ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಶಾಪಾದಪಿ ವರಾದಪಿ!

೨೭

ಕೆಲವೊಮ್ಮೆ ನಂತರದ ಜನ್ಮದಲ್ಲಿ ಈ ಪರಿಣಾಮಗಳು ಕಂಡು ಬರಬಹುದು. ಗೌತಮಋಷಿಯ ಶಾಪದಿಂದ ಇಂದ್ರನ ವೃಷಣಗಳು ಬಿದ್ದುಹೋದವು. ವಸಿಷ್ಠ ಪುತ್ರರ ಶಾಪದಿಂದ ತ್ರಿಶಂಕುವು ಒಂದೇ ರಾತ್ರಿಯಲ್ಲಿ ಚಾಂಡಾಲಯೋನಿಗೆ ಸೇರಿದನು. ದಂಡರಾಜನಿಗೆ ಹಾಗೂ ದಂಡಕಾರಣ್ಯಕ್ಕೆ ಭಾರ್ಗವನು ಕೊಟ್ಟ ಶಾಪದ ಪರಿಣಾಮವು ಏಳು ದಿನಗಳಲ್ಲಿ ಉಂಟಾಯಿತು. ವಸಿಷ್ಠ ಪುತ್ರರಿಗೆ ವಿಶ್ವಾಮಿತ್ರನು ಕೊಟ್ಟ ಶಾಪದ ಪರಿಣಾಮದ ಕಾಲಾವಧಿಯು ಏಳು ಶತ ಜನ್ಮದವರೆಗೆ ಇತ್ತು. ಶಾಪ ಕೊಟ್ಟ ದಿನದಿಂದಲೇ ಅದರ ಕಾಲಾವಧಿಗೆ ಶುರುವಾಯಿತು.


       ಅದ್ಯ ತೇ ಕಾಲಪಾಶೇನ ನೀತಾ ವೈವಸ್ವತಕ್ಷಯಮ್ ‖೧೮‖
       ಸಪ್ತಜಾತಿಶತಾನ್ಯೇವ ಮೃತಪಾಃ ಸಂಭವಂತು ತೇ ‖೧೯‖

ಬಾಲ. ೫೯

ದುರ್ವಾಸನು ಶಾಪವನ್ನು ನುಡಿದಿದ್ದರೆ ಸಂತತಿಗೆ ಹಾನಿ ತಟ್ಟಬಹುದಿತ್ತು. ಶಾಪದ ಪರಿಣಾಮ-ಶಕ್ತಿಯ ಬಗ್ಗೆ ವೆಸ್ಟರ್‌ಮಾರ್ಕ್ನು ಹೀಗೆ ಹೇಳಿದ್ದಾನೆ:

"Purely magical power, independent of any superhuman will...is rooted in the close association between the wish, more particularly the spoken wish and the idea of its fulfilment. The wish is looked upon in the light of energy which may be transfered by material contact or by the eye or by means of speech to the person concerned then becomes a fact."

ಶಾಪ ಕೊಡುವ ಅರ್ಹತೆಯು ತಪಸ್ಸಿನಿಂದ ಉಂಟಾಗುವಂತೆ ಶುದ್ಧ ವರ್ತನೆಯಿಂದಲೂ ಉಂಟಾಗುತ್ತದೆ. ವ್ರತಪ್ರಭಾವದಿಂದ ಪತಿವ್ರತೆಯ ನುಡಿ ಸುಳ್ಳಾಗುವುದಿಲ್ಲ. ವ್ರತಪಾಲನೆಯಿಂದ ಆತ್ಮಬಲ ವರ್ಧಿಸುತ್ತದೆ. ಪೂರ್ವಕಾಲೀನ ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಗೆ ಗೌರವವಿತ್ತು. ಅವರನ್ನು ಭೂಸುರರೆಂದು ಗೌರವಿಸುತ್ತಿದ್ದರು. ಅವರು ಆಡಿದ ಮಾತು ಸುಳ್ಳಾಗುತ್ತಿರಲಿಲ್ಲ. ಬ್ರಾಹ್ಮಣ್ಯದ ಪಾಲನೆಯಿಂದ ಇಬ್ಬರು ಬ್ರಾಹ್ಮಣರು ನೃಗರಾಜನಿಗೆ ಶಪಿಸಲು ಶಕ್ತರಾದರು. ತಂದೆ-ತಾಯಿ, ಗುರುಗಳು, ಜ್ಞಾನವಂತರು, ಶ್ರೇಷ್ಠರು, ಹಿರಿಯರು ಆಡಿದ ನುಡಿಯಲ್ಲಿ ಶಾಪದ ಸಾಮರ್ಥ್ಯವಿರುವ ಸಾಧ್ಯತೆ ಇದೆ. ಕೊನೆಯುಸಿರಿನಲ್ಲಿದ್ದ

——————

೯. Encyclopaedia of Religion and Ethics, p. 366.