ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ

೪೬೩


ಕನ್ಯೆಯಾದ 'ತಾರಾ' ಎಂಬಾಕೆಯು ವಾಲಿಯ ಪತ್ನಿಯಾದಳು. ದುಂದುಭಿಯ
ಪುತ್ರನಾಗಿದ್ದ ಮಾಯಾವಿ ಮತ್ತು ವಾಲಿ ಇವರಲ್ಲಿ ಓರ್ವ ಸ್ತ್ರೀಯ ಕಾರಣದಿಂದ
ವೈರತ್ವವುಂಟಾಯಿತು. ಆಗ ವಾಲಿಯು ಮಾಯಾವಿಯನ್ನು ಕೊಂದನು. ಈ
ರಾಕ್ಷಸನನ್ನು ಕೊಲ್ಲಲು ವಾಲಿ ಒಂದು ಗುಹೆಯಲ್ಲಿ ನುಗ್ಗಿದನು. ಆಗ ಗುಹೆಯ
ದ್ವಾರರಕ್ಷಣೆಯನ್ನು ಸುಗ್ರೀವನು ಮಾಡುತ್ತಿದ್ದನು. ವಾಲಿಯು ಬಹಳ ದಿನಗಳಾದರೂ
ಗುಹೆಯ ಹೊರಗೆ ಮರಳಲಿಲ್ಲ. ಅದೇ ಕಾಲಕ್ಕೆ ಗುಹೆಯಿಂದ ರಕ್ತದ ಪ್ರವಾಹ
ಬರಲಾರಂಭಿಸಿತು. ಇದನ್ನು ಕಂಡು ವಾಲಿಯ ವಧೆಯು ರಾಕ್ಷಸನಿಂದಾಗಿರ
ಬಹುದು ಎಂದು ಭಾವಿಸಿ ಸುಗ್ರೀವನು ಒಂದು ದೊಡ್ಡ ಕಲ್ಲುಬಂಡೆಯನ್ನು ಗುಹೆಯ
ದ್ವಾರಕ್ಕಿಟ್ಟು ಮುಚ್ಚಿಬಿಟ್ಟನು. ನಂತರ ವಾಲಿಯ ಉತ್ತರಕ್ರಿಯೆಗಳನ್ನು ಮುಗಿಸಿ
ಸುಗ್ರೀವನು ಕಿಷ್ಕಿಂಧೆಗೆ ಬಂದನು. ಮಂತ್ರಿಗಳ ಆಗ್ರಹದ ಮೇರೆಗೆ, ಸ್ವಂತದ
ಇಚ್ಛೆಯ ವಿರುದ್ದ ಸುಗ್ರೀವನು ರಾಜ್ಯಾಭಿಷೇಕವನ್ನು ಮಾಡಿಸಿಕೊಂಡನು. ಅನಂತರ
ಇತ್ತ ವಾಲಿಯು ಆ ರಾಕ್ಷಸನನ್ನು ಕೊಂದು ಮರಳಿ ಬಂದನು. ಸುಗ್ರೀವನು
ರಾಜನಾದದ್ದು ವಾಲಿಗೆ ಎಳ್ಳಷ್ಟೂ ಹಿಡಿಸದೆ ಅವನು ಕೋಪಗೊಂಡನು. ಸುಗ್ರೀವನು
ನಿಜಸಂಗತಿಯನ್ನು ತಿಳಿಸಿಹೇಳಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ವಾಲಿಯು ಸುಗ್ರೀವನ ಪತ್ನಿಯಾದ ರುಮೆಯನ್ನು ಅಪಹರಿಸಿ ಸುಗ್ರೀವನನ್ನು ರಾಜ್ಯದಾಚೆ ತಳ್ಳಿಬಿಟ್ಟನು. ಆಗ ವಾಲಿ ಭಯದಿಂದ ಸುಗ್ರೀವನು ಋಷ್ಯಮೂಕೆ ಪರ್ವತದ ಮೇಲೆ ಹೋಗಿ ಇದ್ದುಬಿಟ್ಟನು. ರಾಮ-ಸುಗ್ರೀವರಲ್ಲಿ ಮಿತ್ರತ್ವವು ಉಂಟಾದನಂತರ ವಾಲಿಯನ್ನು ವಧಿಸಲು ರಾಮನು ಸಿದ್ದನಾದನು. ಸುಗ್ರೀವನಿಗೆ ರಾಮನ ಬೆಂಬಲವಿದ್ದುದರಿಂದ ಆತನೊಡನೆ ಯುದ್ಧ ಮಾಡಬಾರದೆಂದು ತಾರಾ ಗಂಡನಾದ ವಾಲಿಗೆ ಕಳಕಳಿಯಿಂದ ಹೇಳಿದಳು. ವಾಲಿ ಅದಕ್ಕೆ ಕಿವಿಗೊಡಲಿಲ್ಲ. ರಾಮನು ವಾಲಿಯ ವಕ್ಷಃಸ್ಥಲಕ್ಕೆ ಶರಾಘಾತಮಾಡಿ ಆತನನ್ನು ಭೂಮಿಗೆ ಉರುಳಿಸಿದನು. ತನ್ನನ್ನು ಅಧರ್ಮದಿಂದ ರಾಮನು ವಧಿಸಿದನೆಂದು ವಾಲಿಯು ರಾಮನನ್ನು ನಿಂದಿಸಿದನು. ಆಗ ರಾಮನು ತನ್ನ ವರ್ತನೆಯು ಧರ್ಮಾನುಸಾರವೇ ಇತ್ತೆಂಬುದನ್ನು ತಿಳಿಸಿಹೇಳಿದನು. ಸುಗ್ರೀವನು ಅಂಗದನನ್ನು ತನ್ನ ಸ್ವಂತ ಮಗನಂತೆ ನೋಡಿಕೊಂಡು ವಾಲಿಯ ಅಂತಿಮ ಇಚ್ಛೆಯನ್ನು ಪೂರ್ತಿಗೊಳಿಸಿದನು. ೧೧೯. ವಾಲ್ಮೀಕಿ * ಈತನು ಸಂಸ್ಕೃತಭಾಷೆಯ ಆದಿಕವಿ. ಈತನ ಚರಿತ್ರೆ ನಿಜಾರ್ಥದಲ್ಲಿ ಉಪಲಬ್ದವಿಲ್ಲ. ಪ್ರಾಚೀನ ಸಾಹಿತ್ಯದಲ್ಲಿ ಭಾರ್ಗವವಾಲ್ಮೀಕಿ, ದಸ್ಯುವಾಲ್ಮೀಕಿ ಮತ್ತು