ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ದೋಷವು ಅವನಿಗೆ ತಗುಲಿತು. ಅನಂತರ ಮಹಾದೇವನ ಉಪಾಸನೆಯಿಂದ ಅದರ ಪರಿಹಾರವಾಯಿತು. ವಾಲ್ಮೀಕಿ ಋಷಿಯು ಶೂದ್ರನಾಗಿದ್ದು ಋಷಿಗಳ ಪ್ರಸಾದದಿಂದ ಅವನಿಗೆ ಬ್ರಾಹ್ಮಣತ್ವ ದೊರಕಿತು. ಆತನ ಮೊದಲನೆಯ ಹೆಸರು 'ವಾಲ್ಯಾಬೆಸ್ತ'ನೆಂದು ಇತ್ತು. ಈ ರೀತಿಯ ಪ್ರಚಲಿತ ದಂತಕಥೆಗೆ ಆಧಾರವಿಲ್ಲ. ವಾಲ್ಮೀಕಿ ರಾಮಾಯಣದಲ್ಲಿ ಬಂದ ಎಲ್ಲೆಡೆಯಲ್ಲಿಯ ಉಲ್ಲೇಖಗಳಲ್ಲಿ ಈತನು ವಿದ್ವಾನ್ ಬ್ರಾಹ್ಮಣನಿದ್ದನೆಂದು ನಮೂದಿಸಲಾಗಿದೆ. 'ಪ್ರಾಚೇತಸೋsಹಂ ದಶಮಃ ಪುತ್ರೋ ರಾಘನಂದನ' (ಉತ್ತರಕಾಂಡ೯೬-೧೭) ಈ ಶ್ಲೋಕದಲ್ಲಿ ವಾಲ್ಮೀಕಿಯೂ ತಾನಾಗಿ ಸ್ವಂತದ ಜನ್ಮದ ಕಥೆಯನ್ನು ಹೇಳಿದ್ದಾನೆ. ಬ್ರಹ್ಮದೇವನ ವರದಿಂದ ಇವನಿಗೆ, ರಾಮನು ಹುಟ್ಟುವ ಮೊದಲೇ, ಆತನ ಚರಿತ್ರೆಯನ್ನು ಬರೆಯುವದು ಸಾಧ್ಯವಾಯಿತೆಂಬ ನಂಬಿಕೆ ನಿರಾಧಾರವಾಗಿದೆ. ವಾಲ್ಮೀಕಿಯು ರಾಮನ ಸಮಕಾಲೀನ ಇಲ್ಲವೇ ಅನಂತರದ ಕಾಲವನಿರಬಹುದು. 'ಹೇ ಮಹರ್ಷಿಯೇ, ವರ್ತಮಾನ ಸ್ಥಿತಿಯಲ್ಲಿ ಈ ಭೂಲೋಕದಲ್ಲಿ ಬಹುಗುಣ ಸಂಪನ್ನನಾದವನು ಯಾರು? ಶೂರವೀರನು, ಧರ್ಮರಹಸ್ಯವನ್ನು ಅರಿತವನು, ಕೃತಜ್ಞನು, ಸತ್ಯವಚನಿಯೂ, ಸ್ವೀಕರಿಸಿದ ವ್ರತವನ್ನು ಆಪತ್ಕಾಲದಲ್ಲಿಯೂ ಬಿಡದೇ ಧರ್ಮಕ್ಕಾಗಿ ಮುಂದುವರಿಸುವವನು, ಸದಾಚಾರಸಂಪನ್ನನು, ಪ್ರಾಣಿಮಾತ್ರರ ಹಿತಕ್ಕಾಗಿ ತತ್ಪರನಾಗಿರುವವನು, ತತ್ವವೇತ್ತನು, ಸಮರ್ಥನು, ದರ್ಶನಾನಂದವನ್ನು ಬೀರುವವನು, ಮನೋನಿಗ್ರಹಿ, ಕ್ರೋಧಾದಿಗಳನ್ನು ಸಂಯಮಿಸುವವನು, ತೇಜಃಪುಂಜನು, ಪರರ ಉತ್ಕರ್ಷದ ಬಗ್ಗೆ ಮತ್ಸರಭಾವವನ್ನು ತಾಳದವನು, ಯುದ್ಧಕಾಲದಲ್ಲಿ ಕ್ರೋಧಗೊಂಡಾಗ ದೇವತೆಗಳಿಗೂ ಭಯಂಕರ ನೆನಿಸುವ ಯಾವ ಪುರುಷನು ಈ ಭೂಲೋಕದಲ್ಲಿದ್ದಾನೆ?” ಎಂದು ವಾಲ್ಮೀಕಿಯು ನಾರದಋಷಿಯನ್ನು ಕೇಳಿದಾಗ ಅವನು ಸಂಕ್ಷಿಪ್ತದಲ್ಲಿ ಶ್ರೀರಾಮನ ಕಥೆಯನ್ನು ನಿರೂಪಿಸಿದನು. 'ನಾರದನಿಂದ ಕೇಳಿಕೊಂಡಂತೆ ನೀನು ಆ ಬುದ್ದಿಪ್ರೇರಕ ರಾಮನ ವೃತ್ತಾಂತವನ್ನು ಬರೆ” ಎಂದು ಬ್ರಹ್ಮದೇವನು ವಾಲ್ಮೀಕಿಗೆ ವಿಜ್ಞಾಪಿಸಿದನೆಂಬ ಸ್ಪಷ್ಟ ಉಲ್ಲೇಖ ವಾಲ್ಮೀಕಿರಾಮಾಯಣದಲ್ಲಿದೆ. ಕ್ರಿ.ಶ. ಪೂರ್ವ ಮೊದಲನೆಯ ಶತಕದಲ್ಲಿಯೂ, ವಾಲ್ಮೀಕಿಯು ದಶರಥ ರಾಮನ ಘಟನೆಗಳಿಗೆ ಸಮಕಾಲೀನನಿದ್ದನೆಂದು ತಿಳಿಯುತ್ತಿದ್ದರು. ಉತ್ತರ ಕಾಂಡವನ್ನು ರಚಿಸುವಾಗ ಅಯೋಧ್ಯೆಯ ರಾಜವಂಶದವರೊಡನೆ ಘನಿಷ್ಠ ಸಂಬಂಧವನ್ನು ವಾಲ್ಮೀಕಿಯು ಇಟ್ಟುಕೊಂಡಿದ್ದನು. ಈತನು ದಶರಥರಾಜನ