ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬೪ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಕವಿವಾಲ್ಮೀಕಿ ಈ ರೀತಿ ಮೂರು ವಾಲ್ಮೀಕಿಯರ ಉಲ್ಲೇಖ ಬರುತ್ತದೆ. ಇವರ ಕಥೆಗಳೂ ಭಿನ್ನಭಿನ್ನ. ಈತನು ಒಬ್ಬ ಬ್ರಹ್ಮರ್ಷಿ. ಸುಮತಿ ಎಂಬ ಬ್ರಾಹ್ಮಣನ ಮಗನಾಗಿದ್ದನು. ಇವನು ಚಿಕ್ಕವನಾಗಿದ್ದಾಗಲೇ ಈತನ ತಾಯಿತಂದೆ ಈತನನ್ನು ಒಬ್ಬ ಬೇಡನ ಬಳಿ ಬಿಟ್ಟು ತಾವು ತಪಸ್ಸಿಗೆಂದು ಹೊರಟುಹೋದರು. ಮುಂದೆ ಈ ಮಗುವು ತನ್ನ ಬ್ರಾಹ್ಮಣತ್ವವನ್ನು ಮರೆತುಬಿಟ್ಟಿತು. ದೊಡ್ಡವನಾದನಂತರ ಇವನು ಕಳ್ಳತನ ಮಾಡಲಾರಂಭಿಸಿದನು. ಜನರು ಇವನನ್ನು ಬೆಸ್ತರವನೆಂದು ತಿಳಿದರು. ಒಮ್ಮೆ ಕೆಲವು ಬ್ರಹ್ಮರ್ಷಿಗಳು ಇವನ ವಾಸಸ್ಥಾನದ ಬಳಿಯಿಂದ ಹೋಗುತ್ತಿದ್ದಾಗ ಇವನು ಅವರ ಲೂಟಿಯನ್ನಾರಂಭಿಸಿದನು. ಆಗ ಆ ಋಷಿಗಳು ಇವನಿಗೆ ಉಪದೇಶವನ್ನು ಮಾಡಿದರು. ಅಂದಿನಿಂದ ವಾಲ್ಮೀಕಿಗೆ ಜ್ಞಾನೋದಯವಾಯಿತು. ಆ ಋಷಿಗಳು ಹೇಳಿಕೊಟ್ಟ ಮಂತ್ರವನ್ನು ಜಪಿಸಹತ್ತಿದನು. ಬಹುಕಾಲದವರೆಗೆ ಒಂದೇ ಸ್ಥಳದಲ್ಲಿ ಕುಳಿತು ತಪಸ್ಸನ್ನು ಕೈಗೊಂಡ ಈತನ ಸುತ್ತಲೂ ಹುತ್ತವು ಬೆಳೆಯಿತು. ನಂತರ ಆ ಋಷಿಗಳು ಇವನ ದೇಹದ ಮೇಲೆ ಬೆಳೆದ ಹುತ್ತನ್ನು ತೆಗೆದರು. 'ವಾಲ್ಮೀಕಿ' ಎಂದು ಹೆಸರಿಟ್ಟರು ಎಂಬ ಕಥೆ ಸ್ಕಂದಪುರಾಣದಲ್ಲಿದೆ.

  • ಇನ್ನೊಂದು ಕಥೆ ಕೂಡ ಇದೇ ಸ್ಕಂದಪುರಾಣದಲ್ಲಿದೆ. ಪೂರ್ವಕಾಲದಲ್ಲಿ

ಕಣಣು ಎಂಬ ಬ್ರಾಹ್ಮಣನಿದ್ದನು. ಆತನು ಬಹುಸಮಯದವರೆಗೆ ತಪಸ್ಸನ್ನಾಚರಿಸಿದನು. ತಪಸ್ಸು ಮುಗಿದನಂತರ ಅವನಿಗೆ ಆತನ ಹೆಂಡತಿಯ ಸ್ತರಣೆಯಾಗಿ ವೀರ್ಯಸ್ಕಲನ ವಾಯಿತು. ಅದನ್ನು ಓರ್ವ ವನಚರಿಯು ನುಂಗಿದಳು. ಆಗ ಆಕೆಗೆ ಒಬ್ಬ ಮಗನು ಹುಟ್ಟಿದನು. ಆ ಮಗನಿಗೆ ಮಹರ್ಷಿಗಳಿಂದ ಪ್ರಸಾದ ದೊರೆಯಿತು. ಆತನಿಗೆ ಬ್ರಾಹ್ಮಣತ್ವ ದೊರೆಯಿತು. ಆತನು ಮುಂದೆ ವಾಲ್ಮೀಕಿ ಎಂದು ಖ್ಯಾತಿಗೊಂಡನು. ತಮಸಾ ನದಿಯ ತೀರದಲ್ಲಿ ಆಶ್ರಮವನ್ನು ಸ್ಥಾಪಿಸಿ ಅಧ್ಯಾಪನವನ್ನು ಪ್ರಾರಂಭಿಸಿದನು. ಅವನ ಶಿಷ್ಯಪರಿವಾರವು ದೊಡ್ಡದಾಗಿತ್ತು. ಅವರಲ್ಲಿ ಭರದ್ವಾಜನು ಪ್ರಮುಖ ಶಿಷ್ಯನಾಗಿದ್ದನು. ರಾಮನು ಸೀತೆಯ ತ್ಯಾಗ ಮಾಡಿದನಂತರ, ವಾಲ್ಮೀಕಿಯೇ ಸೀತೆಯನ್ನು ತನ್ನ ಆಶ್ರಮದಲ್ಲಿಟ್ಟುಕೊಂಡು ರಕ್ಷಿಸಿದನು. ಸೀತೆ ಆಗ ತುಂಬಿದ ಗರ್ಭಿಣಿಯಾಗಿದ್ದಳು. ಯಥಾಕಾಲದಲ್ಲಿ ಸೀತೆಯು ಲವ-ಕುಶ ಎಂಬ ಅವಳಿ ಮಕ್ಕಳನ್ನು ಹೆತ್ತಳು. ಆ ಮಕ್ಕಳ ಆರೈಕೆಯನ್ನು ಮಾಡಿ ಅವರನ್ನು ಬೆಳೆಸಿ, ಅವರ ವಿದ್ಯಾಭ್ಯಾಸವನ್ನು ಪೂರೈಸಿದವನು ವಾಲ್ಮೀಕಿಯೇ. ಈ ಬಾಲಕರಿಂದ ವಾಲ್ಮೀಕಿರಚಿತ ರಾಮಾಯಣವನ್ನು ಇಂಪಾಗಿ ಹಾಡಿಸಿದನು. ವಾಲ್ಮೀಕಿ ಒಬ್ಬ ಋಷಿಯೊಡನೆ ಪಾಖಂಡವಾದ ಮಾಡಿದ್ದಕ್ಕಾಗಿ ಬ್ರಹ್ಮಹತ್ಯೆಯ