ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೬೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಮಿತ್ರನಾಗಿದ್ದನು. ರಾಮನ ಅಶ್ವಮೇಧ ಯಜ್ಞಪ್ರಸಂಗದಲ್ಲಿ ವಲ್ಮೀಕಿಯು ಸೀತೆಯ
ಶುದ್ಧಚಾರಿತ್ರ್ಯದ ಬಗ್ಗೆ ಘೋಷಿಸಿದನು. ವಿಷ್ಣುಪುರಾಣದಲ್ಲಿ ವಾಲ್ಮೀಕಿ
ಯನ್ನು ವಿಷ್ಣುವಿನ ಅವತಾರವೆಂದೂ, ಇಪ್ಪತ್ತಾರನೆಯ ವೇದವ್ಯಾಸನೆಂದೂ
ಪರಿಗಣಿಸಲಾಗಿದೆ.

೧೩೦. ವಿದ್ಯುತ್ಕೇಶ

ಈತನು ಹೇತಿ ಎಂಬ ರಾಕ್ಷಸನ ಹಾಗೂ ಕಾಲನ ಮಗಳಾದ ಭಯಾ
ಎಂಬವಳ ಪುತ್ರನಾಗಿದ್ದನು. ಸಾಲಕಟಂಕಟಾ ಎಂಬಾಕೆ ವಿದ್ಯುತ್ಕೇಶನ ಪತ್ನಿ.
ಇವರಿಗೆ ಸುಕೇಶನೆಂಬ ಮಗನಿದ್ದನು. ವಿದ್ಯುತ್ಕೇಶನಿಂದ ಸಾಲಕಟಂಕಟೆಯು
ಗರ್ಭವತಿ ಆದಾಗ ಆಕೆಯು ಆ ಗರ್ಭವನ್ನು ಮಂದರ ಪರ್ವತದ ಮೇಲೆ
ಚೆಲ್ಲಿದಳು. ಶಂಕರನು ಅದನ್ನು ರಕ್ಷಿಸಿ ಪೋಷಿಸಿದನು.

೧೨೧. ವಿರಾಧ

ವಿರಾಧನು ಜಯ ಮತ್ತು ಶತಹ್ರದಾ ಎಂಬ ದಂಪತಿಗಳ ಪುತ್ರ. ಈತನು
ಕ್ರೌಂಚಾವಟ ವನದಲ್ಲಿಯ ರಾಕ್ಷಸನಿದ್ದನು. ಬ್ರಹ್ಮದೇವನು ಕೊಟ್ಟ ವರದಿಂದ
ಅವನಿಗೆ ಅವಧ್ಯತ್ವ, ಅಚ್ಛೇದ್ಯತ್ವ ಮತ್ತು ಅಭೇದ್ಯತ್ವ ಪ್ರಾಪ್ತವಾಗಿದ್ದವು. ರಾಮ-
ಲಕ್ಷ್ಮಣರು ಈತನ ಕೈಕಾಲುಗಳನ್ನು ಬಿಗಿದು ಒಂದು ದೊಡ್ಡ ಗುಂಡಿಯಲ್ಲಿ
ಹೂತುಬಿಟ್ಟರು. ಪೂರ್ವಜನ್ಮದಲ್ಲಿ ತನಗೆ ದೊರೆತ ಶಾಪದ ಉಲ್ಲೇಖವನ್ನು
ವಿರಾಧನು ತನ್ನ ಪೂರ್ವವೃತ್ತಾಂತವನ್ನು ಹೇಳುವಾಗ ಮಾಡಿದ್ದಾನೆ. ಇವನು
ಪೂರ್ವ ಜನ್ಮದಲ್ಲಿ ತುಂಬರು ಆಗಿದ್ದನು.

೧೨೨. ವಿರೋಚನ

ಈತನು ಪ್ರಹ್ಲಾದನ ಮಗನಿದ್ದು ಈತನಿಗೆ ಬಲಿಯೆಂಬ ಮಗನಿದ್ದನು.
ಕೆಶಿನಿ ಎಂಬ ರಾಜಕನ್ಯೆಯ ವಿರೋಚನ ಮತ್ತು ಸುಧನ್ವಾ ಎಂಬ ಅಂಗೀರಸನ
ಪುತ್ರರಿಬ್ಬರಲ್ಲಿ ಶ್ರೇಷ್ಠನೆನಿಸಿದವನನ್ನು ಮದುವೆಯಾಗಬೇಕೆಂದು ನಿರ್ಧರಿಸಿದಳು.
ಶ್ರೇಷ್ಠತ್ವವನ್ನು ನಿಶ್ಚಯಿಸಲು ಅವರು ಪ್ರಹ್ಲಾದ ಹಾಗೂ ಕಶ್ಯಪನ ಬಳಿಗೆ ಹೋದರು.
ಸುಧನ್ವನು ಶ್ರೇಷ್ಠನೆಂದು ಕಶ್ಯಪನು ಸಾರಿದಾಗ ಕಶ್ಯಪನು ವಿರೋಚನನ ಪ್ರಾಣದ
ಸ್ವಾಮಿಯಾದನು. ಆದರೆ ಪ್ರಹ್ಲಾದನ ನಿಃಸ್ಪೃಹತೆಯಿಂದ ಆತನು ತನ್ನ ಸ್ವಾಮಿತ್ವವನ್ನು
ಬಿಟ್ಟುಕೊಟ್ಟನು. ವಿರೋಚನನು ಆತ್ಮಜ್ಞಾನವನ್ನು ಪಡೆಯಲೋಸುಗ ಸತ್ಯಲೋಕಕ್ಕೆ