ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೮೨ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಶಪಥ ಮಾಡಿ ಸೀತೆಯು ಪರಿಶುದ್ದಳು ಎಂದು ಹೇಳಿದನು. ನಂತರ ಸೀತೆಯು ಕರಗಳೆರಡನ್ನೂ ಜೋಡಿಸಿ ಭೂದೇವಿಯನ್ನು ಪ್ರಾರ್ಥಿಸಿದಳು. 'ರಘೋತ್ತಮ ರಾಮನನ್ನುಳಿದು ನಾನು ಬೇರೆ ಪುರುಷನನ್ನು ಮನಸ್ಸಿನಲ್ಲಿ ಸಹ ತಂದಿಲ್ಲ; ಮನಸ್ಸಿನಿಂದ, ಶರಿರದಿಂದ ಮತ್ತು ನುಡಿಯಿಂದ ನಾನು ಸತತವಾಗಿ ರಾಮನನ್ನೇ ಆರಾಧಿಸಿದ್ದರೆ, ರಾಮನನ್ನು ಬಿಟ್ಟು ಬೇರೆ ಯಾವ ಪುರುಷನ ಪರಿಚಯವೂ ನನಗಿರುವದಿಲ್ಲ ಎಂಬ ನನ್ನ ನುಡಿಯು ಸತ್ಯವಾಗಿದ್ದರೆ ವಿಷ್ಣುಪತ್ನಿಯಾದ ಈ ಭೂದೇವಿಯು ನನ್ನನ್ನು ನನ್ನ ಒಡಲಲ್ಲಿ ಅಡಗಿಸಲಿ!' ಎಂದು ಶಪಥ ಮಾಡಿ ತನ್ನ ಉಜ್ವಲಚಾರಿತ್ರ್ಯವನ್ನು ಸಿದ್ಧಪಡಿಸಿದಳು. ಕರ್ತವ್ಯನಿಷ್ಠೆಯಲ್ಲಿ ಸೀತೆಯು ರಾಮನಿಗಿಂತ ಎಳ್ಳಷ್ಟೂ ಕಡಿಮೆ ಇರಲಿಲ್ಲ. ೧೪೬, ಸುಕೇತು ಈತನು ಮಹಾನ್ ಯಕ್ಷನಾಗಿದ್ದನು. ತಾಟಕಿ ಇವನ ಮಗಳಾಗಿದ್ದಳು. ಇನ್ನೊಬ್ಬ ಸುಕೇತುವಿನ ಉಲ್ಲೇಖವು ಕಂಡುಬರುತ್ತದೆ. ಇವನು ಸುಬಾಹುವಿನ ಸಹೋದರನಾಗಿದ್ದನು. ಅಶ್ವಮೇಧದ ಸಮಯದಲ್ಲಿ ಶತ್ರುಘ್ನ ಹಾಗೂ ಸುಬಾಹು ಇವರಲ್ಲಿ ಯುದ್ಧವು ನಡೆದಾಗ ಸುಕೇತು ಭಾಗವಹಿಸಿದ್ದನು. ಗದಾಯುದ್ದದಲ್ಲಿ ಪ್ರವೀಣನೀತ. ೧೪೭. ಸುರೇಶ ಈತನು ಸಾಲಕಟಂಕಟಾ ಮತ್ತು ವಿದ್ಯುತ್ತೇಶ ಎಂಬ ರಾಕ್ಷಸನ ಮಗನು, ಗರ್ಭಾವಸ್ಥೆಯಲ್ಲಿದ್ದಾಗಲೇ ಈತನ ತಾಯಿ ಇವನನ್ನು ತ್ಯಜಿಸಿದಳು. ಆಗ ಶಿವಪಾರ್ವತಿಯರು ಇವನನ್ನು ರಕ್ಷಿಸಿ ಪಾಲನೆ ಪೋಷಣೆ ಮಾಡಿದರು. ಶಿವನಿಂದ ಈತನಿಗೆ ಒಂದು ವಿಮಾನ ದೊರೆತ ನಂತರ ಈತನ ಅನಿರ್ಬಂದ ಸಂಚಾರವು ಎಲ್ಲೆಡೆಯಲ್ಲಿ ನಡೆಯಿತು. ಗ್ರಾಮಣೀ ಗಂಧರ್ವನ ಹತ್ಯೆಯಾದ ದೇವವತಿಯೊಡನೆ ಇವನ ವಿವಾಹವಾಗಿತ್ತು. ಈ ದಂಪತಿಗಳಿಂದ ಮಾಲ್ಯವನ, ಮಾಲಿ, ಸುಮಾಲಿ ಎಂಬ ಮುವರು ಪುತ್ರರಾದರು. ೧೪೮, ಸುಗ್ರೀವ ಸೂರ್ಯನಿಂದ ಮತ್ತು ಋಕ್ಷರಜಸ್ ಎಂಬ ವಾನರಯಿಂದ (ಅವಳ ಕತ್ತಿನಿಂದ) ಈತನು ಜನ್ಮ ಪಡೆದಿದ್ದರಿಂದ ಈತನಿಗೆ ಸುಗ್ರೀವನೆಂಬ ಹೆಸರು