್ದನು. ಆದ್ದರಿಂದಲೇ ಇವರಿಬ್ಬರಲ್ಲಿ ವೈಮನಸ್ಯವು ಉಂಟಾಯಿತು. ಸ್ವಾಯಂಭುವ ಮನ್ವಂತರದಲ್ಲಿಂಯ ಬ್ರಹ್ಮದೇವನ ಹತ್ತು ಮಾನಸಪುತ್ರರಲ್ಲಿ ವಸಿಷ್ಠನು ಒಬ್ಬನಾಗಿದ್ದಾನೆ. ಕರ್ದಮಪಜಾಪತಿಯ ಮಗಳಾದ ಅರುಂಧತಿಯು ಓರ್ವ ಭಾರ್ಯೆಯಾಗಿದ್ದಾಳೆ. ಇನ್ನೋರ್ವ ಭಾರ್ಯೆಯೆಂದರೆ ದಕ್ಷಕನ್ಯಯಾದ ಉರ್ಚಾ. ಈತನ ಉತ್ಪತ್ತಿ ಬ್ರಹ್ಮದೇವನ ಪ್ರಾಣವಾಯುವಿನಿಂದ ಆಯಿತು. ವಸಿಷನು ವಿಶ್ವಾಮಿತ್ರನನ್ನು ತನ್ನ ಆಶ್ರಮದಲ್ಲಿ ಕಾಮಧೇನುವಿನ ಬಲದಿಂದ ಬಹಳ ಉತ್ತಮವಾಗಿ ಉಪಚರಿಸಿದನು. ಆಗ ವಿಶ್ವಮಿತ್ತನು ಆ ಕಾಮಧೇನುವನ್ನು ಕೊಡು' ಎಂದು ವಸಿಷ್ಠನನ್ನು ಬೇಡಿದನು. ವಸಿಷ್ಠನು ಒಪ್ಪಲಿಲ್ಲವಾದ್ದರಿಂದ ವಿಶ್ವಾಮಿತ್ರನು ಆ ಕಾಮಧೇನುವನ್ನು ಬಲಾತ್ಕಾರದಿಂದ ಎಳೆದೊಯ್ಯಲು ಯತ್ನಿಸಿದನು. ಆಗ ಕಾಮಧೇನುವಿನ ದೇಹದಿಂದ ಶಕ, ಪಲ್ಲವಾದಿ ಪ್ಲೇಚ್ಛರು ಉದ್ಭವಿಸಿದರು. ಅವರು ವಿಶ್ವಾಮಿತ್ರರನ್ನು ಸೋಲಿಸಿದರು. ಬ್ರಹ್ಮತೇಜವು ಕ್ಷಾತ್ರತೇಜಕ್ಕಿಂತ ಶ್ರೇಷ್ಠವೆಂಬುದು ಖಚಿತವಾಯಿತು. ವಿಶ್ವಾಮಿತ್ರನು ಆ ಬ್ರಹ್ಮತೇಜವನ್ನು ಪಡೆಯಲು ಪ್ರಯತ್ನಪಟ್ಟನು. ಅಷ್ಟೇ ಅಲ್ಲದೆ,