ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೪೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೬೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಧರ್ಮಾತ್ಮನಾಗಿ ಹುಟ್ಟಿದನು. ಲಂಕಾಪಟ್ಟಣವನ್ನು ಕೊಡಲು ರಾವಣನು ಕುಬೇರನಿಗೆ
ಹೇಳಿದನು. ಆಗ ವಿಶ್ರವನು 'ಲಂಕೆಯನ್ನು ರಾವಣನಿಗೆ ಕೊಟ್ಟು ಕೈಲಾಸಪರ್ವತಕ್ಕೆ
ಹೋಗಿ ವಾಸಿಸು!' ಎಂದು ಕುಬೇರನಿಗೆ ಹೇಳಿದನು.

೧೨೫. ವಿಶ್ವಾಮಿತ್ರ

ಕುಶಿಕನು ತನಗೆ ಇಂದ್ರನಂತಹ ಪುತ್ರನು ಹುಟ್ಟಬೇಕೆಂದು ತಪಸ್ಸನ್ನು
ಮಾಡಿದನು. ಇನ್ನೊಬ್ಬನು ತನ್ನಂತೆ ಇರಲೇಬಾರದೆಂದು ಬಗೆದು ಇಂದ್ರನು
ತಾನೇ ಕುಶಿತನ ಮಗನಾಗುವದೆಂದು ನಿಶ್ಚಯಿಸಿದನು. ಕುಶಿಕನಿಗೆ 'ಗಾಧಿನ್
(ಗಾಧಿ) ಎಂಬ ಪುತ್ರನಾದನು. ಆ ಗಾಧಿನ್‌ನ ಮಗನೇ ವಿಶ್ವಾಮಿತ್ರನಾಗಿದ್ದಾನೆ.
ವಿಶ್ವಾಮಿತ್ರನು ಮುಂಗೋಪಿಯಾಗಿದ್ದರೂ ಹಿಡಿದ ಕಾರ್ಯವನ್ನು ಎಡಬಿಡದೇ
ಪೂರೈಸುವವನಾಗಿದ್ದನು. ಪ್ರತಿಸೃಷ್ಟಿಯನ್ನು ನಿರ್ಮಿಸುವ ತಪೋಬಲವು ಈತನಲ್ಲಿತ್ತು.
ವಸಿಷ್ಠನೊಡನೆ ಈತನ ವ್ಯಾಜ್ಯವಿತ್ತು. ವಿಶ್ವಾಮಿತ್ರನು ಒಂದು ಸಲ ವಸಿಷ್ಠನ
ಆಶ್ರಮಕ್ಕೆ ಹೋದಾಗ ವಸಿಷ್ಠನು ಕಾಮಧೇನುವಿನ ಸಹಾಯದಿಂದ ವಿಶ್ವಾಮಿತ್ರನನ್ನು
ಉತ್ತಮವಾಗಿ ಉಪಚರಿಸಿದನು. ವಸಿಷ್ಠನ ಬಳಿ ಕಾಮಧೇನುವನ್ನು ಈತನು
ಬೇಡಿದನು; ವಸಿಷ್ಠನು ಒಪ್ಪಲಿಲ್ಲ. ಆಗ ವಿಶ್ವಾಮಿತ್ರನು ಬಲಾತ್ಕಾರದಿಂದ
ಕಾಮಧೇನುವನ್ನು ಎಳೆದೊಯ್ಯುವಾಗ ಆ ಹಸುವಿನಿಂದ ಶಕ್ತ, ಬರ್ಬರಾದಿಗಳ
ಸೈನ್ಯವು ಪ್ರಕಟವಾಯಿತು. ಆ ಸೈನ್ಯವು ವಿಶ್ವಾಮಿತ್ರನನ್ನು ಸೋಲಿಸಿತು. ಆಗ ಕ್ಷಾತ್ರ
ತೇಜಕ್ಕಿಂತ ಬ್ರಹ್ಮತೇಜವೇ ಶ್ರೇಷ್ಠವೆಂದು ಅರಿತು ವಿಶ್ವಾಮಿತ್ರನು ಅದನ್ನು
ಅಲ್ಲಗಳೆಯಲು ಉಗ್ರತಪವನ್ನಾಚರಿಸಿದನು. ಬ್ರಹ್ಮರ್ಷಿಪದವನ್ನು ಪಡೆದುಕೊಂಡು
ಅದಕ್ಕೆ ವಸಿಷ್ಠನಿಂದಲೂ ಮಾನ್ಯತೆಯನ್ನು ದೊರಕಿಸಿಕೊಂಡನು. ವಿಶ್ವಾಮಿತ್ರನು
ವಸಿಷ್ಠರ ಮಕ್ಕಳಿಗೆ ಶಾಪಕೊಟ್ಟಂತೆ ತನ್ನ ಮಕ್ಕಳಿಗೂ ಶಾಪವನ್ನು ಕೊಡಲು
ಹಿಂಜರಿಯಲಿಲ್ಲ. ಸದೇಹಸ್ವರ್ಗವನ್ನು ಸೇರುವ ಇಚ್ಛೆ ತ್ರಿಶಂಕುವಿನದಾಗಿತ್ತು.
ಅದನ್ನು ಹೊಂದಲು ಇವನು ಯಜ್ಞವನ್ನು ಮಾಡಿದನು. ವಿಶ್ವಾಮಿತ್ರನು ತ್ರಿಶಂಕುವನ್ನು
ಸ್ವರ್ಗಕ್ಕೆ ಕಳುಹಿದನು; ಆದರೆ ತ್ರಿಶಂಕುವನ್ನು ಅಲ್ಲಿಂದ ಕೆಳಗೆ ತಳ್ಳಲಾಯಿತು.
ಹೀಗೆ ವಿಶ್ವಾಮಿತ್ರನ ಪ್ರಯತ್ನ ಸಫಲವಾಗಲಿಲ್ಲ. ಅಂಬರೀಷನು ಶುನಃಶೇಪನನ್ನು
ಯಜ್ಞಪಶುವೆಂದುಕೊಂಡನು. ಆತನನ್ನು ಕರೆದೊಯ್ಯುತ್ತಿದ್ದಾಗ ಸೋದರ
ಮಾವನಾದ ವಿಶ್ವಾಮಿತ್ರನನ್ನು ಶುನಃಶೇಪನು 'ಬಿಡಿಸು!' ಎಂದು ಪ್ರಾರ್ಥಿಸಿಕೊಂಡನು.
ಆಗ ಸ್ವಂತದ ಒಬ್ಬ ಮಗನನ್ನು ಬಲಿಕೊಟ್ಟು ಶುನಃಶೇಪನನ್ನು ಬದುಕಿಸುವ
ವಿಶ್ವಾಮಿತ್ರನ ಪ್ರಯತ್ನ ವಿಫಲಗೊಂಡಿತು. ಏಕೆಂದರೆ ಆತನ ಮಗನು ಬಲಿಹೋಗಲು